ಈ ರಾಶಿಯವರಿಗೆ ಫೆಬ್ರವರಿಯಲ್ಲಿ ಎದುರಾಗಲಿದೆ ಸಂಕಷ್ಟಗಳ ಸರಮಾಲೆ, ಸತತವಾಗಿ ಕಾಡಲಿದ್ದಾನೆ ಶನಿದೇವ
ಮಂಗಳನು ಮೇಷ ರಾಶಿಯ ಅಧಿಪತಿಯಾಗಿದ್ದು ಶನಿ ಮತ್ತು ಮಂಗಳನ ನಡುವೆ ದ್ವೇಷವಿದೆ. ಶನಿಗ್ರಹವು ಮುಂದಿನ 1 ತಿಂಗಳವರೆಗೆ ಈ ರಾಶಿಯವರಿಗೆ ತೊಂದರೆ ನೀಡಬಹುದು. ಕೆಲಸದ ಸ್ಥಳದಲ್ಲಿ ಅತ್ಯಂತ ಜಾಗರೂಕರಾಗಿರಿ. ಯಾವುದೇ ರೀತಿಯ ಒತ್ತಡ ತೆಗೆದುಕೊಳ್ಳುವುದನ್ನು ತಪ್ಪಿಸಿ.
ಕಟಕ ರಾಶಿಯವರಿಗೆ, ಈ ಸಮಯವು ಆರೋಗ್ಯ ಮತ್ತು ವೃತ್ತಿಜೀವನದಲ್ಲಿ ಕಷ್ಟಕರವಾಗಿರುತ್ತದೆ. ಅದರಲ್ಲೂ ಉದ್ಯೋಗ ಮಾಡುವವರು ಈ ಸಮಯದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಮಿಥುನ ರಾಶಿಯವರಿಗೆ ಶನಿಯ ಅಸ್ತವಾಗಿರುವುದು ಅಶುಭವಾಗಿರುತ್ತದೆ. ಇದೀಗ ಈ ರಾಶಿಯವರೆಗೆ ಎರಡೂವರೆ ಶನಿ ದೆಸೆ ಬೇರೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಈ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು.
ಕನ್ಯಾ ರಾಶಿಯವರಿಗೆ ಈ ಸಮಯದಲ್ಲಿ ಕೆಲಸಕ್ಕೆ ಅಡ್ಡಿಯಾಗಲಿದೆ. ಕೆಲಸದ ಸ್ಥಳದಲ್ಲಿ ಸಮಸ್ಯೆಗಳು ಎದುರಾಗಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗದೆ ಚಿಂತಿತರಾಗುವಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಶನಿಯ ಅಸ್ತದ ಕಾರಣದಿಂದಾಗಿ ತುಲಾ ರಾಶಿಯವರೂ ಗೌರವ ಕಳೆದುಕೊಳ್ಳಬಹುದು. ವಿಶೇಷವಾಗಿ ಕೆಲಸದ ಸ್ಥಳದಲ್ಲಿ ಜಾಗರೂಕರಾಗಿರಿ. ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು. ಕುಟುಂಬದಲ್ಲಿಯೂ ವಿರಸ ಉಂಟಾಗಬಹುದು.