ಇವೇ ನೋಡಿ ಜಗತ್ತಿನ 5 ದುಬಾರಿ ವಸ್ತುಗಳು: 1 ಗ್ರಾಂನಲ್ಲಿ ಬರಲಿದೆ 10 ಲಕ್ಷ ಕೆಜಿ ಚಿನ್ನ
ಆಂಟಿಮಾಟರ್ ವಿಶ್ವದ ಅತ್ಯಂತ ದುಬಾರಿ ವಸ್ತುವಾಗಿದೆ. ಇದನ್ನು ತಯಾರಿಸುವುದು ಕಷ್ಟ ಮಾತ್ರವಲ್ಲ ಅಸಾಧ್ಯವೂ ಆಗಿದೆ. ವೈಜ್ಞಾನಿಕ ಮಾಹಿತಿಯ ಪ್ರಕಾರ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಇದರ 309 ಪರಮಾಣುಗಳನ್ನು ಮಾತ್ರ ಸಿದ್ಧಪಡಿಸಲಾಗಿದೆ. ಜನವರಿ 2011ರಲ್ಲಿ ಅಮೆರಿಕನ್ ಆಸ್ಟ್ರೋನಾಮಿಕಲ್ ಸೊಸೈಟಿ(American Astronomical Society) ಇದು ಗುಡುಗು ಸಹಿತ ಮೋಡ(Thunderstorm Clouds) ಗಳ ಮೇಲಿನ ಪದರದಲ್ಲಿ ಕಂಡುಬರುತ್ತದೆ ಎಂದು ವರದಿ ಮಾಡಿದೆ. NASA ಪ್ರಕಾರ 1 ಗ್ರಾಂ ಆಂಟಿಮಾಟರ್ ತಯಾರಿಸಲು ಸುಮಾರು 43 ಲಕ್ಷ ಶತಕೋಟಿ ರೂ. ಬೇಕಾಗುತ್ತದಂತೆ. ಈ ಮೊತ್ತದಲ್ಲಿ ಬರೋಬ್ಬರಿ 9.5 ಲಕ್ಷ ಕೆಜಿ ಚಿನ್ನ ಬರುತ್ತದೆ ಎಂದು ಅಂದಾಜಿಸಲಾಗಿದೆ.
1 ಗ್ರಾಂ ಕ್ಯಾಲಿಫೋರ್ನಿಯಮ್‌ನ ಬೆಲೆ 10 ಮಿಲಿಯನ್‌ನಿಂದ 27 ಮಿಲಿಯನ್ ಡಾಲರ್‌ಗಳವರೆಗೆ ಇರುತ್ತದೆ. ಅಂದರೆ ಸುಮಾರು 70 ಮಿಲಿಯನ್‌ನಿಂದ 19 ಮಿಲಿಯನ್ ರೂ.ಗಳು. ಇದನ್ನು 1950ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಂಡುಹಿಡಿಯಲಾಯಿತು. ಇದನ್ನು ಪರಮಾಣು ರಿಯಾಕ್ಟರ್‌ಗಳಲ್ಲಿ ಬಳಸಲಾಗುತ್ತದೆ. ಗರ್ಭಕಂಠದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕ್ಯಾಲಿಫೊರಿಯಮ್ -252 ಅನ್ನು ಸಹ ಬಳಸಲಾಗುತ್ತದೆ.
ಡೈಮಂಡ್ ವಿಶ್ವದ ಅತ್ಯಂತ ದುಬಾರಿ ವಸ್ತು(Most Expensive Element)ಗಳಲ್ಲಿ ಒಂದಾಗಿದೆ. ಇದರ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ. ಇದರ 1 ಗ್ರಾಂ ಬೆಲೆ 55,000 ಅಮೆರಿಕನ್ ಡಾಲರ್ ನಿಂದ 1,08,000 ಅಮೆರಿಕನ್ ಡಾಲರ್ ವರೆಗೆ, ಅಂದರೆ 38 ಲಕ್ಷದಿಂದ ಸುಮಾರು 1.25 ಲಕ್ಷ ರೂ.ಗಳು. ವಜ್ರದ ಆಭರಣಗಳು ಭಾರತವೂ ಸೇದಿದಂತೆ ಇಡೀ ಪ್ರಪಂಚದಲ್ಲಿಯೇ ಬಹಳ ಜನಪ್ರಿಯವಾಗಿವೆ.
ಟ್ರಿಟಿಯಮ್ ಅನ್ನು 1920ರಲ್ಲಿ ವಾಲ್ಟರ್ ರಸ್ಸೆಲ್ ಕಂಡುಹಿಡಿದನು. ಇದು ಸೂಪರ್ ಹೆವಿ ಹೈಡ್ರೋಜನ್ ಆಗಿದೆ. ಇದನ್ನು ಕೆಲವು ಪರಮಾಣು ಶಸ್ತ್ರಾಸ್ತ್ರಗಳಲ್ಲಿ ಇಂಧನದ ಪ್ರಮುಖ ಅಂಶವಾಗಿ ಬಳಸಲಾಗುತ್ತದೆ. ಇದಲ್ಲದೆ ಇದನ್ನು ಕತ್ತಲೆಯಲ್ಲಿ ಹೊಳೆಯುವ ಗಡಿಯಾರದ ದೀಪವಾಗಿ ಬಳಸಲಾಗುತ್ತದೆ. ಮುಖ್ಯವಾಗಿ ಇದನ್ನು ದುಬಾರಿ ಕೈಗಡಿಯಾರಗಳು, ಔಷಧ ಮತ್ತು ರೇಡಿಯೊಥೆರಪಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದು ವಜ್ರದ ನಂತರ ವಿಶ್ವದ 4ನೇ ಅತ್ಯಂತ ದುಬಾರಿ ವಸ್ತುವಾಗಿದೆ. ಇದರ 1 ಗ್ರಾಂ ಬೆಲೆ 30,000 ಪೌಂಡ್‌ಗಳು ಅಂದರೆ ಸುಮಾರು 26 ಮತ್ತು ಒಂದೂವರೆ ಲಕ್ಷ ರೂಪಾಯಿಗಳು.
ಈ ಅಪರೂಪದ ರತ್ನವು ಕೆಂಪು ಮತ್ತು ನೇರಳೆ ಬಣ್ಣವನ್ನು ಹೊಂದಿದೆ. ಇದರ ಮುಖ್ಯ ಮೂಲ ತಾಂಜಾನಿಯಾದಲ್ಲಿದೆ. ಇದುವರೆಗೆ ಪತ್ತೆಯಾದ ಎಲ್ಲವನ್ನೂ 1 ಕಪ್‌ನಲ್ಲಿ ಹಾಕಿದರೆ ಅರ್ಧ ಕಪ್ ತುಂಬುವುದು ಅಪರೂಪ. ಇದು ವಜ್ರಕ್ಕಿಂತ ಮೃದುವಾಗಿರುತ್ತದೆ ಮತ್ತು ಇದನ್ನು ರತ್ನವಾಗಿ ಮಾತ್ರ ಬಳಸಲಾಗುತ್ತದೆ. ಇದರ 1 ಗ್ರಾಂ ಬೆಲೆ ಸುಮಾರು 20,000 ಅಮೆರಿಕನ್ ಡಾಲರ್ ಅಂದರೆ ಸುಮಾರು 14 ಲಕ್ಷ ರೂ.ಗಳು.