ಬಾಲಿವುಡ್ ನ ಈ ನಟ ನಟಿಯರ ಬಳಿಯಿದೆ ಸ್ವಂತ ಜೆಟ್

Sun, 09 May 2021-2:25 pm,

ಅಮಿತಾಬ್ ಬಚ್ಚನ್ ತಮ್ಮ ಖಾಸಗಿ ಜೆಟ್‌ ನಲ್ಲಿಯೇ ಪ್ರಯಾಣ ಬೆಳೆಸುತ್ತಾರೆ. ಈ ಕಾರಣದಿಂದಲೇ ಬಿಗ್ ಬಿ ವಿಮಾಣ ನಿಲ್ದಾಣದಲ್ಲಿ ಕಂಡು ಬರುವುದು ಬಹಳ ವಿರಳ. ಕಳೆದ ವರ್ಷ ಅಮಿತಾಬ್ ಬಚ್ಚನ್  ಪ್ರತಿಷ್ಟಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ  ಪಡೆದ ಸಂದರ್ಭದಲ್ಲಿ ಅಭಿಷೇಕ್ ಬಚ್ಚನ್  ತಮ್ಮ ಸ್ವಂತ ಜೆಟ್ ನ ಫೊಟೋವನ್ನು ಶೇರ್ ಮಾಡಿದ್ದರು. ಇದರಲ್ಲಿ ತಮ್ಮ ಜೆಟ್ ನಲ್ಲಿ ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್ ಜೊತೆಯಲ್ಲಿ ಪ್ರಯಾಣಿಸುತ್ತಿರುವುದು ಕಂಡು ಬಂತು.   

ಇನ್ನು ಇನ್ನೊಬ್ಬ ನಟ ಅಜಯ್ ದೇವಗನ್ ಬಳಿ ಹಾಕರ್ 800 ಪ್ಲೇನ್ ಇದೆ. ಸಾಮಾನ್ಯವಾಗಿ ಸಿನೆಮಾ ಪ್ರಮೋಷನ್ ವೇಳೆ ಅಥವಾ ಶೂಟಿಂಗ್ ಗೆ  ತೆರಳಲು ಅಜಯ್ ಈ ಪ್ಲೇನ್ ಅನ್ನೇ ಬಳಸುತ್ತಾರೆ. 

ಅತಿ ಹೆಚ್ಚು ಆದಾಯ ಹೊಂದಿರುವ ನಟರಲ್ಲಿ ಒಬ್ಬರಾದ ಅಕ್ಷಯ್ ಕುಮಾರ್ ಕೂಡಾ 260 ಕೋಟಿ ಮೌಲ್ಯದ ಜೆಟ್ ನ ಮಾಲೀಕ. ಜನರಿಗೆ ಸಹಾಯ ಮಾಡುವುದರಲ್ಲಿ ಮುಮಚೂಣಿಯಲ್ಲಿರುವ ಅಕ್ಷಯ್, ತಮ್ಮ ನೈಜ ಬದುಕಿನಲ್ಲೂ ರಾಜನ ತರಹ ಬದುಕುತ್ತಿದ್ದಾರೆ. 

 ನಟಿ ಪ್ರಿಯಾಂಕ ಚೋಪ್ರಾ ಜಾನ್ಸ್ ವಿದೇಶ ಪ್ರಯಾಣ ಮಾಡುತ್ತಿರುತ್ತಾರೆ. ತಮ್ಮ ಪರ್ಸನಲ್ ಅಥವಾ ಪ್ರೋಫೆಶನಲ್ ಕೆಲಸದ ನಿಮಿತ್ತ ಅವರು ನ್ಯೂಯಾರ್ಕ್ ಮತ್ತು ಲಂಡನ್ ಗೆ ತೆರಳುತ್ತಿರುತ್ತಾರೆ. ಈ ವೇಳೆ ಅವರು ಪ್ರಯಾಣಕ್ಕಾಗಿ ತಮ್ಮ ಸ್ವಂತ ಜೆಟ್ ಅನ್ನೇ ಬಳಸುತ್ತಾರೆ.   

ಶಿಲ್ಪಾ ಶೆಟ್ಟಿ ಕುಂದ್ರಾ ಮತ್ತು ಅವರ ಪತಿ ರಾಜ್ ಕುಂದ್ರಾ ಅವರದ್ದು ಐಶಾರಾಮಿ ಜೀವನ. ವಿಶ್ವದ ವಿವಿಧ ನಗರಗಳಲ್ಲಿ ಆಸ್ತಿ ಹೊಂದಿರುವ ಶಿಲ್ಪಾ ಶೆಟ್ಟಿ ಕೂಡಾ  ಪ್ರೈವೆಟ್ ಜೆಟ್ ನ ಒಡತಿ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link