ಈ ಬಾಲಿವುಡ್ ಬೆಡಗಿಯರಿಗೆ ಕಾಫಿ ಇಲ್ಲದೆ ದಿನ ಕಳೆಯುವುದೇ ಇಲ್ಲವಂತೆ ..!
ಕರೀನಾ ಕಪೂರ್ ಖಾನ್ ಗೆ ಕಾಫಿ ಎಂದರೆ ಬಹಳ ಪ್ರೀತಿ. ಕಾಫಿ ಮೇಲಿನ ಪ್ರೀತಿಯನ್ನು ಇವರು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.
ನಟಿ ಆಲಿಯಾ ಭಟ್ ಕೂಡಾ ಕಾಫಿಯ ಮೇಲಿನ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ.
ನಟಿ ಇಲಿಯಾನಾ ಡಿ ಕ್ರೂಜ್ ತನ್ನ ದಿನವನ್ನು ಒಂದು ಕಪ್ ಕಾಫಿಯೊಂದಿಗೆಯೇ ಆರಂಭಿಸುತ್ತಾರೆಯಂತೆ .
ನಟಿ ಅನುಷ್ಕಾ ಶರ್ಮಾಗೆ ಕಾಫಿ ಇಲ್ಲದೆ ಇರಲು ಸಾಧ್ಯವೇ ಇಲ್ಲವಂತೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. ತನ್ನ ಕಾಫಿಯ ಪೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ನಟಿ ಜಾಕ್ವೆಲಿನ್ ಫರ್ನಾಂಡಿಸ್ ಯಾವಾಗಲೂ ಕಾಫಿ ಎಂದರೆ ತನಗೆ ಎಷ್ಟು ಇಷ್ಟ ಎನ್ನುವುದನ್ನು ಹೇಳುತ್ತಿರುತ್ತಾರೆ. ನಟಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ 'Lungo' ಎಂದು ಕರೆಯಲ್ಪಡುವ ಹೊಸ ಕಾಫಿಯ ಪಾಕವಿಧಾನವನ್ನು ಹಂಚಿಕೊಂಡಿದ್ದಾರೆ.