ಬಾಯಿ ಚಪ್ಪರಿಸಿಕೊಂಡು ತಿನ್ನುವ ಈ ಆಹಾರಗಳಿಂದ ವೇಗವಾಗಿ ಹೆಚ್ಚುತ್ತದೆ ಕೊಲೆಸ್ಟ್ರಾಲ್ ..!

Wed, 19 Oct 2022-3:57 pm,

ಕೊಲೆಸ್ಟ್ರಾಲ್ ಒಂದು ರೀತಿಯ ಜಿಗುಟಾದ ವಸ್ತು. ಇದು ಹಾರ್ಮೋನುಗಳನ್ನು ನಿಯಂತ್ರಿಸುವುದು ಮಾತ್ರವಲ್ಲದೆ ದೇಹದ ಇತರ ಪ್ರಮುಖ ಕಾರ್ಯಗಳಿಗೂ ಸಹಕಾರಿಯಾಗಿದೆ. ಆದರೆ ಕೊಲೆಸ್ಟ್ರಾಲ್ ನಿರ್ದಿ ಷ್ಟ  ಮಟ್ಟಕ್ಕಿಂತ ಹೆಚ್ಚಾದರೆ  ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಇದಕ್ಕಾಗಿ ನೀವು ಸರಿಯಾದ ಆಹಾರವನ್ನು ಆರಿಸಬೇಕಾಗುತ್ತದೆ. 

ನೀವು ನಿಯಮಿತವಾಗಿ ಹುರಿದ  ಆಹಾರಗಳನ್ನು ತಿನ್ನುತ್ತಿದ್ದರೆ, ಅದು ನಿಮ್ಮ ಕೊಬ್ಬನ್ನು ಹೆಚ್ಚಿಸಲು ಮಾತ್ರವಲ್ಲ ಕ್ಯಾಲೊರಿಯನ್ನು ಕೂಡಾ  ಹೆಚ್ಚಿಸುತ್ತದೆ. ಇದು ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಹುರಿದ ಆಹಾರಗಳಲ್ಲಿ ಕೊಬ್ಬಿನಾಂಶ ಹೆಚ್ಚಿರುತ್ತದೆ. ಅಷ್ಟೇ ಅಲ್ಲ, ಇದು ನಿಮ್ಮ ಹೃದಯದ ಆರೋಗ್ಯಕ್ಕೆ ಹಾನಿಕಾರಕವಾದ ಟ್ರಾನ್ಸ್ ಕೊಬ್ಬನ್ನು ಹೊಂದಿರುತ್ತದೆ. ಇದಕ್ಕಾಗಿ, ಹುರಿದ ಆಹಾರವನ್ನು  ಮತ್ತೆ ಮತ್ತೆ ಹುರಿದು ತಿನ್ನುವುದನ್ನು ತಪ್ಪಿಸಬೇಕು. ಬದಲಾಗಿ ಗ್ರಿಲ್ ಮಾಡಿ ಅಥವಾ ಬೇಯಿಸಿ ತಿನ್ನುವುದು ಸೂಕ್ತ .

ಬೇಕ್ ಮಾಡಿದ ಆಹಾರ ಮತ್ತು ಸಂಸ್ಕರಿಸಿದ ಆಹಾರಗಳ ನಿಯಮಿತ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಈ ವಸ್ತುಗಳಲ್ಲಿರುವ ಕೊಬ್ಬು ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳ ಪ್ರಮಾಣವು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಈ ಆಹಾರಗಳಲ್ಲಿರುವ ಕಾರ್ಬೋಹೈಡ್ರೇಟ್‌ಗಳು ರಕ್ತದಲ್ಲಿರುವ ಟ್ರೈಗ್ಲಿಸರೈಡ್ ಮತ್ತು ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ. 

ಸಾಸೇಜ್‌ಗಳು, ಡೆಲಿ ಮಾಂಸಗಳು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತವೆ. ಮಾಂಸದಲ್ಲಿರುವ ಸೋಡಿಯಂ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ನಿಯಮಿತವಾಗಿ ಸಂಸ್ಕರಿಸಿದ ಮಾಂಸ ಸೇವನೆಯು ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಹೆಚ್ಚಿಸುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link