Strange Habits of Bollywood Actors: ದಿನಕ್ಕೆ 7 ರಿಂದ 8 ಬಾರಿ ಟೂತ್ ಬ್ರಷ್ ಮಾಡುತ್ತಾರಂತೆ ಬಾಲಿವುಡ್ ನ ಈ ಸ್ಟಾರ್ ನಟ!
)
ಆಯುಷ್ಮಾನ್ ಖುರಾನಾ ಬಾಲಿವುಡ್ ನ ಸ್ಟಾರ್ ನಟರಲ್ಲಿ ಒಬ್ಬರು. ಇವರಿಗೆ ಒಂದು ವಿಲಕ್ಷಣ ಅಭ್ಯಾಸವಿದೆಯಂತೆ. ಖುರಾನಾಗೆ ತಮ್ಮ ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳುವುದೆಂದರೆ ವಿಪರೀತ ಇಷ್ಟವಂತೆ. ಹೀಗಾಗಿ ದಿನಕ್ಕೆ 7 ರಿಂದ 8 ಬಾರಿ ಬ್ರಷ್ ಮಾಡುತ್ತಾರಂತೆ.
)
ಸನ್ನಿ ಲಿಯೋನ್: ಈ ಬಿ-ಟೌನ್ ಚೆಲುವೆಗೆ ಸ್ವಚ್ಛತೆಯಲ್ಲೂ ಕೊಂಚ ಗೀಳು ಇದೆ. ಹಲ್ಲುಜ್ಜುವ ಅಭ್ಯಾಸ ಇಲ್ಲದಿದ್ದರೂ, ಬಾಲಿವುಡ್ ಲೈಫ್ ವರದಿಯ ಪ್ರಕಾರ, ಪ್ರತಿ 15 ರಿಂದ 20 ನಿಮಿಷಕ್ಕೊಮ್ಮೆ ತಮ್ಮ ಪಾದಗಳನ್ನು ಸ್ವಚ್ಛಗೊಳಿಸುತ್ತಿರುತ್ತಾರಂತೆ.
)
ಕರೀನಾ ಕಪೂರ್: ಬಾಲಿವುಡ್ ಬೆಬೋಗೆ ತನ್ನ ಉಗುರುಗಳನ್ನು ಕಚ್ಚುವ ಕೆಟ್ಟ ಅಭ್ಯಾಸವಿದೆಯಂತೆ. ಆಕೆ ಉಗುರು ಕಚ್ಚುತ್ತಿರುವ ಅನೇಕ ಫೋಟೋಗಳು ಸಖತ್ ವೈರಲ್ ಆಗಿವೆ.
ಜಾನ್ ಅಬ್ರಹಾಂ: ಈ ಬಾಲಿವುಡ್ ಹಂಕ್ ತುಂಬಾ ಸಾಮಾನ್ಯವಾದ ಕೆಟ್ಟ ಅಭ್ಯಾಸವನ್ನು ಹೊಂದಿದ್ದಾರೆ. ನಮ್ಮಲ್ಲಿ ಅನೇಕರು ಮಾಡುವಂತೆ ಅವರು ಸಹ ಆಗಾಗ್ಗೆ ತನ್ನ ಕಾಲುಗಳನ್ನು ಅಲ್ಲಾಡಿಸುತ್ತಾ ಇರುತ್ತಾರಂತೆ.
ಅಮೀರ್ ಖಾನ್: ಬಾಲಿವುಡ್ ಲೈಫ್ ವರದಿಯ ಪ್ರಕಾರ, ಬಿ-ಟೌನ್ ನಟ ತನ್ನ ನೈರ್ಮಲ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ನಿಯಮಿತವಾಗಿ ಸ್ನಾನ ಸಹ ಮಾಡುವುದಿಲ್ಲ ಎಂದು ಅಮೀರ್ ಖಾನ್ ಒಮ್ಮೆ ಹೇಳಿಕೆ ನೀಡಿದ್ದರು.