Dengue Treatment: ಈ ಆಹಾರಗಳು ಡೆಂಗ್ಯೂ ಚಿಕಿತ್ಸೆಯಲ್ಲಿ ರಾಮಬಾಣವಿದ್ದಂತೆ
ಎಳನೀರು: ರಕ್ತ ಪರಿಚಲನೆಗೆ ದೇಹದಲ್ಲಿ ಸಾಕಷ್ಟು ಪ್ರಮಾಣದ ನೀರು ಇರುವುದು ಬಹಳ ಮುಖ್ಯ. ಎಳ ನೀರು ದೇಹದಲ್ಲಿನ ನೀರಿನ ಕೊರತೆಯನ್ನು ತ್ವರಿತವಾಗಿ ತುಂಬುತ್ತದೆ. ಡೆಂಗ್ಯೂ ಜ್ವರ ಇರುವವರು ಎಳ ನೀರನ್ನು ಕುಡಿಯುವುದರಿಂದ, ರೋಗಿಯ ಪ್ಲೇಟ್ಲೆಟ್ ಸಂಖ್ಯೆಯು ಶೀಘ್ರವಾಗಿ ಚೇತರಿಸಿಕೊಳ್ಳುತ್ತದೆ.
ಪಪ್ಪಾಯಿ ಎಲೆಗಳು: ಪಪ್ಪಾಯಿ ಎಲೆಗಳ ರಸವು ಪ್ಲೇಟ್ಲೆಟ್ಗಳನ್ನು ಹೆಚ್ಚಿಸಲು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ. 2009 ರಲ್ಲಿ ಮಲೇಷ್ಯಾದಲ್ಲಿ ನಡೆಸಿದ ಸಂಶೋಧನೆಯು ಡೆಂಗ್ಯೂ ಜ್ವರದಲ್ಲಿ ಪಪ್ಪಾಯಿ ಎಲೆಯು ಅತ್ಯುತ್ತಮ ಔಷಧವಾಗಿದೆ ಎಂದು ಕಂಡುಹಿಡಿದಿದೆ. ಡೆಂಗ್ಯೂ ರೋಗಿಯು ದಿನಕ್ಕೆ 10-20 ಮಿಲಿ ಪಪ್ಪಾಯಿ ರಸವನ್ನು ಕುಡಿಯುವುದರಿಂದ ಪ್ಲೆಟ್ಲೆಟ್ ಸಂಖ್ಯೆ ಹೆಚ್ಚಾಗುತ್ತದೆ.
ಕಿವಿ: ಕಿವಿಯಲ್ಲಿ ವಿಟಮಿನ್-ಸಿ, ವಿಟಮಿನ್-ಇ ಮತ್ತು ಪಾಲಿಫಿನಾಲ್ ಗಳಿವೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಒಂದು ಕಿವಿ ಹಣ್ಣನ್ನು ತಿನ್ನುವುದರಿಂದ ಪ್ಲೇಟ್‌ಲೆಟ್‌ಗಳ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತದೆ. ಈ ಹಣ್ಣಿನಿಂದ ಕೊಲೆಸ್ಟ್ರಾಲ್ ಕೂಡ ನಿಯಂತ್ರಣದಲ್ಲಿರುತ್ತದೆ.
ದಾಳಿಂಬೆ: ದಾಳಿಂಬೆ ಕೂಡ ಪೌಷ್ಟಿಕ ಹಣ್ಣು. ಇದರಲ್ಲಿ ಕಬ್ಬಿಣವು ಹೇರಳವಾಗಿ ಕಂಡುಬರುತ್ತದೆ. ಹಿಮೋಗ್ಲೋಬಿನ್ ಮತ್ತು ಪ್ಲೇಟ್ಲೆಟ್ಗಳ ಪ್ರಮಾಣವನ್ನು ಹೆಚ್ಚಿಸಲು ಇದು ತುಂಬಾ ಸಹಾಯಕವಾಗಿದೆ. ಡೆಂಗ್ಯೂ ರೋಗಿಗಳು ಪ್ರತಿದಿನ ಮನೆಯಲ್ಲಿ ದಾಳಿಂಬೆ ರಸವನ್ನು ಸೇವಿಸುವುದು ಪ್ರಯೋಜನಕಾರಿ ಆಗಿದೆ.
ಬೀಟ್ರೂಟ್: ಬೀಟ್ರೂಟ್ನಲ್ಲಿ ಆಂಟಿಆಕ್ಸಿಡೆಂಟ್ಗಳು ಹೇರಳವಾಗಿ ಕಂಡುಬರುತ್ತವೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಹಿಮೋಗ್ಲೋಬಿನ್ ಮತ್ತು ಪ್ಲೇಟ್ಲೆಟ್ಗಳ ಪ್ರಮಾಣವನ್ನು ಸುಧಾರಿಸುತ್ತದೆ. ಇದರ 10 ಮಿಲಿ ತಾಜಾ ರಸವು ರೋಗಿಗೆ ಪ್ರಯೋಜನವನ್ನು ನೀಡುತ್ತದೆ. ನಿಮಗೆ ಬೇಡಿದ್ದರೆ ಇದನ್ನು ಸಲಾಡ್ ರೂಪದಲ್ಲಿಯೂ ಸೇವಿಸಬಹುದು.
ಕುಂಬಳಕಾಯಿ: ಕುಂಬಳಕಾಯಿಯಲ್ಲಿ ವಿಟಮಿನ್-ಕೆ ಸಮೃದ್ಧವಾಗಿದೆ. ವಿಟಮಿನ್ ಕೆ ರಕ್ತವನ್ನು ಹೆಪ್ಪುಗಟ್ಟಲು ಕಾರ್ಯನಿರ್ವಹಿಸುತ್ತದೆ. 150 ಮಿಲಿ ಕುಂಬಳಕಾಯಿ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಪ್ರತಿದಿನ ಸೇವಿಸುವುದರಿಂದ ಪ್ಲೇಟ್ಲೆಟ್ಗಳು ಹೆಚ್ಚಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.