Diabetes ಕಾರಣ ಶರೀರದ ಈ ಅಂಗಗಳು ಹಾನಿಗೊಳಗಾಗಬಹುದು, ಈ ರೀತಿ ರಕ್ಷಿಸಿ

Fri, 27 May 2022-9:49 pm,

ಮಧುಮೇಹದಿಂದ ಈ ಅಂಗಗಳು ಹಾನಿಗೊಳಗಾಗಬಹುದು - ಕಣ್ಣುಗಳು: ಕಣ್ಣುಗಳು ಒಬ್ಬ ವ್ಯಕ್ತಿಯ ದೇಹದ ಮಹತ್ವದ ಅಂಗವಾಗಿದ್ದು, ತನ್ಮೂಲಕ ವ್ಯಕ್ತಿ ತನ್ನ ಸುತ್ತಲಿನ ಕೆಲಸ ಮತ್ತು ಇತರ ವಿಷಯಗಳನ್ನು ನೋಡಬಹುದು, ಆದರೆ ನಿಮಗೆ ಮಧುಮೇಹ ಇದ್ದರೆ ನೀವು ಜಾಗರೂಕರಾಗಿರಬೇಕು. ಏಕೆಂದರೆ ನೀವು ದೀರ್ಘಕಾಲದವರೆಗೆ ಮಧುಮೇಹವನ್ನು ನಿರ್ಲಕ್ಷಿಸಿದರೆ ಅದು ನಿಮ್ಮ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ದೃಷ್ಟಿಹೀನತೆಯಂತಹ ಗಂಭೀರ ಕಾಯಿಲೆ ನಿಮಗೆ ಎದುರಾಗುತ್ತದೆ.

ಮೂತ್ರಪಿಂಡದ ಮೇಲೆ ಪರಿಣಾಮ ಬೀರುತ್ತದೆ - ದೀರ್ಘಕಾಲದವರೆಗೆ ಮಧುಮೇಹದಿಂದ ಬಳಲುತ್ತಿರುವವರು ಮೂತ್ರಪಿಂಡದ ಸಮಸ್ಯೆಗೆ ಗುರಿಯಾಗುತ್ತಾರೆ, ಇದರಿಂದ ಅವರು ಕಿಡ್ನಿಗೆ ಸಂಬಂಧಿತ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ರಕ್ತದಲ್ಲಿನ ಅಧಿಕ ಸಕ್ಕರೆಯಿಂದಾಗಿ, ಇದು ಮೂತ್ರಪಿಂಡದ ಸಣ್ಣ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ,  ಇದರಿಂದಾಗಿ ಮೂತ್ರಪಿಂಡ ವೈಫಲ್ಯದ ಸಾಧ್ಯತೆಯೂ ಇರುತ್ತದೆ. ಮೂತ್ರಪಿಂಡದಲ್ಲಿ ಊತವೂ ಉಂಟಾಗಿ ಕಿಡ್ನಿ ಕೂಡ ಹಾನಿಗೊಳಗಾಗಬಹುದು.

ಕಾಲಿನ ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ - ಮಧುಮೇಹದ ರೋಗಿಯು ಅನೇಕ ಅಂಗಗಳಲ್ಲಿ ಮಧುಮೇಹದ ಪರಿಣಾಮವನ್ನು ಅನುಭವಿಸುತ್ತಾನೆ, ಅವುಗಳಲ್ಲಿ ಕಾಲಿನ ನರಗಳೂ ಕೂಡ ಶಾಮೀಲಾಗಿವೆ. ದೇಹದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಾಗುವುದರಿಂದ, ಕಾಲುಗಳ ನರಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ, ನಂತರ ಅವು ಹಾನಿಗೊಳಗಾಗುತ್ತವೆ. ಇದರಿಂದಾಗಿ ಹೆಚ್ಚಿನವರಿಗೆ ಪಾದಗಳ ಮರಗಟ್ಟುವಿಕೆ ಸಮಸ್ಯೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

ಮಧುಮೇಹ ರೋಗಿಗಳು ಈ ರೀತಿ ತಮ್ಮ ಕಾಳಜಿಯನ್ನು ವಹಿಸಬೇಕು - ಮಧುಮೇಹಿಗಳು ಸಿಹಿತಿಂಡಿಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಮಧುಮೇಹ ರೋಗಿಯು ತನ್ನ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.. ಮಧುಮೇಹ ರೋಗಿಯು ಫಾಸ್ಟ್ ಫುಡ್ ಗಳಿಂದ ಅಂತರವನ್ನು ಕಾಯ್ದುಕೊಳ್ಳಬೇಕು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link