ಈ ಪ್ರಾಣಿಗಳನ್ನು ಮನೆಯಲ್ಲಿ ಸಾಕಿದರೆ ತೆರೆಯುವುದು ಅದೃಷ್ಟದ ಬಾಗಿಲು
ವಾಸ್ತು ಶಾಸ್ತ್ರದ ಪ್ರಕಾರ, ಮೀನುಗಳನ್ನು ಮನೆಯಲ್ಲಿ ಸಾಕುವುದು ಮಂಗಳಕರ. ಮೀನು ಭಗವಾನ್ ವಿಷ್ಣುವಿನ ಅವತಾರವಾದ ಕಾರಣ ಮನೆಯಲ್ಲಿ ಮೀನುಗಳನ್ನು ಇಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಮೀನು ಇದ್ದರೆ ಎಲ್ಲಾ ರೀತಿಯ ತೊಂದರೆಗಳು ದೂರವಾಗುತ್ತವೆ.
ವಾಸ್ತು ಶಾಸ್ತ್ರದ ಪ್ರಕಾರ, ಕಪ್ಪೆಯನ್ನು ಮನೆಯಲ್ಲಿ ಸಾಕುವುದು ಕೂಡಾ ಮಂಗಳಕರ. ಕಪ್ಪೆ ಯಾವ ಮನೆಯಲ್ಲಿರುತ್ತದೆಯೋ ಆ ಮನೆಯಲ್ಲಿ ರೋಗ ರುಜಿನಗಳಿಗೆ ಜಾಗವಿರುವುದಿಲ್ಲ ಎಂದು ಹೇಳಲಾಗುತ್ತದೆ. ಒಂದು ವೇಳೆ ನಿಜವಾದ ಕಪ್ಪೆಯನ್ನು ಮನೆಯಲ್ಲಿ ಇಟ್ಟು ಸಾಕುವುದು ಸಾಧ್ಯವಾಗಿಲ್ಲ ಎಂದಾದರೆ ಹಿತ್ತಾಳೆ ಅಥವಾ ಗಾಜಿನ ಕಪ್ಪೆಯನ್ನು ಇರಿಸಬಹುದು.
ಆಮೆಯನ್ನು ಸಮೃದ್ಧಿಯೊಂದಿಗೆ ಹೋಲಿಸಿ ಮಾತನಾಡಲಾಗುತ್ತದೆ. ಮನೆಯಲ್ಲಿ ಆಮೆಯನ್ನು ಇಟ್ಟುಕೊಂಡರೆ ಸಂಪತ್ತು ಹರಿದು ಬರುತ್ತದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ನಿಜ ಆಮೆಯ ಬದಲು ಹಿತ್ತಾಳೆಯ ಆಮೆಯನ್ನು ಕೂಡಾ ಇಟ್ಟುಕೊಳ್ಳಬಹುದು.
ಕುದುರೆ ಯಶಸ್ಸಿನ ಸಂಕೇತ. ಅದನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಎಂದರೆ ಎಲ್ಲಾ ಸಮಸ್ಯೆ ನಿವಾರಣೆ ಎಂದೇ ಅರ್ಥ. ಇದು ಮನೆಯಲ್ಲಿ ಸಕಾರಾತ್ಮಕತೆಯನ್ನು ಉಳಿಯುತ್ತದೆ. ಮನೆಯಲ್ಲಿ ಕುದುರೆಯ ಚಿತ್ರವನ್ನು ಕೂಡಾ ಹಾಕಬಹುದು.
ಹಿಂದೂ ಧರ್ಮದ ಪ್ರಕಾರ, ನಾಯಿಯನ್ನು ಭೈರವನ ವಾಹನ ಎಂದು ಹೇಳಲಾಗುತ್ತದೆ. ನಾಯಿಗೆ ಅಣ್ಣ ಆಹಾರ ತಿನ್ನಿಸುವುದರಿಂದ ಎಲ್ಲಾ ರೀತಿಯ ದೋಷಗಳು ನಿವಾರಣೆಯಾಗುತ್ತದೆ. ಭೈರವನ ಆಶೀರ್ವಾದ ಕೂಡಾ ಸದಾ ನಿಮ್ಮ ಮೇಲಿರುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)