ಚರ್ಮದಲ್ಲಿ ಕಾಣಿಸಿಕೊಳ್ಳುವ ಈ ಬದಲಾವಣೆಗಳು ಕಿಡ್ನಿ ಸಮಸ್ಯೆಯ ಸಂಕೇತ..!
ರಾಷ್ಟ್ರೀಯ ಕಿಡ್ನಿ ಫೌಂಡೇಶನ್ ಪ್ರಕಾರ, ಶುಷ್ಕ ಚರ್ಮದ ಜೊತೆಗೆ ತುರಿಕೆ ಕಾಣಿಸಿಕೊಳ್ಳುವುದು ಮೂತ್ರಪಿಂಡದ ಕಾಯಿಲೆಯ ಸಾಮಾನ್ಯ ಸಂಕೇತವಾಗಿದೆ. ಈ ರೋಗಲಕ್ಷಣಗಳಿದ್ದರೆ, ಚರ್ಮವು ಒರಟಾಗಿ, ಚಪ್ಪಟೆಯಾಗಿ, ಬಿರುಕು ಬಿಟ್ಟಂತೆ ಕಾಣಿಸುತ್ತದೆ. ಇದು ಮೂತ್ರಪಿಂಡದ ಹಾನಿಯ ಸಂಕೇತವಾಗಿರಬಹುದು.
ನಿಮ್ಮ ಚರ್ಮದ ಬಣ್ಣದಲ್ಲಿ ಬದಲಾವಣೆ ಕಂಡು ಬಂದರೆ ಇದು ಕೂಡಾ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ ಪ್ರತ್ಯೇಕ ಲಕ್ಷಣವಾಗಿರಬಹುದು. ಮೂತ್ರಪಿಂಡಗಳು ರಕ್ತವನ್ನು ಸರಿಯಾಗಿ ಸ್ವಚ್ಛಗೊಳಿಸಲು ಸಾಧ್ಯವಾಗದಿದ್ದಾಗ ದೇಹದಲ್ಲಿ ಟಾಕ್ಸಿನ್ ಗಳು ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ. ಅದಕ್ಕಾಗಿಯೇ ಚರ್ಮದ ಬಣ್ಣವು ಬದಲಾಗಲು ಪ್ರಾರಂಭಿಸುತ್ತದೆ.
ಮೂತ್ರಪಿಂಡದ ಕಾಯಿಲೆಯ ಮತ್ತೊಂದು ಸಾಮಾನ್ಯ ಲಕ್ಷಣವೆಂದರೆ ಊತ. ಮೂತ್ರಪಿಂಡಗಳು ದೇಹದಿಂದ ಹೆಚ್ಚುವರಿ ದ್ರವ ಮತ್ತು ಉಪ್ಪನ್ನು ತೆಗೆದುಹಾಕುವ ಕೆಲಸ ಮಾಡುತ್ತದೆ. ಆದರೆ ಈ ಕೆಲಸವನ್ನು ಸರಿಯಾಗಿ ಮಾಡದಿದ್ದಾಗ, ಈ ದ್ರವವು ದೇಹದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಇದರಿಂದಾಗಿ ಪಾದಗಳು, ಮುಖ ಮತ್ತು ಕೈಗಳ ಊತ ಪ್ರಾರಂಭವಾಗುತ್ತದೆ.
ಮೂತ್ರಪಿಂಡದ ವೈಫಲ್ಯದಿಂದಾಗಿ ಚರ್ಮದ ಮೇಲೆ ದದ್ದುಗಳು ಕಾಣಿಸಿಕೊಳ್ಳುತ್ತವೆ. ಇದು ಮುತರ ಪಿಂಡ ವೈಫಲ್ಯದ ಸಾಮಾನ್ಯ ಲಕ್ಷಣವಾಗಿದೆ. ಮೂತ್ರಪಿಂಡಗಳು ದೇಹದಿಂದ ವಿಷವನ್ನು ತೆಗೆದುಹಾಕಲು ಸಾಧ್ಯವಾಗದಿದ್ದಾಗ ದದ್ದುಗಳು ಕಾಣಿಸಿಕೊಳ್ಳುತ್ತವೆ.
ಕೆಲವೊಮ್ಮೆ ಮೂತ್ರಪಿಂಡದ ರೋಗಿಗಳ ಮೊಣಕೈಗಳು, ಮೊಣಕಾಲುಗಳು ಮತ್ತು ಬೆರಳಿನ ಕೀಲುಗಳ ಚರ್ಮದ ಅಡಿಯಲ್ಲಿ ಒಂದು ರೀತಿಯ ಗಂಟಿನಂತೆ ಬೆಳೆಯುತ್ತದೆ. ಇದು ಕ್ಯಾಲ್ಸಿಯಂನಿಂದ ಮಾಡಲ್ಪಟ್ಟಿರುತ್ತದೆ. ಮೂತ್ರಪಿಂಡವು ದೇಹದಲ್ಲಿನ ಕೆಲವು ಖನಿಜಗಳಾದ ಸೋಡಿಯಂ ಮತ್ತು ಫಾಸ್ಫೇಟ್ ಅನ್ನು ಸಮತೋಲನಗೊಳಿಸುವ ಕೆಲಸ ಮಾಡುತ್ತದೆ. ಮೂತ್ರಪಿಂಡವು ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಧ್ಯವಾಗದಿದ್ದಾಗ, ಈ ರೀತಿ ಕ್ಯಾಲ್ಶಿಯನ್ ಒಂದೇ ಕಡೆ ಸೇರಿಕೊಳ್ಳುತ್ತದೆ.