OTT ಯಲ್ಲಿ ಸಖತ್‌ ಹವಾ ಕ್ರಿಯೇಟ್‌ ಮಾಡ್ತಿವೆ ಈ ವೆಬ್‌ ಸಿರೀಸ್‌ಗಳು!

Mon, 20 Jun 2022-2:42 pm,

Udan patolas: Amazon ನ ಉಚಿತ OTT ಪ್ಲಾಟ್‌ಫಾರ್ಮ್, Amazon Mini TV ಮತ್ತು Amazon Prime ವಿಡಿಯೋ ಎರಡರಲ್ಲೂ ಬಿಡುಗಡೆಯಾಗಿದೆ. ಈ ವೆಬ್‌ ಸಿರೀಸ್‌ ಪಂಜಾಬ್‌ನಿಂದ ಮುಂಬೈಗೆ ಬಂದು ದೊಡ್ಡ ನಗರದಲ್ಲಿ ತಮ್ಮ ಕನಸುಗಳನ್ನು ನನಸಾಗಿಸಲು ಬಯಸುವ ನಾಲ್ವರು ಹುಡುಗಿಯರ ಕುರಿತಾಗಿದೆ. 

Intimacy: ನೆಟ್‌ಫ್ಲಿಕ್ಸ್‌ನಲ್ಲಿ ಈ ವೆಬ್‌ಸಿರೀಸ್‌ ಅನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರಾಜಕಾರಣಿಯೊಬ್ಬರ ಖಾಸಗಿ ಟೇಪ್ ಸೋರಿಕೆಯಾಗಿದ್ದು ಅದು ಅವರ ರಾಜಕೀಯ ಜೀವನವನ್ನು ಅಪಾಯಕ್ಕೆ ಸಿಲುಕಿಸುತ್ತದೆ.  

Cyber War: ಮೋಹಿತ್ ಮಲಿಕ್ ಮತ್ತು ಸನಯಾ ಇರಾನಿಯವರ ಈ ಹೊಸ ಶೋ ಸೈಬರ್ ಅಪರಾಧದ ಬಗ್ಗೆ ಹೇಳುತ್ತದೆ. ಅಲ್ಲದೇ, ಸೈಬರ್‌ ಕ್ರೈಂನಿಂದ ಜನರ ಮೇಲಾಗುವ ಪ್ರಭಾವದ ಬಗ್ಗೆ ಮಾತನಾಡುತ್ತದೆ. ಇದನ್ನು Voot ನಲ್ಲಿ ನೋಡಬಹುದು.

Code M season 2: ಜೆನ್ನಿಫರ್ ವಿಂಗೆಟ್ ಅವರ ಈ ವೆಬ್‌ ಸಿರೀಸ್‌ನಲ್ಲಿ, ಸೇನಾ ನೆಲೆಯ ಶಿಬಿರದಲ್ಲಿ ರಾಜ್ಯದ ಮುಖ್ಯಮಂತ್ರಿಯನ್ನು ಕೊಲ್ಲುವ ಪ್ರಯತ್ನದ ಬಗ್ಗೆ ತಿಳಿಸಲಾಗಿದೆ. ಈ ವೆಬ್‌ ಸಿರೀಸ್‌ ಅನ್ನು Voot ನಲ್ಲಿ ಸ್ಟ್ರೀಮ್ ಮಾಡಲಾಗುತ್ತಿದೆ.

The Broken News: ಸೋನಾಲಿ ಬೇಂದ್ರೆ ಮತ್ತು ಜೈದೀಪ್ ಅಹ್ಲಾವತ್ ಅವರ ಈ ಹೊಸ ವೆಬ್‌ ಸಿರೀಸ್‌ ಎರಡು ಭಾರತೀಯ ಸುದ್ದಿ ವಾಹಿನಿಗಳ ಕುರಿತಾದ ಕತೆಯಾಗಿದೆ. ಈ ಪ್ರದರ್ಶನದಲ್ಲಿ ಮಾಧ್ಯಮ ಉದ್ಯಮದ ಸವಾಲುಗಳು ಮತ್ತು ತೊಂದರೆಗಳನ್ನು ತೋರಿಸಲಾಗಿದೆ. ನೀವು Zee5 ನಲ್ಲಿ ಈ ಸರಣಿಯನ್ನು ವೀಕ್ಷಿಸಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link