ಒಂದು ಲಕ್ಷವಾಗಲಿದೆ ಮೂರು ಲಕ್ಷ, ಐದು ವರ್ಷದಲ್ಲಿ ಬಂಪರ್ ರಿಟರ್ನ್ ನೀಡುವ ಇಕ್ವಿಟಿ ಫಂಡ್
Mirae Asset Emerging Bluechipನಲ್ಲಿ 5 ವರ್ಷಗಳಲ್ಲಿ 22% ವಾರ್ಷಿಕ ಲಾಭವನ್ನು ಪಡೆಯಬಹುದು. ಅಂದರೆ 5 ವರ್ಷಗಳ ಹಿಂದೆ ಇಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದ್ದರೆ 2.67 ಲಕ್ಷ ರೂಗಳ ರಿಟರ್ನ್ ಸಿಗುತ್ತದೆ. 5 ಸಾವಿರ ಮಾಸಿಕ ಎಸ್‌ಐಪಿ ಮೌಲ್ಯವು 5.9 ಲಕ್ಷ ರೂ.ಗಳಾಗುತ್ತವೆ.
PGIM India Flexi Cap Fundನಲ್ಲಿ 5 ವರ್ಷಗಳಲ್ಲಿ ವಾರ್ಷಿಕ 20 ಶೇಕಡಾ ಆದಾಯ ಸಿಗುತ್ತದೆ. ಇಲ್ಲಿ 5 ವರ್ಷಗಳಲ್ಲಿ 1 ಲಕ್ಷ ರೂ.ಗಳ ಮೌಲ್ಯ 2.51 ಲಕ್ಷ ರೂಗಳಾಗುತ್ತವೆ. ಅದೇ ಸಮಯದಲ್ಲಿ, 5 ಸಾವಿರ ಮಾಸಿಕ ಎಸ್‌ಐಪಿ ಮೌಲ್ಯವನ್ನು 5.7 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
ಆಕ್ಸಿಸ್ ಮಿಡ್‌ಕ್ಯಾಪ್ ಫಂಡ್‌ನಲ್ಲಿ ಹೂಡಿಕೆದಾರರು 5 ವರ್ಷಗಳಲ್ಲಿ 21% ವಾರ್ಷಿಕ ಲಾಭವನ್ನು ಪಡೆಯುತ್ತಾರೆ. ಇಲ್ಲಿ 5 ವರ್ಷಗಳಲ್ಲಿ 1 ಲಕ್ಷ ರೂ.ಗಳ ಹೂಡಿಕೆಯ ಮೌಲ್ಯ 2.57 ಲಕ್ಷ ರೂ.ಗೆ ಏರಿದೆ. ಇನ್ನು ಮಾಸಿಕ 5 ಸಾವಿರ ಎಸ್‌ಐಪಿ ಮಾಡಿದ್ದರೆ, ಅವರ ಹಣ 5.5 ಲಕ್ಷ ರೂ.ಗಳಷ್ಟಾಗಿರಬಹುದು.
ಎಸ್‌ಬಿಐ ಸ್ಮಾಲ್ ಕ್ಯಾಪ್‌ನಲ್ಲಿ ಹೂಡಿಕೆದಾರರು 5 ವರ್ಷಗಳಲ್ಲಿ 23 ಪ್ರತಿಶತದಷ್ಟು ವಾರ್ಷಿಕ ಲಾಭವನ್ನು ಪಡೆದಿದ್ದಾರೆ. ಇಲ್ಲಿ 1 ಲಕ್ಷ ರೂ.ಗಳ ಹೂಡಿಕೆಯ ಮೌಲ್ಯವು 5 ವರ್ಷಗಳಲ್ಲಿ 2.83 ಲಕ್ಷ ರೂ.ಗೆ ಏರಿದೆ. ಮಾಸಿಕ 5 ಸಾವಿರ ಎಸ್‌ಐಪಿ ಮಾಡಿದ್ದರೆ, ಅವರ ಹಣವು 5.8 ಲಕ್ಷ ರೂ.ಗೆ ಏರಿಕೆಯಾಗಿರಬಹುದು.
Quant Tax Plan ಯೋಜನೆಯು 5 ವರ್ಷಗಳಲ್ಲಿ ವಾರ್ಷಿಕ 25 ಶೇಕಡಾ ಆದಾಯವನ್ನು ನೀಡಿದೆ. ಇಲ್ಲಿ 5 ವರ್ಷಗಳ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಅದು 3 ಲಕ್ಷ ರೂಪಾಯಿಯಾಗುತ್ತಿತ್ತು. ಮಾಸಿಕ 5 ಸಾವಿರ ಎಸ್‌ಐಪಿ ಮೌಲ್ಯವು 6.7 ಲಕ್ಷ ರೂಗೆ ಏರಿದೆ .