ಈ ಆಯುರ್ವೇದ ಆಹಾರಗಳು ಮಧುಮೇಹಿಗಳಿಗೆ ಸಂಜೀವಿನಿ ಇದ್ದಂತೆ

Thu, 16 Mar 2023-3:36 pm,

ನೇರಳೆ ಹಣ್ಣಿನಂತೆ ನೇರಳೆ ಹಣ್ಣಿನ ಬೀಜಗಳು ಕೂಡ ಮಧುಮೇಹಿಗಳಿಗೆ ದಿವ್ಯೌಷಧವಾಗಿದೆ. ನೇರಳೆ ಹಣ್ಣು ಎಂದರೆ ಜಾಮೂನ್ ಹಣ್ಣಿನ ಬೀಜಗಳನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಪುಡಿಮಾಡಿ, ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ಈ ಪುಡಿಯನ್ನು ಮಿಕ್ಸ್ ಮಾಡಿ ಕುಡಿದರೆ ಡಯಾಬಿಟಿಸ್ ಅನ್ನು ಸುಲಭವಾಗಿ ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ.

ಆಹಾರದ ಸ್ವಾದವನ್ನು ಹೆಚ್ಚಿಸಬಲ್ಲ ದಾಲ್ಚಿನ್ನಿ ಬ್ಲಡ್ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ಮಾಡುವಲ್ಲಿಯೂ ಕೂಡ ತುಂಬಾ ಪ್ರಯೋಜ್ನಕಾಗಿ ಆಗಿದೆ. ದಾಲ್ಚಿನ್ನಿಯಲ್ಲಿ ಮಧುಮೇಹ ವಿರೋಧಿ ಗುಣಗಳು ಕಂಡು ಬರುವುದರಿಂದ ಇದರ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿಯುವುದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತು ಪಡಿಸಬಹುದು.

ಉದರದ ಆರೋಗ್ಯಕ್ಕೆ ಅತ್ಯುತ್ತಮ ಮನೆಮದ್ದು ಎಂದು ಪರಿಗಣಿಸಲಾಗಿರುವ ಮೆಂತ್ಯ ಮಧುಮೇಹಿಗಳಿಗೆ ಅಮೃತವಿದ್ದಂತೆ. ರಾತ್ರಿ ವೇಳೆ ಒಂದು ಲೋಟ ನೀರಿನಲ್ಲಿ ಒಂದು ಚಮಚ ಮೆಂತ್ಯ ಕಾಳನ್ನು ನೆನೆಸಿ, ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಡಯಾಬಿಟಿಸ್ ನಿಯಂತ್ರಣಕ್ಕೆ ಬರುತ್ತದೆ. 

ಅಂಜೂರದ ಹಣ್ಣಿನಂತೆಯೇ ಅದರ ಎಲೆಗಳು ಸಹ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಅಂಜೂರದ ಎಲೆಗಳಲ್ಲಿ ಮಧುಮೇಹ ವಿರೋಧಿ ಗುಣಗಳು ಸಮೃದ್ಧವಾಗಿರುವುದರಿಂದ ಇದರ ಚಹಾ ತಯಾರಿಸಿ ಕುಡಿಯುವುದು ಮಧುಮೆಹಿಗಳಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.

ಬೆಳ್ಳುಳ್ಳಿ ಉತ್ತಮ ಆಯುರ್ವೇದ ಔಷಧ ಎಂದು ನಿಮಗೆ ತಿಳಿದೇ ಇದೆ. ಆಯುರ್ವೇದದಲ್ಲಿ ಆರೋಗ್ಯದ ಗಣಿ ಎಂದು ಬಣ್ಣಿಸಲ್ಪಡುವ ಬೆಳ್ಳುಳ್ಳಿ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ. ನಿತ್ಯ ಬೆಳಿಗ್ಗೆ ಬೆಳ್ಳುಳ್ಳಿ ಮೊಗ್ಗಣ್ಣು ಅಗಿದು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಲಭವಾಗಿ ಕಂಟ್ರೋಲ್ ಮಾಡಬಹುದು. ಮಾತ್ರವಲ್ಲ, ಇದು ತೂಕ ಇಳಿಕೆ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಸಹಕಾರಿ ಆಗಲಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link