Actress got Cheated in Love: ಪ್ರೀತಿಯಲ್ಲಿ ಮೋಸ ಹೋಗಿ ಖಿನ್ನತೆಯಿಂದ ಸಾವಿನ ಕದ ತಟ್ಟಲು ಮುಂದಾಗಿದ್ರು ಈ ಬಾಲಿವುಡ್ ನಟಿಯರು!!

Thu, 22 Dec 2022-10:41 am,

ಐಶ್ವರ್ಯಾ ಮತ್ತು ಸಲ್ಮಾನ್ ಅವರ ಪ್ರೇಮಕಥೆಯು ಎಲ್ಲರಿಗೂ ತಿಳಿದಿದ್ದೇ. ಆದರೆ ಸಲ್ಮಾನ್ ಅವರ ಮೋಹ, ಐಶ್ವರ್ಯಾರನ್ನು ಕಟ್ಟಿಹಾಕಿದಂತೆ ಮಾಡುತ್ತಿತ್ತು. ಸಿನಿರಂಗದಲ್ಲಿ ತನ್ನ ಜೀವನಕ್ಕೆ ಕುತ್ತು ಬರುತ್ತಿದೆ ಎಂದು ತಿಳಿದ ತಕ್ಷಣವೇ ಐಶ್ವರ್ಯಾ ಸಲ್ಮಾನ್ ರನ್ನು ತೊರೆದರು.  

ಒಂದು ಸಮಯದಲ್ಲಿ ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಬಾಲಿವುಡ್ ನ ಸೂಪರ್ ಜೋಡಿ ಎನಿಸಿಕೊಂಡಿದ್ದವರು. ಇವರಿಬ್ಬರು ಅನೇಕ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಆದರೆ ರಣಬೀರ್ ಅವರ ನಡವಳಿಕೆ ದೀಪಿಕಾರನ್ನು ದೂರ ಹೋಗುವಂತೆ ಮಾಡಿತ್ತು. ಈ ಬಳಿಕ ದೀಪಿಕಾ ಸಾಕಷ್ಟು ನೋವಿಗೆ ಗುರಿಯಾಗಿದ್ದು ಮಾತ್ರವಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯೋಚನೆಗೆ ತೆರಳಿದ್ದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.  

ದೀಪಿಕಾ ಅನುಭವಿಸಿದ ನೋವು ಕತ್ರಿನಾ ಕೂಡ ಅನುಭವಿಸಿದ್ದರು. ಇಲ್ಲಿ ವಿಶೇಷವೆಂದರೆ ಈ ಇಬ್ಬರನ್ನು ನೋಯಿಸಿದವ ಒಬ್ಬನೇ. ಅವರೇ ರಣಬೀರ್ ಕಪೂರ್.  6 ವರ್ಷಗಳ ಕಾಲ ಜೊತೆಯಿದ್ದ ಸಂಬಂಧವನ್ನು ಕತ್ರಿನಾ ದೂರ ಮಾಡಿದರು. ಕಾರಣ ರಣಬೀರ್ ನಡವಳಿಕೆ.

ಬಿಪಾಶಾ ಬಸು ಪ್ರೀತಿಯಲ್ಲಿ ಯಾರೂ ಊಹಿಸಲೂ ಸಾಧ್ಯವಾಗದ ನೋವನ್ನು ಅನುಭವಿಸಿದ್ದಾರೆ. 10 ವರ್ಷಗಳ ಸಂಬಂಧದ ನಂತರ ಮೋಸ ಹೋದ ಅವರ ಹೃದಯವು ನುಚ್ಚು ನೂರಾಗಿತ್ತು. ಬಿಪಾಶಾ ಜೊತೆಗೆ ಜಾನ್ ಅಬ್ರಹಾಂ, ಪ್ರಿಯಾ ರುಂಚಲ್ ಎಂಬಾಕೆಯ ಜೊತೆ ಸಂಬಂಧ ಬೆಳೆಸಿದ್ದಲ್ಲದೆ, ಇಬ್ಬರೂ ಮದುವೆಯಾಗಿದ್ದರು ಎನ್ನಲಾಗಿದೆ. ಈ ವಿಚಾರ ಬಿಪಾಶಾಗೆ ತಿಳಿದಾಗ ಕಣ್ಣೀರು ಹಾಕುವುದು ಬಿಟ್ಟರೆ ಬೇರೇನೂ ಇರಲಿಲ್ಲ.

ವಿವಾದಗಳ ರಾಣಿ, ಕಂಗನಾ ಕೂಡ ಪ್ರೀತಿಯಲ್ಲಿ ಮೋಸ ಹೋದವರು. ಇವರಿಗೆ ಮೋಸ ಮಾಡಿದವರು ಬೇರೆ ಯಾರೂ ಅಲ್ಲ ಹೃತಿಕ್ ರೋಷನ್. ಇವರಿಬ್ಬರ ಪ್ರೇಮಕಥೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಸೃಷ್ಟಿಯಾಗಿರುವ ಅನೇಕ ವರದಿಗಳಿವೆ. ಹೃತಿಕ್ ಕಂಗನಾ ಜೊತೆಗಿನ ಆಪ್ತತೆಯೇ ಸುಸೇನ್ ಜೊತೆಗಿನ ವಿಚ್ಛೇದನಕ್ಕೆ ಕಾರಣ ಎಂದು ಹೇಳಲಾಗುತ್ತಿತ್ತು. ಆ ಬಳಿಕ ಹೃತಿಕ್ ಕಂಗನಾ ನಡುವೆ ಭಾರೀ ಯುದ್ಧವೇ ನಡೆದಿತ್ತು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link