ಕೈಕೊಟ್ಟ ಅದೃಷ್ಟ... ಟೀಂ ಇಂಡಿಯಾ ಪರ ಎಷ್ಟೇ ಉತ್ತಮ ಪ್ರದರ್ಶನ ತೋರಿದ್ರೂ ಸಿಗದ ಬೆಲೆ! ಮೂಲೆಗುಂಪಾಗಿದ್ದ 4 ದಿಗ್ಗಜರು ನಿವೃತ್ತಿ ಘೋಷಣೆ?
ಟೀಂ ಇಂಡಿಯಾದ 4 ಬಲಿಷ್ಠ ಆಟಗಾರರು ಶೀಘ್ರದಲ್ಲೇ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಸಿಸಿಐ ಈಗಾಗಲೇ ಈ 4 ಆಟಗಾರರನ್ನು ಟೀಂ ಇಂಡಿಯಾದಿಂದ ತೆಗೆದುಹಾಕಿದೆ ಎನ್ನಲಾಗಿದೆ. ಈ 4 ಭಾರತೀಯ ಆಟಗಾರರ ಅಂತರಾಷ್ಟ್ರೀಯ ವೃತ್ತಿಜೀವನವು ಬಹುತೇಕ ಮುಗಿದಿದ್ದು, ಭಾರತ ತಂಡದ ಬಾಗಿಲು ಮುಚ್ಚಿದಂತಿದೆ.
2012 ರಲ್ಲಿ ಭುವನೇಶ್ವರ್ ಕುಮಾರ್ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಆ ಸಂದರ್ಭದಲ್ಲಿ ಟೀಂ ಇಂಡಿಯಾ ಪರ ಭರ್ಜರಿಯಾಗಿ ಮಿಂಚಿದ್ದರು. ಆದರೆ ಇತ್ತೀಚೆಗೆ ಅವರ ಪ್ರದರ್ಶನವು ತುಂಬಾ ಕಳಪೆಯಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ವಿಂಗ್ ಬೌಲಿಂಗ್ ಮೂಲಕ ಮೆಚ್ಚುಗೆ ಗಳಿಸಿದ್ದ ಭುವನೇಶ್ವರ್, ಗಾಯದ ಕಾರಣದಿಂದ ಅನೇಕ ಬಾರಿ ತಂಡದಿಂದ ಹೊರಗುಳಿಯಬೇಕಾಯಿತು. ಇದೀಗ ಅವರಿಗೆ ಒಂದೇ ಟೆಸ್ಟ್‌ನಲ್ಲಿ ಆಡಲು ಅವಕಾಶ ಸಿಗುತ್ತಿಲ್ಲಹಿಂದೆ ಬೀಳುತ್ತವೆ
ವೃದ್ಧಿಮಾನ್ ಸಹಾ ಉತ್ತಮ ವಿಕೆಟ್ ಕೀಪರ್. ಆದರೆ, ಟೆಸ್ಟ್‌ನಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಸಹಾ 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ, ಸಹಾ ಕೇವಲ 40 ಟೆಸ್ಟ್ ಪಂದ್ಯಗಳನ್ನು ಆಡಲು ಸಾಧ್ಯವಾಗಿದೆ. 40ರ ಹರೆಯದ ವೃದ್ಧಿಮಾನ್ ಸಹಾ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳುವುದಿಲ್ಲ ಎಂದು ಭಾರತ ತಂಡದ ಮ್ಯಾನೇಜ್‌ಮೆಂಟ್ ಆಯ್ಕೆದಾರರಿಗೆ ತಿಳಿಸಿತ್ತು.
ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಕರುಣ್ ನಾಯರ್ ಟ್ರಿಪಲ್ ಸೆಂಚುರಿ ಬಾರಿಸಿದಾಗ ಕರುಣ್ ನಾಯರ್ ದೀರ್ಘಾವಧಿಯ ಆಟಗಾರನಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ತ್ರಿಶತಕ ಬಾರಿಸಿದ ಬಳಿಕ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದ ಕಾರಣ ಅವರನ್ನು ತಂಡದಿಂದ ಕೈಬಿಡಲಾಯಿತು. ಅವರು ಕೊನೆಯದಾಗಿ ಮಾರ್ಚ್ 2017 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯವನ್ನಾಡಿದ್ದರು.
ಟೀಂ ಇಂಡಿಯಾದ ವೇಗದ ಬೌಲರ್ ಇಶಾಂತ್ ಶರ್ಮಾ ಅಂತಾರಾಷ್ಟ್ರೀಯ ವೃತ್ತಿಜೀವನ ಬಹುತೇಕ ಮುಗಿದಿದೆ. ನವೆಂಬರ್ 2021 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ ಕಾನ್ಪುರ ಟೆಸ್ಟ್‌ನಲ್ಲಿ ಇಶಾಂತ್ ಶರ್ಮಾ ಕೊನೆಯ ಬಾರಿಗೆ ಕಾಣಿಸಿಕೊಂಡರು. ಆ ಪಂದ್ಯದಲ್ಲಿ ಅವರಿಗೆ ಒಂದೇ ಒಂದು ವಿಕೆಟ್ ಕೂಡ ಕಬಳಿಸಲು ಸಾಧ್ಯವಾಗಲಿಲ್ಲ. ಆ ನಂತರ, ಇಶಾಂತ್ ಶರ್ಮಾಗೆ ಮತ್ತೆ ಟೀಮ್ ಇಂಡಿಯಾದಲ್ಲಿ ಆಡಲು ಅವಕಾಶ ನೀಡಲಾಗಿಲ್ಲ. ಟೀಂ ಇಂಡಿಯಾದಲ್ಲಿ ಪೈಪೋಟಿ ನಿರಂತರವಾಗಿ ಹೆಚ್ಚುತ್ತಿದೆ. ಶಮಿ, ಬುಮ್ರಾ ಮತ್ತು ಸಿರಾಜ್ ಅವರಂತಹ ಬೌಲರ್‌ಗಳು ಟೆಸ್ಟ್ ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಿರುವಾಗ ಟೀಂ ಇಂಡಿಯಾದಿಂದ ಇಶಾಂತ್ ಶರ್ಮಾ ಹೊರಬೀಳಲಿದ್ದಾರೆ ಎಂಬುದು ಸ್ಪಷ್ಟವಾಗಿ ತೋರುತ್ತಿದೆ.