ಹಬ್ಬದ ನೆಪದಲ್ಲಿ ಮಿತಿ ಮೀರಿ ತಿಂದರೆ ಈ 4 ಆಹಾರ ಪದಾರ್ಥ, ರಕ್ತದಲ್ಲಿ ಹೆಚ್ಚುವುದು ಕೆಟ್ಟ ಕೊಲೆಸ್ಟ್ರಾಲ್
ಖರ್ಜಿ ಕಾಯಿ ಹೆಸರು ಕೇಳಿದರೆ ಬಾಯಲ್ಲಿ ನೀರೂರುತ್ತದೆ. ಈ ಸಿಹಿ ತಿಂಡಿಯನ್ನು ಮಾಡಲು ಮೈದಾ ಮತ್ತು ಖೋವಾ ಬಳಸಲಾಗುತ್ತದೆ. ಆದರೆ ಸಕ್ಕರೆ ಮತ್ತು ಎಣ್ಣೆಯ ಅತಿಯಾದ ಬಳಕೆಯಿಂದಾಗಿ, ಇದನ್ನು ಹೆಚ್ಚು ತಿನ್ನಬಾರದು.
ಸಾಮಾನ್ಯ ದಿನಗಳಲ್ಲಿಯೂ ಜಿಲೇಬಿಯನ್ನು ತಿನ್ನುತ್ತಾರೆ. ಆದರೆ ದೀಪಾವಳಿ ಸಂದರ್ಭದಲ್ಲಿ, ಈ ಸಿಹಿ ತಿಂಡಿಗೆ ತುಸು ಹೆಚ್ಚಿನ ಬೇಡಿಕೆ. ಆದರೆ ಕೊಲೆಸ್ಟ್ರಾಲ್ ಹೆಚ್ಚಾಗಲು ಕಾರಣವಾಗಿರುವ ಜಿಲೇಬಿಯಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು.
ದೀಪಾವಳಿಯ ಸಂದರ್ಭದಲ್ಲಿ ಕರಿದ ತಿನಿಸುಗಳನ್ನು ಹೆಚ್ಚು ಮಾಡಲಾಗುತ್ತದೆ. ಆದರೆ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ.
ಪ್ರತಿ ದೀಪಾವಳಿಯಲ್ಲಿ ಲಡ್ಡುವಿಗೆ ಒಂದು ಸ್ಥಾನ ಇರುತ್ತದೆ. ವಿವಿಧ ಬಗೆಯ ಲಡ್ಡುಗಳನ್ನೂ ಕೂಡಾ ತಯಾರಿಸಲಾಗುತ್ತದೆ. ಆದರೆ ಇದನ್ನು ಹೆಚ್ಚು ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗುವುದು ಮಾತ್ರವಲ್ಲ, ಹೊಟ್ಟೆಯ ಸಮಸ್ಯೆಗಳು ಕೂಡಾ ಎದುರಾಗಬಹುದು.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)