Dhanteras: ಧಂತೇರಸ್‌ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಾಗಲಿದೆ ಈ 5 ಸ್ಮಾರ್ಟ್‌ಫೋನ್‌ಗಳು

Fri, 10 Nov 2023-11:31 am,

ನೀವು ಈ ಧಂತೇರಸ್‌ನಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಲು ಯೋಚಿಸುತ್ತಿದ್ದರೆ ಫ್ಲಿಪ್‌ಕಾರ್ಟ್‌ನಲ್ಲಿ ದುಬಾರಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ. ಆ ಸ್ಮಾರ್ಟ್‌ಫೋನ್‌ಗಳೆಂದರೆ... 

69,900 ರೂ. ಮೌಲ್ಯದ ಆಪಲ್ ಐಫೋನ್ 14 ಫ್ಲಿಪ್‌ಕಾರ್ಟ್‌ನಲ್ಲಿ  57,999 ರೂ.ಗಳಿಗೆ ಲಭ್ಯವಿದೆ. ಆಕ್ಸಿಸ್ ಬ್ಯಾಂಕ್  ಕ್ರೆಡಿಟ್ ಕಾರ್ಡ್, ಎಕ್ಸ್ ಚೇಂಜ್ ಆಫರ್ ಗಳ ಪ್ರಯೋಜನಗಳನ್ನು ಪಡೆಯುವ ಮೂಲಕ ನೀವು ಈ ಫೋನ್ ಅನ್ನು ಕೇವಲ 42,000 ರೂ.ಗಳಿಗೆ ನಿಮ್ಮದಾಗಿಸಬಹುದು. 

85,999ರೂ. ಬೆಲೆಯ SAMSUNG Galaxy S22 5G ಫ್ಲಿಪ್‌ಕಾರ್ಟ್‌ನಲ್ಲಿ 39,999 ರೂ.ಗಳಿಗೆ ಲಭ್ಯವಾಗಲಿದೆ. ನೀವು ಇದರಲ್ಲಿ ಲಭ್ಯವಿರುವ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಆಫರ್ ಮತ್ತು ವಿನಿಮಯ ಕೊಡುಗೆಗಳನ್ನು ಬಳಸಿದರೆ ಇನ್ನೂ ಕಡಿಮೆ ಬೆಲೆಗೆ ಫೋನ್ ನಿಮ್ಮದಾಗಲಿದೆ. 

Realme 11 pro 5gಯ ಮಾರುಕಟ್ಟೆ ಬೆಲೆ 25,999ರೂ.ಗಳು. ಆದರೆ, ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ 21,999 ರೂ.ಗಳಿಗೆ ಲಭ್ಯವಿದೆ. ಎಸ್‌ಬಿ‌ಐ ಕ್ರೆಡಿಟ್ ಕಾರ್ಡ್‌ ಆಫರ್, ಎಕ್ಸ್ ಚೇಂಜ್ ಆಫರ್ ಪ್ರಯೋಜನವನ್ನು ಪಡೆದರೆ ಇದರ ಬೆಲೆ ಇನ್ನೂ ಕಡಿಮೆ ಆಗಲಿದೆ. 

49,999 ರೂ. ಬೆಲೆಯ ನಥಿಂಗ್ ಫೋನ್ (2) ಫ್ಲಿಪ್‌ಕಾರ್ಟ್‌ನಲ್ಲಿ ಬರೋಬ್ಬರಿ 10 ಸಾವಿರ ರೂ.ಗಳ ರಿಯಾಯಿತಿಯೊಂದಿಗೆ ಲಭ್ಯವಿದೆ. ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ ಮತ್ತು ವಿನಿಮಯ ಕೊಡುಗೆ ಪ್ರಯೋಜನವನ್ನು ಪಡೆಯಲು ಶಕ್ತರಾದರೆ ಈ ಫೋನ್ ಅನ್ನು ಇನ್ನೂ 10 ಸಾವಿರ ಕಡಿಮೆ ದರದಲ್ಲಿ ಖರೀದಿಸಬಹುದು. 

25,999ರೂ. ಬೆಲೆಯ POCO X5 Pro 5G  ಫ್ಲಿಪ್‌ಕಾರ್ಟ್‌ನಲ್ಲಿ 18,499 ರೂ.ಗಳಿಗೆ ಲಭ್ಯವಿದೆ. ನೀವು ಕ್ರೆಡಿಟ್ ಕಾರ್ಡ್ ಆಫರ್ ಮತ್ತು ವಿನಿಮಯ ಕೊಡುಗೆಗಳ ಪ್ರಯೋಜನವನ್ನು ಪಡೆಯುವ ಮೂಲಕ ಇನ್ನೂ ಕಡಿಮೆ ಬೆಲೆಗೆ ಈ ಸ್ಮಾರ್ಟ್‌ಫೋನ್‌ ಅನ್ನು ನೀವು ನಿಮ್ಮದಾಗಿಸಬಹುದು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link