ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಹೊರಹಾಕಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸುತ್ತವೆ ಈ 5 ಆಹಾರಗಳು

Wed, 12 Oct 2022-3:32 pm,

ರಾಗಿ, ಬಾರ್ಲಿ, ರಾಗಿ, ಜೋಳ ಮುಂತಾದ ಧಾನ್ಯಗಳು ಫೈಬರ್ ಮತ್ತು ಇತರ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇದು ರಕ್ತ ನಾಳಗಳಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರ ನಿಯಮಿತ ಸೇವನೆಯು ಹೃದ್ರೋಗದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.  

ಫೈಬರ್ ಪ್ರಮಾಣ ಹೆಚ್ಚಿರುವ ಅನೇಕ ಹಣ್ಣುಗಳಿವೆ. ಅವುಗಳೆಂದರೆ - ಸೇಬು, ಪೇರಳೆ, ಪಪ್ಪಾಯಿ, ಅನಾನಸ್ ಇತ್ಯಾದಿ. ಈ ಹಣ್ಣುಗಳು  ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತವೆ. 

ಫೋಲೇಟ್ ಮತ್ತು ಮೊನೊಸಾಚುರೇಟೆಡ್ ಕೊಬ್ಬುಗಳು ಆವಕಾಡೊದಲ್ಲಿ ಕಂಡುಬರುತ್ತವೆ. ಇದು ದೇಹದಲ್ಲಿ ಎಚ್‌ಡಿಎಲ್ ಮಟ್ಟವನ್ನು ಕಾಪಾಡಿಕೊಳ್ಳುತ್ತದೆ ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.  

ಅಗಸೆ ಬೀಜಗಳು ಮತ್ತು ಅಗಸೆಬೀಜದ ಎಣ್ಣೆಯು ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ. ಅಗಸೆಬೀಜವು ಸಸ್ಯ-ಆಧಾರಿತ ಆಹಾರವಾಗಿದೆ. ಇದರಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ಹೃದಯ ಕಾಯಿಲೆಗಳಿಂದ ರಕ್ಷಿಸಳು ಸಹಾಯ ಮಾಡುತ್ತದೆ. 

ಬಾದಾಮಿ ಪಿಸ್ತಾ ಕಡಲೆಕಾಯಿಗಳು ಇವೆಲ್ಲವೂ ಆರೋಗ್ಯಕರ ಕೊಬ್ಬಿನ ಮೂಲಗಳಾಗಿರುವ ಬೀಜಗಳಾಗಿವೆ. ಇದು ಹೃದಯವನ್ನು ಆರೋಗ್ಯಕರವಾಗಿಡಲು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link