ಮೊರಿಂಗಾ ಚಹಾ ಸೇವನೆಯಿಂದ ಆರೋಗ್ಯಕ್ಕಿದೆ ಈ 5 ಅದ್ಭುತ ಪ್ರಯೋಜನ
ಬ್ಲಾಕ್ ಟೀ, ಗ್ರೀನ್ ಟೀ, ಲೆಮನ್ ಟೀ ರೀತಿಯಲ್ಲೇ ಮೊರಿಂಗಾ ಟೀ ಸಹ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಈ ಫೋಟೋ ಗ್ಯಾಲರಿಯಲ್ಲಿ ಮೊರಿಂಗಾ ಟೀ ಸೇವನೆಯಿಂದ ಆರೋಗ್ಯಕ್ಕೆಯಿರುವ 5 ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯೋಣ...
ರೋಗ ನಿರೋಧಕ ಶಕ್ತಿ: ನುಗ್ಗೆ ಸೊಪ್ಪಿನಲ್ಲಿ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ಸಮೃದ್ಧವಾಗಿದೆ. ನಿಯಮಿತ ಮೊರಿಂಗಾ ಟೀ ಸೇವಣೆಯಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಯಕೃತ್ ಆರೋಗ್ಯ: ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಮೊರಿಂಗಾ ಎಲೆಗಳಿಂದ ತಯಾರಿಸಿದ ಟೀ ಕುಡಿಯುವುದರಿಂದ ಯಕೃತ್ ಹಾಗೂ ಮೂತ್ರಪಿಂಡಗಳನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಬಹುದು.
ಕಣ್ಣಿನ ಆರೋಗ್ಯ: ಮೊರಿಂಗಾ ಎಲೆಗಳಲ್ಲಿ ವಿಟಮಿನ್ ಎ ಹೇರಳವಾಗಿ ಕಂಡು ಬರುತ್ತದೆ. ಹಾಗಾಗಿ ಇದರ ಬಳಕೆಯೂ ಕಣ್ಣಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
ತೂಕ ನಷ್ಟ: ನುಗ್ಗೆ ಸೊಪ್ಪಿನಲ್ಲಿ ಎಂದರೆ ಮೊರಿಂಗಾ ಎಲೆಗಳಲ್ಲಿ ಕ್ಲೋರೊಜೆನಿಕ್ ಆಮ್ಲ ಕಂಡು ಬರುತ್ತದೆ. ನಿತ್ಯ ಮೊರಿಂಗಾ ಟೀ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ತೂಕನಷ್ಟಕ್ಕೂ ತುಂಬಾ ಪ್ರಯೋಜನಕಾರಿ.
ಬಿಪಿ ನಿಯಂತ್ರಣ: ನಿತ್ಯ ಒಂದು ಕೆಪಿ ಮೊರಿಂಗಾ ಟೀ ಸೇವನೆಯಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.