Summer Holiday Tips: ಬೇಸಿಗೆಯಲ್ಲಿ ಕಾಲ ಕಳೆಯಲು ಹೇಳಿ ಮಾಡಿಸಿದ ಜಾಗಗಳಿವು..!

Mon, 21 Mar 2022-4:27 pm,

ಹಿಮಾಚಲ ಪ್ರದೇಶದ ಬಿರ್ ಬಿಲ್ಲಿಂಗ್ ಭಾರತದ ಅತ್ಯಂತ ಅದ್ಭುತವಾದ ಪ್ಯಾರಾಗ್ಲೈಡಿಂಗ್ ತಾಣಗಳಲ್ಲಿ ಒಂದಾಗಿದೆ. ನೀವು ಸಾಹಸವನ್ನು ಇಷ್ಟಪಡುವವರಾಗಿದ್ದರೆ ಖಂಡಿತವಾಗಿಯೂ ಒಮ್ಮೆ ಬಿರ್ ಬಿಲ್ಲಿಂಗ್‌ಗೆ ಭೇಟಿ ನೀಡಿ.

ಹಿಮಾಚಲ ಪ್ರದೇಶ ಪ್ರವಾಸಿಗರ ನೆಚ್ಚಿನ ಸ್ಥಳವಾಗಿದೆ. ಇಲ್ಲಿ  ಅನೇಕ ಪ್ರವಾಸಿ ತಾಣಗಳಿವೆ. ಅಲ್ಲಿಗೆ  ಪ್ರವಾಸಿಗರು ಹೆಸಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಿಮಾಚಲ ಪ್ರದೇಶವು ಚಳಿಗಾಲದಲ್ಲಿ ಮತ್ತು ಬೇಸಿಗೆಯಲ್ಲಿ ಪ್ರವಾಸಿಗರಿಂದ ತುಂಬಿರುತ್ತದೆ.  ಬೇಸಿಗೆಯಲ್ಲಿ ಇಲ್ಲಿನ ಹವಾಮಾನವು ತುಂಬಾ ಚೆನ್ನಾಗಿರುತ್ತದೆ.  

ಧನೌಲ್ಟಿ ಕೂಡ ಒಂದು ಪ್ರಸಿದ್ಧ ಗಿರಿಧಾಮವಾಗಿದೆ. ಈ ಸ್ಥಳದ ಸೌಂದರ್ಯವು ಮನಸ್ಸಿಗೆ ಮುದ ನೀಡುತ್ತದೆ.  ಕ್ಯಾಂಪಿಂಗ್ ಮತ್ತು ಇತರ ಸಾಹಸ ಚಟುವಟಿಕೆಗಳಿಗೆ ಧನೌಲ್ಟಿ ಉತ್ತಮ ಸ್ಥಳವಾಗಿದೆ. ಇಲ್ಲಿ ನೀವು ಸುರ್ಕಂದ ದೇವಿ ದೇವಸ್ಥಾನ, ದಶಾವತಾರ ದೇವಸ್ಥಾನ ಮತ್ತು ದಿಯೋಗರ್ ಕೋಟೆಯಂತಹ ಸ್ಥಳಗಳಿಗೆ ಭೇಟಿ ನೀಡಬಹುದು.

ಗುಲ್ಮಾರ್ಗ್ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಒಂದು ಸುಂದರವಾದ ಗಿರಿಧಾಮವಾಗಿದೆ. ಅದರ ಸೌಂದರ್ಯದಿಂದಾಗಿ, ಇದನ್ನು ಭೂಮಿಯ ಮೇಲಿನ ಸ್ವರ್ಗ ಎಂದೂ ಕರೆಯುತ್ತಾರೆ. ಮೊಘಲ್ ಚಕ್ರವರ್ತಿ ಜಹಾಂಗೀರ್ ತನ್ನ ರಜಾದಿನಗಳನ್ನು ಕಳೆಯಲು ಗುಲ್ಮಾರ್ಗ್ಗೆ ಆಗಾಗ್ಗೆ ಬರುತ್ತಿದ್ದ ಎನ್ನಲಾಗಿದೆ. 

 ದೆಹಲಿಯಿಂದ ಕೇವಲ 5 ರಿಂದ 6 ಗಂಟೆಗಳ ಪ್ರಯಾಣದಲ್ಲಿ ನೈನಿತಾಲ್ ತಲುಪಬಹುದು. ಇದು ಉತ್ತರಾಖಂಡದ ಸುಂದರವಾದ ಗಿರಿಧಾಮವಾಗಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link