ಹೃದಯಾಘಾತವಾಗುವ ಒಂದು ವಾರಕ್ಕೂ ಮುನ್ನ ಈ 5 ಲಕ್ಷಣಗಳು ಕಾಣಿಸಿಕೊಳ್ಳುತ್ತವೆ..! ನಿರ್ಲಕ್ಷಿಸಿದರೇ ಅಪಾಯ ಕಟ್ಟಿಟ್ಟ ಬುತ್ತಿ!!
ಈ ಹೃದಯಾಘಾತಕ್ಕು ಮುನ್ನ ದೇಹವು ಈ ಬಗ್ಗೆ ನಮ್ಮನ್ನು ಎಚ್ಚರಿಸುತ್ತದೆ. ಇವುಗಳ ಆಧಾರದಲ್ಲಿ ಜಾಗರೂಕರಾಗಿದ್ದರೆ ಸಮಸ್ಯೆಯಿಂದ ಹೊರಬರಬಹುದು. ಹೃದಯಾಘಾತವಾಗುವ ಒಂದು ವಾರದ ಮೊದಲು ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎನ್ನುತ್ತಾರೆ ತಜ್ಞರು.
ಹೃದಯಾಘಾತವಾಗುವ ಒಂದು ವಾರ ಮೊದಲು ಎದೆನೋವು ಬರುತ್ತದೆ. ಆದರೆ ಸಾಮಾನ್ಯವಾಗಿ ಅಸಿಡಿಟಿಯಂತಹ ಸಮಸ್ಯೆಗಳು ಬಂದಾಗ ಎದೆನೋವು ಸಹ ಹೆಚ್ಚಾಗುತ್ತದೆ.. ಆದರೆ ಹೃದಯಾಘಾತದ ಸಮಯದಲ್ಲಿ ಬರುವ ಎದೆ ನೋವು ತುಂಬಾ ಅಸಹನೀಯವಾಗಿಸುತ್ತದೆ.
ಹೃದಯಾಘಾತಕ್ಕೆ ಮುನ್ನ ಕಂಡುಬರುವ ಲಕ್ಷಣಗಳಲ್ಲಿ ಭುಜ ಮತ್ತು ತೋಳುಗಳಲ್ಲಿ ನೋವು ಕೂಡ ಕಾಣಿಸಬಹುದು ಎನ್ನುತ್ತಾರೆ ತಜ್ಞರು. ಎಡ ಭುಜದ ಮೇಲ್ಭಾಗದಲ್ಲಿ ತೀವ್ರವಾದ ನೋವು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಮತ್ತು ಸಂಬಂಧಿತ ಪರೀಕ್ಷೆಗಳಿಗೆ ಒಳಗಾಗಬೇಕು ಎಂದು ತಜ್ಞರು ಹೇಳುತ್ತಾರೆ.
ಕೆಲವು ಸಂದರ್ಭಗಳಲ್ಲಿ ಅಂಗೈ ಹಾಗೂ ಕೈಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಅಸಹನೀಯ ನೋವು ಒಂದು ವಾರಕ್ಕಿಂತ ಹೆಚ್ಚು ಕಾಲ ಇದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಸಂಬಂಧಿತ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ.
ಹೃದಯಾಘಾತಕ್ಕೂ ಬೆನ್ನು ನೋವಿಗೂ ಸಂಬಂಧವಿದೆ ಎನ್ನುತ್ತಾರೆ ತಜ್ಞರು. ಯಾವುದೇ ಶ್ರಮವಿಲ್ಲದೇ ಬೆನ್ನು ನೋವಿನಿಂದ ಬಳಲುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.
ದವಡೆಯಲ್ಲಿ ನೋವು ಹೃದಯಾಘಾತಕ್ಕೆ ಮುಂಚಿತವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ವಿಶೇಷವಾಗಿ ಎಡ ದವಡೆಯಲ್ಲಿ ಹಠಾತ್ ನೋವು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಸಂಬಂಧಿತ ಪರೀಕ್ಷೆಗಳಿಗೆ ಒಳಗಾಗಲು ತಜ್ಞರು ಸಲಹೆ ನೀಡುತ್ತಾರೆ.