High Blood Pressure Causes: ನೀವು ತಿಳಿದುಕೊಳ್ಳಲೇ ಬೇಕು.! ಹೈಬಿಪಿಗೆ ಕಾರಣಗಳೇನು ಗೊತ್ತಾ ?

Sat, 16 Apr 2022-8:23 am,

ಅಧಿಕ ಸೋಡಿಯಂ ಮತ್ತು ಅಧಿಕ ರಕ್ತದೊತ್ತಡದ ನಡುವೆ ನೇರ ಸಂಬಂಧವಿದೆ. ಹೆಚ್ಚು ಸೋಡಿಯಂ ಬಳಕೆಯಿಂದ ರಕ್ತದೊತ್ತಡ ಅಧಿಕವಾಗುತ್ತದೆ. ಆಹಾರದಲ್ಲಿ ಉಪ್ಪನ್ನು ಕಡಿಮೆ ಸೇವಿಸುವುಡು ಮಾತ್ರವಲ್ಲ, ಪ್ಯಾಕೇಜ್ ಮಾಡಿದ ಆಹಾರಗಳಲ್ಲಿ ಅಡಗಿರುವ ಸೋಡಿಯಂ ಪ್ರಮಾಣವನ್ನು ಸಹ ಪರಿಶೀಲಿಸಿಕೊಳ್ಳಬೇಕು. 

ಪೊಟ್ಯಾಸಿಯಮ್ ಸೋಡಿಯಂ ಅನ್ನು ಪ್ರತಿರೋಧಿಸುವ ಖನಿಜವಾಗಿದೆ. ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ಪೊಟ್ಯಾಸಿಯಮ್ ಸಿಗುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ಸೋಡಿಯಂ ಕಡಿಮೆಯಾಗುತ್ತದೆ. ಪೊಟ್ಯಾಸಿಯಮ್ ಪ್ರಮಾಣವನ್ನು ಹೆಚ್ಚಿಸಲು, ಉತ್ತಮ ಮತ್ತು ಆರೋಗ್ಯಕರ ಡಯಟ್ ಅನ್ನು ಅನುಸರಿಸಬೇಕು. 

ಮಾನಸಿಕ ಒತ್ತಡವು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಆದ್ದರಿಂದ ಒತ್ತಡದಿಂದ ನಿಮ್ಮನ್ನು ದೂರವಿರಿ. ಇದರಿಂದ ನಿಮ್ಮ ನರಗಳು ಶಾಂತವಾಗಿರುತ್ತವೆ.   

ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆಲ್ಕೊಹಾಲ್ ನಿಮ್ಮ ರಕ್ತದೊತ್ತಡವನ್ನು ಅಧಿಕಗೊಳಿಸುತ್ತದೆ. ಇದು ಹೃದಯಾಘಾತ, ಹೃದಯ ಸ್ತಂಭನದ ಅಪಾಯವನ್ನೂ ಹೆಚ್ಚಿಸುತ್ತದೆ.

ನಿದ್ರೆಯ ಕೊರತೆಯು ಅಧಿಕ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.  ನಿಮ್ಮ ಉತ್ತಮ ಆರೋಗ್ಯಕ್ಕೆ ಉತ್ತಮ ನಿದ್ರೆ ಬಹಳ ಮುಖ್ಯ. ದೇಹಕ್ಕೆ ವಿಶ್ರಾಂತಿ ನೀಡುವುದರಿಂದ ನೀವು ಫಿಟ್ ಆಗಿರುತ್ತೀರಿ. 

(Declaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link