ಕೋಟಿಗಟ್ಟಲೆ ಸಂಪಾದಿಸಿದರೂ ಸಿಕ್ಕಾಪಟ್ಟೆ ಕಂಜೂಸ್ ಈ ಸಿನಿ ತಾರೆಯರು
ಶ್ರದ್ಧಾ ಕಪೂರ್: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಕೂಡ ಬಹಳ ಎಚ್ಚರಿಕೆಯಿಂದ ಖರ್ಚು ಮಾಡುತ್ತಾರೆ. ನಟಿ ಇಂದು ಸಹ ಸೇಲ್‌ಗಳಲ್ಲಿಯೇ ಬಟ್ಟೆಗಳನ್ನು ಖರೀದಿಸಲು ಆದ್ಯತೆ ನೀಡುವುದಾಗಿ ಒಪ್ಪಿಕೊಂಡಿದ್ದರು.
ಸಾರಾ ಅಲಿ ಖಾನ್: ತನ್ನ ಜಿಪುಣತನದ ಬಗ್ಗೆ ಹಲವು ಬಾರಿ ಖುದ್ದು ಸಾರಾ ಮಾತನಾಡಿದ್ದಾರೆ. ಸಾರಾ ಅವರೇ ಕಪಿಲ್ ಶರ್ಮಾ ಶೋನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ಅವರ ತಾಯಿ 1600 ರೂ.ಗೆ ಟವೆಲ್ ಖರೀದಿಸಿದಾಗ ಅವರು ತುಂಬಾ ಕೋಪಗೊಂಡಿದ್ದರಂತೆ. ಇತ್ತೀಚೆಗೆ ನಟಿ ತನ್ನ ವಾರ್ಡ್‌ರೋಬ್‌ನಲ್ಲಿ ಒಂದೇ ಒಂದು ಡಿಸೈನರ್ ಬಟ್ಟೆ ಇಲ್ಲ ಎಂದು ಹೇಳಿದ್ದಾರೆ.
ಸಲ್ಮಾನ್ ಖಾನ್: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಚಿತ್ರಗಳು ಕೋಟಿಗಳಲ್ಲಿ ಹಣವನ್ನು ಗಳಿಸುತ್ತವೆ. ನಟ ಅನೇಕ ಐಷಾರಾಮಿ ಆಸ್ತಿಗಳ ಮಾಲೀಕರಾಗಿದ್ದಾರೆ, ಆದರೆ ಅವರು ಇನ್ನೂ 2 BHK ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ.
ಕಾಜೋಲ್: ನಟಿ ಕಾಜೋಲ್ ಚಿತ್ರವೊಂದಕ್ಕೆ ಕೋಟಿಗಟ್ಟಲೆ ಶುಲ್ಕ ಪಡೆಯುತ್ತಾರೆ. ಇದರೊಂದಿಗೆ ಅನೇಕ ಆದಾಯದ ಮೂಲಗಳನ್ನು ಹೊಂದಿದ್ದರೂ, ಕಾಜೋಲ್ ಕೈಬಿಟ್ಟು ದುಡ್ಡು ಖರ್ಚು ಮಾಡಲ್ಲ. ಒಮ್ಮೆ ಕರಣ್ ಜೋಹರ್ ಸಾರ್ವಜನಿಕವಾಗಿ ಕಾಜೋಲ್ ಗೆ ಜಿಪುಣಿ ಎಂಬ ಟ್ಯಾಗ್ ನೀಡಿದ್ದರು.
ಜಾನ್ ಅಬ್ರಹಾಂ: ನಟ ಜಾನ್ ಅಬ್ರಹಾಂ ನಟನೆ ಮತ್ತು ಅವರ ನೇರ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇದು ಈವೆಂಟ್‌ಗಳು ಅಥವಾ ಪಾರ್ಟಿಗಳು ಆಗಿರಲಿ, ಜಾನ್ ಅಬ್ರಹಾಂ ಡಿಸೈನರ್ ಬಟ್ಟೆಗಳನ್ನು ಹಾಕಲ್ಲ. ಟೀ ಶರ್ಟ್, ಜೀನ್ಸ್ ಮತ್ತು ಚಪ್ಪಲಿಯಲ್ಲಿ ಇಡೀ ವರ್ಷ ಕಳೆಯಬಹುದು ಎಂದು ನಟ ಸ್ವತಃ ಸಂದರ್ಶನವೊಂದರಲ್ಲಿ ಹೇಳಿದ್ದರು