Venomous snake: ಜಗತ್ತಿನಲ್ಲಿರುವ 5 ಅತ್ಯಂತ ವಿಷಕಾರಿ ಹಾವುಗಳು, ಕಚ್ಚಿದರೆ ಸಾವು ಖಚಿತ!
ಜಗತ್ತಿನಲ್ಲಿರುವ ಕೆಲವು ಹಾವುಗಳು ವಿಷಕಾರಿಯಲ್ಲದಿದ್ದರೂ ಕೆಲವು ಅತ್ಯಂತ ವಿಷಕಾರಿಯಾಗಿವೆ.
ಓಫಿಯೋಫಾಗಸ್ ಹಾನವನ್ನು ಕಾಳಿಂಗ ಸರ್ಪವೆಂತಲೂ ಕರೆಯುತ್ತಾರೆ. ಈ ಹಾವಿನ ಕಡಿತದಿಂದ ಕೇಂದ್ರ ನರಮಂಡಲದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದ ಕಚ್ಚಿಸಿಕೊಂಡವರಿಗೆ ಅಸಹನೀಯ ನೋವು, ಕಣ್ಣು ಮಂಜಾಗುವಿಕೆ ಮತ್ತು ಪಾರ್ಶ್ವವಾಯುವಿಗೆ ಬಲಿಯಾಗುತ್ತಾರೆ.
ನಾಗರಹಾವು ಅಥವಾ ಇಂಡಿಯನ್ ಕೋಬ್ರಾ ಎಂದು ಕರೆಯಲಾಗುವ ಈ ಹಾವು ಸಹ ಅತ್ಯಂತ ವಿಷಕಾರಿ. ಇದರ ಕಡಿತದ ನಂತರ ಮನುಷ್ಯನ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ, ಸ್ನಾಯು ಸೆಳೆತ, ಪಾರ್ಶ್ವವಾಯು, ಉಸಿರಾಟದ ತೊಂದರೆ ಮತ್ತು ಹೃದಯಾಘಾತವನ್ನು ಉಂಟುಮಾಡುತ್ತದೆ.
ಇದು ತುಂಬಾ ವಿಷಕಾರಿ ಹಾವು ಮತ್ತು ವಿಶೇಷವಾಗಿ ಭಾರತ ಮತ್ತು ಶ್ರೀಲಂಕಾದಲ್ಲಿ ಕಂಡುಬರುತ್ತದೆ. ಇದರ ಕಡಿತದಿಂದ ಮನುಷ್ಯನ ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಪಾರ್ಶ್ವವಾಯು ಸಮಸ್ಯೆಯೂ ಉಂಟಾಗುತ್ತದೆ.
ಇದನ್ನು ರಾಸಾಲಿ ವೈಪರ್ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಗೋವಾದಲ್ಲಿ ಕಂಡುಬರುತ್ತದೆ. ಇದರ ಕಚ್ಚುವಿಕೆಯ ನಂತರ ಮನುಷ್ಯನಿಗೆ ಅಸಹನೀಯ ನೋವು ಉಂಟಾಗುತ್ತದೆ ಮತ್ತು ಕಚ್ಚಿದ ಸ್ಥಳವು ಊದಿಕೊಳ್ಳುತ್ತದೆ.
ಇದನ್ನು ಕ್ಯಾಸ್ಟೋ ಕೋರಲ್ ಸ್ನೇಕ್ ಎಂದೂ ಕರೆಯುತ್ತಾರೆ. ಇವು ಅರೆ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಂಡುಬರುತ್ತವೆ. ಭಾರತದಲ್ಲಿ ಇವು ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವು ಕಚ್ಚಿದರೆ ಸಾವು ಖಚಿತ.