ನಾಯಕತ್ವ ಸೇರಿದಂತೆ ಈ ವಿಶೇಷ ಗುಣಗಳನ್ನು ಹೊಂದಿರುತ್ತಾರೆ ಈ ರಾಶಿಯವರು
ಮಂಗಳ ಮೇಷ ರಾಶಿಯ ಅಧಿಪತಿ. ಈ ರಾಶಿಯವರು ಅದ್ಬುತ ಧೈರ್ಯವಂತರಾಗಿರುತ್ತಾರೆ. ಇವರು ಯಾವುದೇ ರೀತಿಯ ಅಪಾಯವನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಈ ರಾಶಿಯಲ್ಲಿ ಹುಟ್ಟಿದವರು, ದಕ್ಷ ರಾಜಕಾರಣಿಗಳು, ಆಡಳಿತಗಾರರು, ಅಧಿಕಾರಿಗಳು, ವ್ಯವಸ್ಥಾಪಕರಾಗುತ್ತಾರೆ. ಇದಲ್ಲದೇ ಮೇಷ ರಾಶಿಯವರು ರಕ್ಷಣಾ ಕ್ಷೇತ್ರದಲ್ಲೂ ಸಾಕಷ್ಟು ಹೆಸರು ಗಳಿಸುತ್ತಾರೆ. ಈ ಜನರಲ್ಲಿ ನಾಯಕತ್ವ ಗುಣಗಳಿರುತ್ತವೆ.
ಸೂರ್ಯ ಸಿಂಹ ರಾಶಿಯ ಅಧಿಪತಿ. ಅವರು ಅದ್ಭುತ ನಾಯಕತ್ವದ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ರಾಶಿಯ ಜನರು ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ. ಈ ಜನರು ತಮ್ಮ ಇಚ್ಛೆಯಂತೆಯೇ ನಡೆದುಕೊಳ್ಳುತ್ತಾರೆ. ಮತ್ತು ಒರಟು ಸ್ವಭಾವದವರಾಗಿರುತ್ತಾರೆ.
ವೃಶ್ಚಿಕ ರಾಶಿಯ ಅಧಿಪತಿ ಕೂಡಾ ಮಂಗಳ. ಈ ರಾಶಿಯವರು ಅತ್ಯಂತ ಶಕ್ತಿಶಾಲಿಗಳಾಗಿರುತ್ತಾರೆ. ಮಾತ್ರವಲ್ ಜಗಳ ಮಾಡುವುದರಲ್ಲೂ ಇವರು ಎತ್ತಿದ ಕೈ. ಉತ್ತಮ ನಾಯಕರಾಗುವ ಜೊತೆಗೆ ಇವರು ಸ್ವಾರ್ಥಿಗಳು ಕೂಡಾ. ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಪಡೆಯುವುದು ಇವರಿಗೆ ಬಹಳ ಸುಲಭ.
ಶನಿ ಮಕರ ರಾಶಿಯ ಅಧಿಪತಿ. ಈ ರಾಶಿಚಕ್ರದ ಜನರು, ಕಠಿಣ ಪರಿಶ್ರಮಿಗಳು ಮತ್ತು ಪ್ರಾಮಾಣಿಕರು. ಈ ರಾಶಿಯವರು ಯಾವುದಾದರೂ ಕೆಲಸ ಮಾಡಲು ನಿರ್ಧರಿಸಿದರೆ, ಮಾಡಿಯೇ ಮುಗಿಸುತ್ತಾರೆ. ಈ ರಾಶಿಯವರು ನ್ಯಾಯವಾದಿಗಳು. ಇತರರ ಪರವಾಗಿ ಹೋರಾಟದಲ್ಲಿ ಇವರು ಸದಾ ಮುಂದಿರುತ್ತಾರೆ.
ಕುಂಭ ರಾಶಿಯ ಅಧಿಪತಿ ಕೂಡಾ ಶನಿ. ಈ ರಾಶಿಯ ಜನರು, ತಮ್ಮ ಸ್ವಂತ ಸಾಮ್ರಾಜ್ಯವನ್ನು ಬೆಳೆಸುವಷ್ಟು ಶಕ್ತಿಶಾಲಿಗಳಾಗಿರುತ್ತಾರೆ. ಅವರು ಯಾವುದೇ ಕ್ಷೇತ್ರಕ್ಕೆ ಹೋದರೂ, ತಮ್ಮ ಕಠಿಣ ಪರಿಶ್ರಮದಿಂದ ಉನ್ನತ ಸ್ಥಾನಕ್ಕೆ ಏರುತ್ತಾರೆ.