ಕನಸಿನಲ್ಲಿ ಆಗಾಗ್ಗೆ ಈ ವಸ್ತುಗಳ ದರ್ಶನ- ಬಂಪರ್ ಲಾಭದ ಸಂಕೇತ

Thu, 09 Feb 2023-1:14 pm,

ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಕೆಲವು ವಸ್ತುಗಳನ್ನು ನೋಡುವುದನ್ನು ತುಂಬಾ ಶುಭ ಎಂದು ಪರಿಗಣಿಸಲಾಗಿದೆ. ಕನಸ್ಸಿನಲ್ಲಿ ಕೆಲವು ವಸ್ತುಗಳನ್ನು ಆಗಾಗ್ಗೆ ನೋಡುವುದು ಶೀಘ್ರದಲ್ಲೇ ನೀವು ಶ್ರೀಮಂತರಾಗುತ್ತೀರಿ ಎಂಬುದರ ಸಂಕೇತವಾಗಿದೆ.

ಸ್ವಪ್ನ ಶಾಸ್ತ್ರದ ಪ್ರಕಾರ, ಆಗಾಗ್ಗೆ ಕನಸಿನಲ್ಲಿ ಗುಲಾಬಿ ಹೂವನ್ನು ಕಂಡರೆ ಸಂಪತ್ತಿನ ದೇವತೆ ಲಕ್ಷ್ಮಿ ಶೀಘ್ರದಲ್ಲೇ ನಿಮ್ಮ ಮನೆ ಪ್ರವೇಶಿಸಲಿದ್ದಾಳೆ ಎಂಬುದರ ಸಂಕೇತ ಎಂದು ನಂಬಲಾಗಿದೆ.

ನೀವು ನಿಮ್ಮ ಕನಸಿನಲ್ಲಿ ಮಳೆಯನ್ನು ಕಾಣುವುದನ್ನು ಕೂಡ ತುಂಬಾ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಕನಸಿನಲ್ಲಿ ಮಳೆಯನ್ನು ಕಂಡರೆ ಶೀಘ್ರದಲ್ಲೇ ನಿಮ್ಮ ಹಳೆಯ ಸಾಲಗಳಿಂದ ಮುಕ್ತಿ ದೊರೆಯಲಿದೆ ಎಂದರ್ಥ.

ಆಗಸದಲ್ಲಿ ಚಂದ್ರನನ್ನು ನೋಡಿದರೆ ಮನಸ್ಸಿಗೆ ಸಂತಸವಾಗುತ್ತದೆ. ಅಂತೆಯೇ ಸ್ವಪ್ನ ಶಾಸ್ತ್ರದ ಪ್ರಕಾರ, ಕನಸ್ಸಿನಲ್ಲಿ ಚಂದ್ರನನ್ನು ಕಂಡರೆ ನಿಮ್ಮ ಸಂಪತ್ತು ವೃದ್ಧಿಯಾಗುತ್ತದೆ. ನೀವು ಸಮಾಜದಲ್ಲಿ ಗೌರವವನ್ನೂ ಪಡೆಯುತ್ತೀರಿ ಎಂಬುದನ್ನು ಸೂಚಿಸುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪೊರಕೆಯನ್ನು ಲಕ್ಷ್ಮಿ ದೇವಿಯ ರೂಪ ಎಂದು ಪರಿಗಣಿಸಲಾಗುತ್ತದೆ. ನೀವು ಕನಸ್ಸಿನಲ್ಲಿ ಪೊರಕೆಯನ್ನು ಕಂಡರೆ ಶೀಘ್ರದಲ್ಲೇ ನಿಮ್ಮ ಜೀವನದಲ್ಲಿ ಸಂತೋಷ- ಸಮೃದ್ಧಿ ತುಂಬಿ ತುಳುಕುತ್ತದೆ ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link