Bollywood Actress: ಈ ಬಾಲಿವುಡ್ ನಟಿಯರು ಮುಸ್ಲಿಂ ಸಮುದಾಯಕ್ಕೆ ಸೇರಿದವರು!

Sun, 26 Mar 2023-8:36 pm,

ಬಾಲಿವುಡ್‌ನ ಖ್ಯಾತ ಮತ್ತು ಪ್ರತಿಭಾವಂತ ನಟಿ ಟಬು ತಮ್ಮ ವೃತ್ತಿಜೀವನದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇವತ್ತು ಟಬು ಅವರ ಪರಿಚಯದ ಅಗತ್ಯವಿಲ್ಲ, ಆದರೆ ಈ ನಟಿ ಮುಸ್ಲಿಂ ಕುಟುಂಬಕ್ಕೆ ಸೇರಿದವರು ಎಂಬುದು ನಿಮಗೆ ತಿಳಿದಿದೆಯೇ? ಹೌದು... ತಬು ಅವರ ನಿಜವಾದ ಹೆಸರು ‘ತಬಸ್ಸುಮ್ ಫಾತಿಮಾ ಹಶ್ಮಿ’.

ಆಯೇಷಾ ಟಾಕಿಯಾ ಇಂದು ಚಲನಚಿತ್ರ ಜಗತ್ತಿನಲ್ಲಿ ಅಷ್ಟೆನೂ ಸಕ್ರಿಯವಾಗಿಲ್ಲ. ಆದರೆ ಈ ಹಿಂದೆ ಬಾಲಿವುಡ್‌ನಲ್ಲಿ ಆಯೇಷಾ ಸಖತ್ ಸೌಂಡ್ ಮಾಡುತ್ತಿದ್ದಳು. ಆಯೇಷಾ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದು, ಮುಸ್ಲಿಂ ಧರ್ಮಕ್ಕೂ ಮತಾಂತರವಾಗಿದ್ದಾಳೆ.

ಈ ಲಿಸ್ಟ್ನಲ್ಲಿ ಬಾಲಿವುಡ್‍ನ ಖ್ಯಾತ ನಟಿ ಆಲಿಯಾ ಭಟ್ ಹೆಸರು ಕೇಳಿ ನೀವು ಶಾಕ್ ಆಗಿರಬಹುದು, ಆದರೆ ಇದು ಸತ್ಯ. ಆಲಿಯಾ ಭಟ್ ತಾತನ ಹೆಸರು ಶಿರೀನ್ ಮೊಹಮ್ಮದ್ ಅಲಿ. ಅದೇ ರೀತಿ ಆಲಿಯಾರ ತಾಯಿ ಸೋನಿ ರಜ್ದಾನ್ ಕೂಡ ಮುಸ್ಲಿಂ.

ಬಾಲಿವುಡ್‍ನ ಖ್ಯಾತ ನಟಿ ಮಧುಬಾಲಾ ಅವರನ್ನು ಹೊಗಳಲು ಪದಗಳೇ ಸಾಲುವುದಿಲ್ಲ. ಹಿಂದಿ ಚಿತ್ರರಂಗದ ರಾಣಿ ಎಂದೇ ಕರೆಸಿಕೊಳ್ಳುತ್ತಿದ್ದ ಈ ನಟಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರು. ಮಧುಬಾಲಾ ಅವರ ನಿಜವಾದ ಹೆಸರು 'ಮುಮ್ತಾಜ್ ಬೇಗಂ'.

ಬಾಲಿವುಡ್‍ನ ಖ್ಯಾತನ ನಟ ಸಂಜಯ್ ದತ್ ಪತ್ನಿ ಮಾನ್ಯತಾ ದತ್ ಮದುವೆಗೂ ಮುನ್ನ ಮುಸ್ಲಿಂ ಧರ್ಮವನ್ನು ಅನುಸರಿಸುತ್ತಿದ್ದರು. ಮಾನ್ಯತಾ ದತ್ ಅವರ ನಿಜವಾದ ಹೆಸರು 'ದಿಲ್ನವಾಜ್ ಶೇಖ್'.

ZEENEWS TRENDING STORIES

By continuing to use the site, you agree to the use of cookies. You can find out more by Tapping this link