Kidney Problems: ರಾತ್ರಿ ಹೊತ್ತು ಕಾಣುವ ಈ ಲಕ್ಷಣಗಳು ಕಿಡ್ನಿ ವೈಫಲ್ಯದ ಸಂಕೇತವಾಗಿಬಹುದು!
ಮೂತ್ರಪಿಂಡದ ವೈಫಲ್ಯಕ್ಕೂ ಮುನ್ನವೇ ದೇಹದಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತವೆ. ರಾತ್ರಿ ಮಲಗುವಾಗ ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳು ಕಿಡ್ನಿ ವೈಫಲ್ಯದ ಮುನ್ಸೂಚನೆಯಾಗಿರುತ್ತವೆ.
ರಾತ್ರಿ ಹೊತ್ತಿನಲ್ಲಿ ಅತಿಯಾದ ಮೂತ್ರ ವಿಸರ್ಜನೆ ಮಾಡುವುದು ಕಿಡ್ನಿ ಸಮಸ್ಯೆಯ ಲಕ್ಷಣವಾಗಿದೆ. ಈ ರೋಗಲಕ್ಷಣವನ್ನು ನಿರ್ಲಕ್ಷಿಸಬೇಡಿ.
ಯಾವ ಕಾರಣವಿಲ್ಲದೆ ಕಾಲುಗಳಲ್ಲಿ ನೋವು ಇದ್ದರೆ ಮೂತ್ರಪಿಂಡದ ಸಮಸ್ಯೆಯ ಸಂಕೇತವಾಗಿದೆ.
ರಾತ್ರಿ ಹೊತ್ತು ವಾಂತಿಯಾಗುವುದು ಕೂಡ ಮೂತ್ರಪಿಂಡದ ಸಮಸ್ಯೆಯ ಸಂಕೇತವಾಗಿದೆ. ರಾತ್ರಿಯ ಊಟದ ನಂತರ ವಾಂತಿ ಅಥವಾ ವಾಕರಿಕೆ ಆಗುತ್ತಿದ್ದರೆ ನಿರ್ಲಕ್ಷಿಸುವುದು ಅಪಾಯಕಾರಿ.
ಅಧಿಕ ರಕ್ತದೊತ್ತಡ ಮೂತ್ರಪಿಂಡದ ಹಾನಿಯ ಸಂಕೇತವಾಗಿರಬಹುದು. ಆದ್ದರಿಂದ ಬಿಪಿ ಸಮಸ್ಯೆ ಇರುವವರು ಕಿಡ್ನಿ ಆರೋಗ್ಯದ ಬಗ್ಗೆ ಜಾಗೃತರಾಗಿರಬೇಕು.
ರಾತ್ರಿ ಮಲಗಿದಾಗ ಅತಿಯಾದ ಬೆವರು ಬರುತ್ತಿದ್ದರೆ ಇದು ಸಹ ಕಿಡ್ನಿ ವೈಫಲ್ಯದ ಮುನ್ಸೂಚನೆ ಆಗಿದೆ.
Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.