ಚಾರ್ಜಿಂಗ್ ವೇಳೆ ನಿಮ್ಮ ಈ ತಪ್ಪುಗಳಿಂದ ಡ್ಯಾಮೇಜ್ ಆಗುತ್ತೆ ಫೋನ್‌ನ ಬ್ಯಾಟರಿ..!
ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡುವಾಗ ನಮಗೆ ಗೊತ್ತೋ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳು ಫೋನ್ ಬ್ಯಾಟರಿಯನ್ನು ಹಾನಿಗೊಳಿಸುತ್ತವೆ.
ಸ್ಮಾರ್ಟ್‌ಫೋನ್ ಬ್ಯಾಟರಿ ಡ್ಯಾಮೇಜ್ ಆಗುವುದರಿಂದ ಬ್ಯಾಟರಿ ಬ್ಯಾಕ್ ಅಪ್ ಕಡಿಮೆಯಾಗುತ್ತದೆ. ಇದರಿಂದಾಗಿ ಕೆಲಸಕ್ಕೂ ತೊಡಕುಂಟಾಗುತ್ತದೆ. ಇದನ್ನು ತಪ್ಪಿಸಲು ಸ್ಮಾರ್ಟ್‌ಫೋನ್ ಚಾರ್ಜಿಂಗ್ ಮಾಡುವಾಗ ಕೆಲವು ತಪ್ಪುಗಳಾಗದಂತೆ ನಿಗಾವಹಿಸಬೇಕು.
ಹೆಚ್ಚು ಕಾಲ ಚಾರ್ಜ್ ಮಾಡಿದರೆ ಬ್ಯಾಟರಿ ದೀರ್ಘ ಸಮಯದವರೆಗೆ ಬಾಳಿಕೆ ಬರುತ್ತದೆ ಎಂಬುದು ಕೆಲವರ ತಪ್ಪು ಕಲ್ಪನೆಯಾಗಿದೆ. ಹಾಗಾಗಿಯೇ ರಾತ್ರಿಯಿಡೀ ಫೋನ್ ಚಾರ್ಜ್ ಇಡುತ್ತಾರೆ. ಆದರೆ ಇದು ಬ್ಯಾಟರಿಯ ಮೇಲೆ ಹೆಚ್ಚಿನ ಒತ್ತಡಕ್ಕೆ ಕಾರಣವಾಗಿ ಬ್ಯಾಟರಿಯನ್ನು ಹಾನಿಗೊಳಿಸುತ್ತದೆ.
ಕೆಲವರು ಬ್ಯಾಟರಿ ಫುಲ್ ಖಾಲಿ ಆಗುವವರೆಗೂ ಕೂಡ ಫೋನ್ ಚಾರ್ಜ್ ಮಾಡುವುದಿಲ್ಲ. ಇದೂ ಸಹ ಬ್ಯಾಟರಿ ಬೇಗ ಹಾಳಾಗಲು ಒಂದು ಪ್ರಮುಖ ಕಾರಣವಾಗಿದೆ.
ಫೋನ್ ಚಾರ್ಜ್ ಮಾಡುವಾಗ ನಾವು ಯಾವ ಸ್ಥಳದಲ್ಲಿ ಚಾರ್ಜಿಂಗ್ ಗೆ ಹಾಕುತ್ತೇವೆ ಎಂಬುದು ಕೂಡ ಪ್ರಮುಖ ಸಂಗತಿಯಾಗಿದೆ. ಅಡುಗೆ ಮನೆಯಲ್ಲಿ, ಸೂರ್ಯನ ಕಿರಣಗಳು ನೇರವಾಗಿ ಬೀಳುವ ಜಾಗದಲ್ಲಿ ಫೋನ್ ಚಾರ್ಜ್ ಮಾಡುವುದರಿಂದ ಫೋನ್ ಬ್ಯಾಟರಿ ಹಾಳಾಗುವುದಷ್ಟೇ ಅಲ್ಲ, ಕೆಲವೊಮ್ಮೆ ಬ್ಲಾಸ್ಟ್ ಕೂಡ ಆಗಬಹುದು.
ಎಷ್ಟೋ ಬಾರಿ ಚಾರ್ಜರ್ ಕೆಟ್ಟರೆ ಅಥವಾ ಹಾಳಾಗಿದ್ದರೆ ಇಂತಹ ಸಂದರ್ಭದಲ್ಲಿ ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಎಂದು ಲೋಕಲ್ ಚಾರ್ಜರ್ ಕೊಳ್ಳುವವರೇ ಹೆಚ್ಚು. ಆದರಿದು ನಿಮ್ಮ ದುಬಾರಿ ಫೋನ್ ಬ್ಯಾಟರಿಯನ್ನು ಹಾನಿಗೊಳಿಸುತ್ತದೆ. ಕೆಲವೇ ದಿನಗಳಲ್ಲಿ ಫೋನ್ ಬ್ಯಾಟರಿ ಹಾನಿಗೊಳಗಾಗುತ್ತದೆ.