ನಾಯಕತ್ವ ಸೇರಿದಂತೆ ಈ ವಿಶೇಷ ಗುಣಗಳನ್ನು ಹೊಂದಿರುತ್ತಾರೆ ಈ ರಾಶಿಯವರು

Tue, 25 Jan 2022-12:23 pm,

ಮಂಗಳ ಮೇಷ ರಾಶಿಯ ಅಧಿಪತಿ. ಈ ರಾಶಿಯವರು ಅದ್ಬುತ ಧೈರ್ಯವಂತರಾಗಿರುತ್ತಾರೆ. ಇವರು ಯಾವುದೇ ರೀತಿಯ ಅಪಾಯವನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಈ ರಾಶಿಯಲ್ಲಿ ಹುಟ್ಟಿದವರು, ದಕ್ಷ ರಾಜಕಾರಣಿಗಳು, ಆಡಳಿತಗಾರರು, ಅಧಿಕಾರಿಗಳು, ವ್ಯವಸ್ಥಾಪಕರಾಗುತ್ತಾರೆ.   ಇದಲ್ಲದೇ ಮೇಷ ರಾಶಿಯವರು ರಕ್ಷಣಾ ಕ್ಷೇತ್ರದಲ್ಲೂ ಸಾಕಷ್ಟು ಹೆಸರು ಗಳಿಸುತ್ತಾರೆ. ಈ ಜನರಲ್ಲಿ ನಾಯಕತ್ವ ಗುಣಗಳಿರುತ್ತವೆ.  

ಸೂರ್ಯ ಸಿಂಹ ರಾಶಿಯ ಅಧಿಪತಿ. ಅವರು ಅದ್ಭುತ ನಾಯಕತ್ವದ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ರಾಶಿಯ ಜನರು ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ.  ಈ ಜನರು ತಮ್ಮ ಇಚ್ಛೆಯಂತೆಯೇ ನಡೆದುಕೊಳ್ಳುತ್ತಾರೆ. ಮತ್ತು ಒರಟು ಸ್ವಭಾವದವರಾಗಿರುತ್ತಾರೆ. 

ವೃಶ್ಚಿಕ ರಾಶಿಯ ಅಧಿಪತಿ ಕೂಡಾ ಮಂಗಳ. ಈ ರಾಶಿಯವರು ಅತ್ಯಂತ ಶಕ್ತಿಶಾಲಿಗಳಾಗಿರುತ್ತಾರೆ.  ಮಾತ್ರವಲ್ ಜಗಳ ಮಾಡುವುದರಲ್ಲೂ ಇವರು ಎತ್ತಿದ ಕೈ. ಉತ್ತಮ ನಾಯಕರಾಗುವ ಜೊತೆಗೆ ಇವರು ಸ್ವಾರ್ಥಿಗಳು ಕೂಡಾ. ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಪಡೆಯುವುದು ಇವರಿಗೆ ಬಹಳ ಸುಲಭ.  

ಶನಿ  ಮಕರ ರಾಶಿಯ ಅಧಿಪತಿ. ಈ ರಾಶಿಚಕ್ರದ ಜನರು, ಕಠಿಣ ಪರಿಶ್ರಮಿಗಳು ಮತ್ತು ಪ್ರಾಮಾಣಿಕರು.  ಈ ರಾಶಿಯವರು ಯಾವುದಾದರೂ ಕೆಲಸ ಮಾಡಲು ನಿರ್ಧರಿಸಿದರೆ, ಮಾಡಿಯೇ ಮುಗಿಸುತ್ತಾರೆ. ಈ ರಾಶಿಯವರು ನ್ಯಾಯವಾದಿಗಳು. ಇತರರ ಪರವಾಗಿ ಹೋರಾಟದಲ್ಲಿ ಇವರು ಸದಾ ಮುಂದಿರುತ್ತಾರೆ.

ಕುಂಭ ರಾಶಿಯ ಅಧಿಪತಿ ಕೂಡಾ ಶನಿ. ಈ ರಾಶಿಯ ಜನರು, ತಮ್ಮ ಸ್ವಂತ ಸಾಮ್ರಾಜ್ಯವನ್ನು ಬೆಳೆಸುವಷ್ಟು ಶಕ್ತಿಶಾಲಿಗಳಾಗಿರುತ್ತಾರೆ. ಅವರು ಯಾವುದೇ ಕ್ಷೇತ್ರಕ್ಕೆ ಹೋದರೂ, ತಮ್ಮ ಕಠಿಣ ಪರಿಶ್ರಮದಿಂದ ಉನ್ನತ ಸ್ಥಾನಕ್ಕೆ ಏರುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link