ಈ ರಾಶಿಯವರಿಗೆ ಕೋಪ ಮಾಡಿಕೊಳ್ಳಲು ಕಾರಣವೇ ಬೇಡ ! ಇವರ ಜೊತೆ ಜೀವನ ಬಲು ಕಷ್ಟ
ಕೆಲವರಿಗೆ ಮೂಗಿನ ಮೇಲೆ ಕೋಪ. ಸಣ್ಣ ಸಣ್ಣ ವಿಷಯಗಳಿಗೂ ಕೋಪ ನೆತ್ತಿಗೇರಿ ಬಿಡುತ್ತದೆ. ಸಣ್ಣ ಸಣ್ಣ ವಿಷಯಗಳಿಗೂ ಪ್ರತಿಕ್ರಿಯಿಸಿ ಬಿಡುತ್ತಾರೆ. ಜ್ಯೋತಿಷ್ಯದ ಪ್ರಕಾರ ಅತಿ ಹೆಚ್ಚು ಕೋಪ ಮಾಡಿಕೊಳ್ಳುವ ರಾಶಿಯವರು ಯಾರು ನೋಡೋಣ.
ಕರ್ಕ ರಾಶಿ : ಇವರಿಗೆ ಬಹಳ ಕೋಪ. ಎದುರಿನವರ ಪ್ರತಿ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಎದುರಿಗೆ ರೇಗುವುದಿಲ್ಲವಾದರೂ ಅವರ ಕೋಪವು ಮನಸ್ಸಿನಲ್ಲಿಯೇ ಜ್ವಾಲಾಮುಖಿಯಂತೆ ಉರಿಯುತ್ತಲೇ ಇರುತ್ತದೆ.
ಸಿಂಹ ರಾಶಿ : ಕೋಪದ ವಿಷಯ ಬಂದಾಗ ಈ ರಾಶಿಯವರ ಸ್ವಭಾವವೂ ಸಿಂಹದಂತೆಯೇ ಇರುತ್ತದೆ. ಸಿಂಹ ರಾಶಿಯವರ ಕೋಪ ಬಹಳ ಕೆಟ್ಟದ್ದು. ಪ್ರತಿಯೊಬ್ಬರೂ ಇವರ ತನ್ನ ಕೋಪದಿಂದ ಬಚಾವಾಗಲು ಬಯಸುತ್ತಾರೆ.
ಕನ್ಯಾ ರಾಶಿ : ಕನ್ಯಾ ರಾಶಿಯವರ ಕೋಪ ಎದುರಿಗೆ ಬರುವುದೇ ಇಲ್ಲ. ಇವರು ಬೇರೆಯವರ ಮೇಲೆ ಕೋಪ ತೋರಿಸಿಕೊಳ್ಳುವುದಿಲ್ಲ. ಇವರು ಕೋಪವನ್ನು ಅದುಮಿಟ್ಟುಕೊಳ್ಳುತ್ತಾರೆ. ತಮ್ಮ ಮೇಲೆಯೇ ತಮ್ಮ ಕೋಪವನ್ನು ತೋರಿಸಿಕೊಳ್ಳುತ್ತಾರೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.