Worst Food For Kidney Health: ನಿಮ್ಮ ಅಚ್ಚುಮೆಚ್ಚಿನ ಈ 5 ಆಹಾರ ಸೇವಿಸಿದರೆ ಕಿಡ್ನಿ ವೈಫಲ್ಯವಾಗುತ್ತದೆ!! ಇಂದೇ ತ್ಯಜಿಸಿ
ಆಲೂಗಡ್ಡೆ ಭಾರತದಲ್ಲಿ ಸಾಮಾನ್ಯವಾಗಿ ತಿನ್ನುವ ತರಕಾರಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದನ್ನು ಜಂಕ್ ಫುಡ್‌ನಲ್ಲಿ ಹೆಚ್ಚು ಬಳಸಲಾಗುತ್ತಿದೆ. ಇದರಲ್ಲಿ ಫ್ರೆಂಚ್ ಫ್ರೈ, ಆಲೂಗಡ್ಡೆ ಚಿಪ್ಸ್, ಹ್ಯಾಶ್ ಬ್ರೌನ್ಸ್ ಹೀಗೆ ಹತ್ತು ಹಲವಾರು ತಿನಿಸುಗಳನ್ನು ಮಾಡಲಾಗುತ್ತದೆ. ಆದರೆ ಇದು ಮೂತ್ರ ಪಿಂಡಕ್ಕೆ ಒಳ್ಳೆಯದಲ್ಲ. ಏಕೆಂದರೆ ಇದರಲ್ಲಿ ಪೊಟ್ಯಾಸಿಯಮ್ ಮತ್ತು ಸೋಡಿಯಂ ಅತಿ ಹೆಚ್ಚಾಗಿರುತ್ತದೆ.
ಸಂಸ್ಕರಿಸಿದ ಮಾಂಸವನ್ನು ತಿನ್ನುವ ಪ್ರವೃತ್ತಿಯು ಬಹಳಷ್ಟು ಹೆಚ್ಚಾಗಿದೆ, ಇದರಲ್ಲಿ ಉಪ್ಪು ಅಂದರೆ ಸೋಡಿಯಂ ಪ್ರಮಾಣವು ಹೆಚ್ಚಾಗಿದ್ದು, ನೀವು ದಿನಕ್ಕೆ 2300 ಮಿಗ್ರಾಂಗಿಂತ ಹೆಚ್ಚು ಸೋಡಿಯಂ ಅನ್ನು ಸೇವಿಸಿದರೆ, ರಕ್ತದೊತ್ತಡ ಹೆಚ್ಚಾಗಲು ಪ್ರಾರಂಭಿಸುತ್ತದೆ.
ಇಂದಿನ ಕಾಲದಲ್ಲಿ ಫ್ರೋಜನ್ ಪಿಜ್ಜಾ ತಿನ್ನುವ ಟ್ರೆಂಡ್ ಹೆಚ್ಚಾಗಿದೆ. ಬಿಳಿ ಬ್ರೆಡ್ ಕ್ರಸ್ಟ್ ಮತ್ತು ಟೊಮೆಟೊ ಸಾಸ್‌ನಲ್ಲಿ ಸೋಡಿಯಂ ಹೆಚ್ಚು ಇರುತ್ತದೆ. ಇದಲ್ಲದೆ, ಹೆಚ್ಚಿನ ಕೊಬ್ಬಿನ ಚೀಸ್ ಮೂತ್ರಪಿಂಡಕ್ಕೆ ಹಾನಿಯನ್ನುಂಟು ಮಾಡುತ್ತದೆ. ಹಾಗಾಗಿ ಇಂತಹ ಪದಾರ್ಥಗಳನ್ನು ತಿನ್ನುವುದರಿಂದ ದೂರವಿರಿ.
ಶೀತ, ಜ್ವರ ಅಥವಾ ನೋಯುತ್ತಿರುವ ಗಂಟಲು ಗುಣಪಡಿಸಲು ಸೂಪ್ ಅನ್ನು ಅತ್ಯುತ್ತಮ ಮಾರ್ಗವೆಂದು ಪರಿಗಣಿಸಲಾಗುತ್ತದೆ, ಆದರೆ ಅದರಲ್ಲಿ ಉಪ್ಪಿನ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ.
ಸೋಯಾ ಸಾಸ್‌ನಲ್ಲಿ ಸೋಡಿಯಂ ಪ್ರಮಾಣವು ತುಂಬಾ ಹೆಚ್ಚಾಗಿದೆ. ಒಂದು ಟೀ ಚಮಚ ಸಾಸ್‌ನಲ್ಲಿ ಸುಮಾರು 950 ಮಿಗ್ರಾಂ ಸೋಡಿಯಂ ಕಂಡುಬರುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)