ಎಷ್ಟೇ ಸೆಖೆ ಇರಲಿ... ಮನೆಯೊಳಗೆ ಈ ಗಿಡ ಬೆಳೆಸಿದರೆ ಬಿರುಬೇಸಿಗೆಯಲ್ಲೂ ಕಾಶ್ಮೀರದಂತಹ ಅನುಭವ ಸಿಗುವುದು ಗ್ಯಾರಂಟಿ! ಎಸಿ, ಫ್ಯಾನ್ ಅಗತ್ಯವೇ ಇರಲ್ಲ
ಮಳೆಗಾಲ ಮುಗಿದು ಚಳಿಗಾಲ ಇನ್ನೇನು ಶುರುವಾಗುತ್ತಿದೆ. ಆದರೆ ಬಿಸಿಲಿನ ತಾಪ ಮಾತ್ರ ಜನರನ್ನು ಬೆಂಬಿಡದೆ ಕಾಡುತ್ತಿದೆ. ಚಳಿಗಾಲ ಇಲ್ಲವೇನೋ... ನೇರವಾಗಿ ಬೇಸಿಗೆಯೇ ಶುರುವಾಯಿತೋ ಎಂಬಂತೆ ಭಾಸವಾಗುತ್ತಿದೆ. ಹೀಗಿರುವಾಗ ಮನೆಯಲ್ಲಿ ಕೆಲವೊಂದು ಗಿಡಗಳನ್ನು ಬೆಳೆಸುವುದರಿಂದ ಮನೆಯನ್ನು ತಂಪಾಗಿಸುವುದಲ್ಲದೆ, ಪರೋಕ್ಷವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಇನ್ನು ಮನೆಯನ್ನು ನೈಸರ್ಗಿಕವಾಗಿ ತಂಪಾಗಿಸುವ ಗಿಡಗಳ ಬಗ್ಗೆ ನಿಮಗೆ ಇಲ್ಲಿ ತಿಳಿಸಿಕೊಡಲಿದ್ದೇವೆ. ಇದು ಮನೆಯ ಸೌಂದರ್ಯ ಹೆಚ್ಚಿಸುವುದಲ್ಲದೆ, ತಂಪಾಗಿರಿಸಲು ಸಹ ಸಹಾಯ ಮಾಡುತ್ತದೆ.
ಅಲೋವೆರಾ ಗಿಡ ಆರೋಗ್ಯಕ್ಕೆ ಸಂಜೀವಿನಿ ಕೂಡ ಹೌದು. ಇದಷ್ಟೇ ಅಲ್ಲ, ಬೇಸಿಗೆಯಲ್ಲಿ ಈ ಗಿಡವನ್ನು ಮನೆಯೊಳಗೆ ನೆಟ್ಟರೆ ಗಾಳಿಯ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.
ಇನ್ನೊಂದು ಗಿಡವೆಂದರೆ ಅತ್ಯಂತ ಪ್ರಸಿದ್ಧವಾದ ಲಿವಿಂಗ್ ರೂಮ್ ಸಸ್ಯ ಅರೆಕಾ ಪಾಮ್. ಇದು ಅಲಂಕಾರಿಕ ಒಳಾಂಗಣ ಸಸ್ಯವೂ ಹೌದು, ಜೊತೆಗೆ ನೈಸರ್ಗಿಕ ಆರ್ದ್ರಕವಾಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ಒಳಾಂಗಣ ಗಾಳಿಯನ್ನು ನೈಸರ್ಗಿಕವಾಗಿ ತೇವವಾಗಿಡಲು ಸಹಾಯ ಮಾಡುವ ಸಸ್ಯವಾಗಿದೆ.
ವೀಪಿಂಗ್ ಫಿಗ್ ಎಂದು ಕರೆಯಲ್ಪಡುವ ಫಿಕಸ್ ಟ್ರೀಯನ್ನು ಕೂಡ ಮನೆಯೊಳಗಿನ ಅಥವಾ ಕೋಣೆಯೊಳಗಿನ ತಾಪಮಾನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಜರೀಗಿಡ ಕೂಡ ಮನೆಯನ್ನು ಕೂಲ್ ಆಗಿಡಲು ಸಹಾಯಕ. ಇದು ಮನೆಯನ್ನು ತಂಪಾಗಿಡುವುದಷ್ಟೇ ಅಲ್ಲ, ಗಾಳಿಯಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಸಸ್ಯವು ರಾತ್ರಿಯಲ್ಲಿ ಆಮ್ಲಜನಕವನ್ನು ಒದಗಿಸುವ ಜೊತೆಗೆ ಮನೆಯೊಳಗಿನ ಪರಿಸರವನ್ನು ತಂಪಾಗಿರಿಸುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಇದನ್ನು ಅನುಮೋದಿಸುವುದಿಲ್ಲ