ಈ ಜನ್ಮರಾಶಿಗಳಿಗೆ ಮುಂಬರುವ ದಿನಗಳೆಲ್ಲಾ ಹಬ್ಬವೋ ಹಬ್ಬ: ಅದೃಷ್ಟಮಯ ಬಾಳಲ್ಲಿ ಸಾಲು ಸಾಲು ವಿಜಯಗಳೇ ಬೆನ್ನೇರುವುದು!

Mon, 05 Feb 2024-3:42 pm,

ಇಂದು ಅಂದರೆ ಫೆಬ್ರವರಿ 5 ರಂದು ರಾತ್ರಿ 9.56 ರ ಸಮಯದಲ್ಲಿ ಮಂಗಳ ಗ್ರಹವು ಮಕರ ರಾಶಿಯನ್ನು ಪ್ರವೇಶಿಸಲಿದೆ. ಇದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.

ಮಾರ್ಚ್ 15 ರಂದು, ಮಂಗಳವು ಮತ್ತೆ ರಾಶಿಯನ್ನು ಬದಲಾಯಿಸುತ್ತದೆ. ಇನ್ನು ಮಕರ ರಾಶಿಗೆ ಮಂಗಳನ ಆಗಮನವು ಕೆಲ ರಾಶಿಯವರಿಗೆ ಉತ್ತಮ ಲಾಭವನ್ನು ನೀಡುತ್ತದೆ. ಅಂತಹ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.

ಮೇಷ ರಾಶಿಯವರಿಗೆ ಮಂಗಳ ಸಂಚಾರವು ಲಾಭದಾಯಕವಾಗಿರುತ್ತದೆ. ಈ ರಾಶಿಯವರು ಭಕ್ತಿಯಲ್ಲಿ ಆಸಕ್ತರಾಗಿರುವ ಕಾಲವಿದು. ವಿದೇಶ ಪ್ರವಾಸ ಮಾಡುವ ಸಾಧ್ಯತೆ ಕೂಡ ಇದೆ. ನಿಮ್ಮ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಈ ಸಮಯದಲ್ಲಿ ಕಲ್ಯಾಣ ಯೋಗವೂ ಇದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಸಂಚಾರದ ಮೂಲಕ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ಇರುತ್ತದೆ. ವ್ಯಾಪಾರ ಮತ್ತು ಆರೋಗ್ಯದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಆರ್ಥಿಕ ಲಾಭದ ಸಾಧ್ಯತೆಯೂ ಇದೆ.  

ಮಕರ ರಾಶಿ: ಮಂಗಳ ಗ್ರಹವು ಇದೇ ರಾಶಿಗೆ ಪ್ರವೇಶ ಮಾಡುತ್ತಿರುವ ಕಾರಣದಿಂದ ಶುಭಕರವಾಗಿರುತ್ತದೆ. ಷೇರು ಮಾರುಕಟ್ಟೆಯಲ್ಲಿ ಆಸಕ್ತಿ ಹೊಂದಿದ್ದರೆ, ಸುರಕ್ಷಿತ ಆಯ್ಕೆಗಳಲ್ಲಿ ಹೂಡಿಕೆ ಮಾಡುವುದು ಪ್ರಯೋಜನಕಾರಿಯಾಗಲಿದೆ. ಇದರೊಂದಿಗೆ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ. ಉತ್ತಮ ಆರ್ಥಿಕ ಪರಿಸ್ಥಿತಿಗಳನ್ನು ಸಹ ಹೊಂದಿರುತ್ತೀರಿ. ಕೆಲಸದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link