ತಮ್ಮ ಬಾಳಸಂಗಾತಿ ಜೊತೆ ಹೆಚ್ಚು ವಯಸ್ಸಿನ ಅಂತರ ಹೊಂದಿರುವ ಕ್ರಿಕೆಟಿಗರ ಬಗ್ಗೆ ನಿಮಗೆಷ್ಟು ಗೊತ್ತು!
![ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ಮೆಹ್ತಾ](https://kannada.cdn.zeenews.com/kannada/sites/default/files/Cricketerslife1_0.gif?im=FitAndFill=(500,286))
1995 ರಲ್ಲಿ ಅಂಜಲಿ ಮೆಹ್ತಾ ಅವರನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿವಾಹವಾದರು. ಅಂಜಲಿ ಸಚಿನ್‌ಗಿಂತ 6 ವರ್ಷ ಹಿರಿಯರು.
![ಗ್ಲೆನ್ ಮೆಕ್‌ಗ್ರಾತ್ ಮತ್ತು ಸಾರಾ ಲಿಯೊನಾರ್ಡಿ](https://kannada.cdn.zeenews.com/kannada/sites/default/files/Cricketerslife2.gif?im=FitAndFill=(500,286))
ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಗ್ಲೆನ್ ಮೆಕ್‌ಗ್ರಾತ್ ತಮ್ಮ ಅದ್ಭುತ ಬೌಲಿಂಗ್‌ನಿಂದ ವಿಶ್ವದ ಎಲ್ಲ ಬ್ಯಾಟ್ಸ್‌ಮನ್‌ಗಳನ್ನು ತಲ್ಲಣಗೊಳಿಸಿದ್ದಾರೆ. ಅಂದಹಾಗೆ ಗ್ಲೆನ್‌ನ ಹೆಂಡತಿ ಸಾರಾ ಲಿಯೊನಾರ್ಡಿಗಿಂತ 12 ವರ್ಷ ಚಿಕ್ಕವಳು. ಇಟಾಲಿಯನ್ ಡಿಸೈನರ್ ಸಾರಾ ಮೆಕ್‌ಗ್ರಾತ್ ಅವರ ಎರಡನೇ ಪತ್ನಿ. ಮೆಕ್‌ಗ್ರಾತ್‌ರ ಮೊದಲ ಪತ್ನಿ ಜೇನ್ 2008 ರಲ್ಲಿ ಕ್ಯಾನ್ಸರ್ ನಿಂದ ನಿಧನರಾದರು.
![ವಾಸಿಮ್ ಅಕ್ರಮ್ ಮತ್ತು ಶಾನಯ್ರಾ ಥಾಮ್ಸನ್](https://kannada.cdn.zeenews.com/kannada/sites/default/files/Cricketerslife3.gif?im=FitAndFill=(500,286))
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಮ್ ಅವರು 2013ರಲ್ಲಿ ಆಸ್ಟ್ರೇಲಿಯಾದ ಗೆಳತಿ ಶಾನಯ್ರಾ ಥಾಮ್ಸನ್ ಅವರನ್ನು ವಿವಾಹವಾದರು. ವಾಸಿಮ್ ಅಕ್ರಮ್ ಶಾನಯ್ರಾ ಅವರಿಗಿಂತ 17 ವರ್ಷ ಹಿರಿಯರು. ಶಾನಯ್ರಾ ಅಕ್ರಮ್ ಅವರ ಎರಡನೇ ಹೆಂಡತಿ. 2009 ರಲ್ಲಿ ಅವರ ಮೊದಲ ಪತ್ನಿ ಹುಮಾ ಸಾವನ್ನಪ್ಪಿದರು.
ಈ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟಿಗ ಶಿಖರ್ ಧವನ್ ಅವರ ಹೆಸರೂ ಸೇರಿದೆ. ಶಿಖರ್ 2012 ರಲ್ಲಿ ಆಯೆಷಾ ಮುಖರ್ಜಿ ಅವರನ್ನು ವಿವಾಹವಾದರು. ಆಯೆಷಾ ಶಿಖರ್ ಗಿಂತ 10 ವರ್ಷ ದೊಡ್ಡವಳು.
ಪಾಕಿಸ್ತಾನದ ಮಾಜಿ ಬೌಲರ್ ಶೋಯೆಬ್ ಅಖ್ತರ್ ಅವರು 2014 ರಲ್ಲಿ ರುಬಾಬ್ ಖಾನ್ ಅವರನ್ನು ವಿವಾಹವಾದರು. ರುಬಾಬ್ ಮತ್ತು ಶೋಯೆಬ್ ಅವರ ವಯಸ್ಸಿನ ಅಂತರ ಸಾಕಷ್ಟಿದೆ. ಶೋಯೆಬ್ ತನ್ನ ಹೆಂಡತಿಗಿಂತ 18 ವರ್ಷ ದೊಡ್ಡವರು.