PHOTOS: ಇವು ದೇಶದ ಮಾಲಿನ್ಯ ಮುಕ್ತ ನಗರಗಳು!
ದಟ್ಟ ಕಾಡುಗಳು ಮತ್ತು ಸ್ವಚ್ಚ ವಾತಾವರಣದೊಂದಿಗೆ ಪಥನಂತಿಟ್ಟ ತನ್ನ ಶುದ್ಧ ನೀರಿನ ಮೂಲಗಳಿಗಾಗಿ ವಿಶ್ವದಾದ್ಯಂತ ಹೆಸರುವಾಸಿಯಾಗಿದೆ. ಪ್ರಕೃತಿಯ ವಿಶಿಷ್ಟ ಸೌಂದರ್ಯವನ್ನು ಇಲ್ಲಿ ಕಾಣಬಹುದಾಗಿದೆ. (ಫೋಟೊ ಕೃಪೆ: twitter/@KeralaTourism)
ಮಾಥೆರನ್ ಮಹಾರಾಷ್ಟ್ರದ ಅತ್ಯಂತ ಸುಂದರವಾದ ಗಿರಿಧಾಮಗಳಲ್ಲಿ ಒಂದಾಗಿದೆ. ಇದು ಸೌಂದರ್ಯಕ್ಕಾಗಿ ವಿಶ್ವದಾದ್ಯಂತ ಹೆಸರುವಾಸಿಯಾಗಿದೆ. ಇಲ್ಲಿ ಮಾಲಿನ್ಯದ ಮಟ್ಟವು ತುಂಬಾ ಕಡಿಮೆಯಾಗಿದ್ದು, ಈ ಗಿರಿಧಾಮದ ಸೌಂದರ್ಯವು ಅದನ್ನು ಉತ್ತಮ ಪ್ರವಾಸೋದ್ಯಮ ಸ್ಥಳದಲ್ಲಿ ಸೇರಿಸಿಕೊಳ್ಳುವಂತೆ ಮಾಡುತ್ತದೆ. (ಫೋಟೊ ಕೃಪೆ:ಟ್ವಿಟರ್ / @ hi2uu)
ಕೊಲ್ಲಂ ಕೇರಳದ ವಾಣಿಜ್ಯ ನಗರ ಮಾತ್ರವಲ್ಲ, ಇದು ಇಲ್ಲಿ ಅತ್ಯುತ್ತಮ, ಸುಂದರ ಮತ್ತು ಮಾಲಿನ್ಯ ಮುಕ್ತ ನಗರಗಳಲ್ಲಿ ಒಂದಾಗಿದೆ. ಅಷ್ಟಮುಂಡಿ ಸರೋವರದ ದಡಗಳು ಇಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಕೊಲ್ಲಂ ದೇಶದ ಕಡಿಮೆ ಕಲುಷಿತ ನಗರಗಳಲ್ಲಿ ಒಂದಾಗಿದೆ. ಫೋಟೊ ಕೃಪೆ: twitter/@KeralaTourism)
ಕಿನ್ನೌರ್ ನೈಸರ್ಗಿಕ ಸೌಂದರ್ಯಕ್ಕಾಗಿ ವಿಶ್ವದಾದ್ಯಂತ ಹೆಸರುವಾಸಿಯಾಗಿದೆ. ಈ ನಗರವು ರಾಷ್ಟ್ರೀಯ ವಾಯು ಗುಣಮಟ್ಟದ ಗುರಿಗಿಂತ 10 ಪ್ರತಿಶತ ಕಡಿಮೆ ಇದೆ. ಈ ಸ್ಥಳಕ್ಕೆ ಭೇಟಿ ನೀಡುವುದರಿಂದ ಅದರ ನೈಸರ್ಗಿಕ ಸೌಂದರ್ಯವು ನಿಮಗೆ ವಿಭಿನ್ನ ಪ್ರಪಂಚದ ಅನುಭವ ನೀಡಲಿದೆ. (ಫೋಟೊ ಕೃಪೆ: twitter)