Alia To Deepika : ವಿದೇಶದಲ್ಲಿ ಜನಿಸಿ ಭಾರತೀಯ ಸಿನಿರಂಗದಲ್ಲಿ ಮಿಂಚುತ್ತಿರುವ ನಟಿಯರು ಇವರು

Mon, 14 Nov 2022-10:19 am,

Sunny Leone : ತನ್ನ ಅದ್ಭುತ ನಟನೆ ಮತ್ತು ಸೌಂದರ್ಯದಿಂದಾಗಿ ಸನ್ನಿ ಲಿಯೋನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸನ್ನಿ ಅನೇಕ ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈಗ ಅವರು ಸೌತ್ ಚಿತ್ರಗಳಲ್ಲಿಯೂ ಮಿಂಚುತ್ತಿದ್ದಾರೆ. ಸನ್ನಿ ಲಿಯೋನ್ ಅವರ ಪೋಷಕರು ಭಾರತೀಯರು. ಆದರೆ ಸನ್ನಿ ಕೆನಡಾದ ಸರ್ನಿಯಾದಲ್ಲಿ ಜನಿಸಿದರು. (ಚಿತ್ರ ಕೃಪೆ: Instagram)

Lisa Haydon : ಲಿಸಾ ತಮ್ಮ ವೃತ್ತಿಜೀವನವನ್ನು ಆಂಕರ್ ಮತ್ತು ಟಿವಿ ಹೋಸ್ಟ್ ಆಗಿ ಪ್ರಾರಂಭಿಸಿದರು. ಇದಾದ ನಂತರ ಹಲವು ಚಿತ್ರಗಳಲ್ಲಿ ಕೆಲಸ ಮಾಡಿ ತನ್ನ ಗ್ಲಾಮರ್ ಹಾಗೂ ವಿಶಿಷ್ಟ ಶೈಲಿಯಿಂದ ಎಲ್ಲರ ಮನ ಗೆದ್ದಳು. ಇವರು ಆಸ್ಟ್ರೇಲಿಯಾದಲ್ಲಿ ಜನಿಸಿ ನಂತರ ಚೆನ್ನೈನಲ್ಲಿ ಬೆಳೆದರು. (ಚಿತ್ರ ಕೃಪೆ: Instagram)

Katrina Kaif : ಬಾಲಿವುಡ್ ಕ್ವೀನ್ ಕತ್ರಿನಾ ಕೈಫ್ ಚಿತ್ರೋದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಬೆಳ್ಳಿತೆರೆಯ ಮೇಲೆ ಮಿಂಚುತ್ತಿರುವ ಬೆಡಗಿ. ಈ ಸುಂದರ ಬಾಲಿವುಡ್ ನಟಿ ಭಾರತದಲ್ಲಿ ಹುಟ್ಟಿಲ್ಲ. ಆದರೆ ಆಕೆ ಜನಿಸಿದ್ದು ಹಾಂಗ್ ಕಾಂಗ್‌ನಲ್ಲಿ. ಪೋಷಕರು ಬ್ರಿಟಿಷ್ ಪ್ರಜೆಗಳು. ತಂದೆ ಕಾಶ್ಮೀರಿ ಮೂಲದವರು. (ಚಿತ್ರ ಕೃಪೆ: Instagram)

Deepika Padukone : ಬಾಲಿವುಡ್‌ನ ಯಶಸ್ವಿ ನಟಿ ಮತ್ತು ಜಾಗತಿಕ ಐಕಾನ್ ದೀಪಿಕಾ ಪಡುಕೋಣೆ ಆನ್-ಸ್ಕ್ರೀನ್ ಮತ್ತು ಆಫ್-ಸ್ಕ್ರೀನ್ ಎರಡರಲ್ಲೂ ತಮ್ಮ ಕೆಲಸದಿಂದ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ದೀಪಿಕಾ ಒಬ್ಬ ಬಹುಮುಖಿ ಪ್ರತಿಭೆ. ಈ ಬಾಲಿವುಡ್ ಬೆಡಗಿ ಭಾರತದಲ್ಲಿ ಹುಟ್ಟಿಲ್ಲ ಮತ್ತು ಅವರು ಡೆನ್ಮಾರ್ಕ್‌ನ ಕೋಪನ್ ಹ್ಯಾಗನ್ ನಗರದಲ್ಲಿ ಜನಿಸಿದರು. (ಚಿತ್ರ ಕೃಪೆ: Instagram)

Alia Bhatt : ತನ್ನ ಆಕರ್ಷಕ ವ್ಯಕ್ತಿತ್ವ ಮತ್ತು ಹಿಟ್ ಚಿತ್ರಗಳನ್ನು ನೀಡುತ್ತಾ ಸದ್ಯ ತಾಯ್ತನವನ್ನು ಎಂಜಾಯ್‌ ಮಾಡುತ್ತಿರುವ ಆಲಿಯಾ ಭಟ್ ಕಡಿಮೆ ಅವಧಿಯಲ್ಲಿ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ. ಜನಪ್ರಿಯ ಚಿತ್ರ ನಿರ್ಮಾಪಕ ಮಹೇಶ್ ಭಟ್ ಅವರ ಪುತ್ರಿ ಆಲಿಯಾ ಭಟ್ ಕೂಡ ಭಾರತದಲ್ಲಿ ಹುಟ್ಟಿಲ್ಲ. ಅವರು ಲಂಡನ್‌ನಲ್ಲಿ ಜನಿಸಿದರು ಮತ್ತು ಅವರ ತಾಯಿ ಸೋನಿ ರಜ್ಡಾನ್ ಅವರಂತೆ ಬ್ರಿಟಿಷ್ ಪಾಸ್‌ಪೋರ್ಟ್ ಹೊಂದಿದ್ದಾರೆ. (ಚಿತ್ರ ಕೃಪೆ: Instagram)

ZEENEWS TRENDING STORIES

By continuing to use the site, you agree to the use of cookies. You can find out more by Tapping this link