ಯಶ್‌ to ನಯನತಾರಾ.. ಟಿವಿಯಿಂದ ಬಂದು ಸಿನಿರಂಗವನ್ನೇ ಆಳುತ್ತಿರುವ ಸೌತ್‌ ಸ್ಟಾರ್‌ಗಳು ಇವರು

Fri, 16 Jun 2023-5:11 pm,

ಯಶ್ : ಇಂದು ಜಾಗತಿಕ ಮಟ್ಟದಲ್ಲಿ ಸ್ಟಾರ್ ಸ್ಥಾನಮಾನ ಪಡೆದಿರುವ ಯಶ್ ಕೂಡ ಕಿರುತೆರೆಯಿಂದ ಬಂದವರು. ಚಲನಚಿತ್ರಗಳ ಮೊದಲು ಟಿವಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ.    

ವಿಜಯ್ ಸೇತುಪತಿ: ವಿಜಯ್ ಸೇತುಪತಿ ಅಭಿನಯದ ಹುಚ್ಚು ಯಾರಿಗೆ ಇಲ್ಲ. ಎಲ್ಲರೂ ಅವರ ಸೌತ್ ಚಿತ್ರಗಳ ಅಭಿಮಾನಿಗಳಾಗಿದ್ದರು, ಆದರೆ ಇತ್ತೀಚೆಗೆ ಶಾಹಿದ್ ಕಪೂರ್ ಅವರ ವೆಬ್ ಸರಣಿ ಫರ್ಜಿಯಲ್ಲಿ ಅವರನ್ನು ನೋಡಿದ ಜನರು ಅವರ ನಟನೆಯನ್ನು ಮನಗಂಡರು. ಆದರೆ ಚಲನಚಿತ್ರಗಳ ಮೊದಲು, ಅವರು ಟಿವಿಯ ಭಾಗವಾಗಿದ್ದರು. ಇದು ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿತ್ತು.  

ಸಾಯಿ ಪಲ್ಲವಿ: ಸೌತ್‌ನ ಮೋಸ್ಟ್ ನ್ಯಾಚುರಲ್ ಬ್ಯೂಟಿ ಎಂದೇ ಖ್ಯಾತರಾದ ನಟಿ ಸಾಯಿ ಪಲ್ಲವಿ. ಇವರು ಡಾಕ್ಟರೇಟ್ ತೊರೆದು ನಟಿಯಾದರು. ಆದರೆ ಅವರು ಮೊದಲ ಬಾರಿಗೆ ಟಿವಿಯಲ್ಲಿ ಕಾಣಿಸಿಕೊಂಡರು. ನೃತ್ಯದಲ್ಲಿ ಅತಿಯಾದ ಆಸಕ್ತಿ ಇರುವ ಸಾಯಿ ಪಲ್ಲವಿ, ಅವರು ಟಿವಿಯಲ್ಲಿ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು.  

ಪ್ರಕಾಶ್ ರಾಜ್ : ದಕ್ಷಿಣ ಸಿನಿರಂಗ ಮಾತ್ರವಲ್ಲ ಬಾಲಿವುಡ್‌ನಲ್ಲೂ ಖಳನಟನಾಗಿ ಪ್ರಕಾಶ್ ರಾಜ್ ಫೇಮಸ್ ಆಗಿದ್ದಾರೆ. ಆದರೆ ಅವರ ವೃತ್ತಿಜೀವನ ಪ್ರಾರಂಭವಾದದ್ದು ಟಿವಿಯಿಂದ. ದೂರದರ್ಶನದ ಹಲವು ಧಾರಾವಾಹಿಗಳಲ್ಲಿ ಅವರು ಪಾತ್ರ ಮಾಡಿದ್ದಾರೆ.   

ನಯನತಾರಾ: ಇಂದು ನಯನತಾರಾ ದಕ್ಷಿಣದ ಟಾಪ್‌ ನಟಿಯರ ಪಟ್ಟಿಯಲ್ಲಿದ್ದಾರೆ. ಲೇಡಿ ಸೂಪರ್‌ ಸ್ಟಾರ್‌ ಎಂದೇ ಖ್ಯಾತರಾಗಿದ್ದಾರೆ. ಸೌತ್‌ನಲ್ಲಿ ಮಿಂಚಿದ ಇವರು, ಶಾರುಖ್ ಖಾನ್ ಅವರ ಜವಾನ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಆದರೆ ನಯನತಾರಾ ಬಣ್ಣದ ಲೋಕದ ಜರ್ನಿ ಶುರುವಾಗಿದ್ದು ಟಿವಿಯಿಂದ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link