ಸಾಡೇಸಾತಿ ವಕ್ಕರಿಸುತ್ತಿರುವುದು ನಿಮಗೆ ಗೊತ್ತಾಗುತ್ತದೆ. ಇದು ಏಳೂವರೆ ಶನಿಯ ಲಕ್ಷಣ
ಏಳೂವರೆ ವರ್ಷ ಸಾಗುವ ಶನಿಯ ಗ್ರಹ ದೆಸೆಯನ್ನು ಸಾಡೇ ಸಾತ್ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುತ್ತಾರೆ. ಬೇರೆ ಗ್ರಹಗಳಿಗೆ ಹೋಲಿಸಿದರೆ ಶನಿಯ ಸಂಚಾರ ಅತ್ಯಂತ ನಿಧಾನವಾಗಿರುತ್ತದೆ. ಶನಿ ಒಂದು ರಾಶಿಯಲ್ಲಿ ಕನಿಷ್ಠ ಎರಡೂವರೆ ವರ್ಷ ಇರುತ್ತಾನೆ. ಅದೇ ರೀತಿ ಆತ ಒಟ್ಟು ಮೂರು ರಾಶಿಗಳಲ್ಲಿಒಟ್ಟು ಏಳೂವರೆ ವರ್ಷ ಸಂಚಾರ ಮಾಡುತ್ತಾನೆ. ಅದನ್ನೇ ಸಾಢೇಸಾತಿ ಎಂದು ಕರೆಯುತ್ತಾರೆ.
ಶನಿ ದೆಸೆಯ ಒಂದು ಚರಣವೆಂದರೆ ಎರಡೂವರೆ ವರ್ಷ. ಈ ರೀತಿಯ ಮೂರು ಚರಣಗಳಿರುತ್ತವೆ. ಮೂರು ಚರಣಗಳು ಸೇರಿದಾಗ ಏಳೂವರೆ ವರ್ಷ ಅಂದರೆ ಸಾಡೆ ಸಾತ್ ವರ್ಷ. ಅದೇ ಸಾಢೇ ಸಾತಿ. ಸಾಡೇ ಸಾತಿಯ ಮೊದಲ ಚರಣ ಅಂದರೆ ಮೊದಲ ಎರಡೂವರೆ ವರ್ಷದಲ್ಲಿ ಮಾನಸಿಕವಾಗಿ ಸಾಕಷ್ಟು ಕಷ್ಟಗಳು ನಿಮಗೆ ಎದುರಾಗುತ್ತದೆ. ಎರಡನೇ ಚರಣದಲ್ಲಿ ಸಾಕಷ್ಟು ಆರ್ಥಿಕ ಮತ್ತು ದೈಹಿಕ ಸಂಕಷ್ಟಗಳು ಎದುರಾಗುತ್ತವೆ. ಕೆಲಸ ಬಿಗಡಾಯಿಸಿಹೋಗುತ್ತದೆ. ಖರ್ಚು ವಿಪರೀತವಾಗಿ ಹೆಚ್ಚಾಗುತ್ತದೆ. ದೊಡ್ಡ ರೋಗ ಅಥವಾ ದುರ್ಘಟನೆ ನಿಮ್ಮನ್ನು ಕಾಡುತ್ತದೆ. ತುಂಬಾ ನಷ್ಟ ನಿಮ್ಮನ್ನು ಕಾಡುತ್ತದೆ. ಸಾಡೇಸಾತಿಯಲ್ಲಿ ಮೂರನೇ ಚರಣ ಅತ್ಯುತ್ತಮ ಎನ್ನಲಾಗುತ್ತದೆ. ಈ ಘಟ್ಟದಲ್ಲಿ ಶನಿದೇವರು ನೀವು ಕಳೆದುಕೊಂಡ ಎಲ್ಲವನ್ನೂ ಮರಳಿಸುತ್ತಾರೆ ಎನ್ನಲಾಗಿದೆ.
1. ಕೆಲವೊಮ್ಮೆ ಅಂಗೈಯ ಬಣ್ಣ ಬದಲಾಗುತ್ತದೆ. ಒಮ್ಮೆ ನೀಲಿ ಅಥವಾ ಕಪ್ಪು ಬಣ್ಣಕ್ಕೆ ಬದಲಾದಂತೆ ಕಾಣಿಸುತ್ತದೆ. 2. ಮನಸ್ಸಿನ ಚಮಕ್ ಕಡಿಮೆಯಾಗುತ್ತದೆ. ಅವಮಾನಗಳು ಕಾಡುತ್ತವೆ. ಪ್ರತಿಷ್ಠೆಗೆ ಧಕ್ಕೆ ಉಂಟಾಗಬಹುದೇ ಎಂಬ ಭಯ ಕಾಡುತ್ತಿರುತ್ತದೆ. 3. ಉಗುರು ದುರ್ಬಲವಾಗುತ್ತದೆ. ಕಣ್ಣಿನ ಕೆಳಗೆ ಕಪ್ಪು ಬಣ್ಣ ಕಾಣಿಸಿಕೊಳ್ಳುತ್ತದೆ 4. ಮಾತು ಮಾತಿಗೆ ಸಿಟ್ಟು ಬರುತ್ತದೆ. ಸಣ್ಣ ವಿಚಾರಕ್ಕೂ ಗಲಾಟೆ ಶುರುವಾಗುತ್ತದೆ.
1. ಪುಣ್ಯ ಕಾರ್ಯಗಳನ್ನು ಹೆಚ್ಚು ಮಾಡಬೇಕು. ಅಂದರೆ ದಾನ ಕಾರ್ಯಗಳನ್ನು ಮಾಡಬೇಕು. ಶನಿವಾರ ಲೋಹ, ಕಪ್ಪು ಉದ್ದು, ಕಪ್ಪು ಎಳ್ಳು, ಕಪ್ಪು ವಸ್ತ್ರ ದಾನ ಮಾಡಬೇಕು. 2. ಶನಿವಾರ ಅಶ್ವತ್ಥ ಮರದ ಕೆಳಗೆ ದೀಪ ಬೆಳಗಬೇಕು. ಶನಿಸ್ತೋತ್ರ ಪಠಣ ಮಾಡಬೇಕು. 3. ಶನಿವಾರ ದಿನ ಶನಿ ಮಂದಿರಕ್ಕೆ ತೆರಳಿ ಶನಿದೇವರಿಗೆ ಎಳ್ಳೆಣ್ಣೆ ಅರ್ಪಿಸಬೇಕು 4. ಹನುಮಾನ್ ಪೂಜೆ ಮಾಡಿದರೂ ಕೂಡಾ ಶನಿದೇವರು ಪ್ರಶಾಂತರಾಗುತ್ತಾರೆ. ಆಗ ಶನಿದೇವರು ಅಶುಭ ಫಲ ನೀಡುವುದಿಲ್ಲವಂತೆ. ಹಾಗಾಗಿ, ಸಾಡೆಸಾತಿ ಪ್ರಭಾವ ಕಡಿಮೆ ಮಾಡಲು ಹನುಮ ದೇವರ ಪೂಜೆ ಮಾಡಿ ಜೊತೆಗೆ ಹನುಮಾನ ಚಾಲೀಸ ಪಠಣೆ ಮಾಡಿ.