Lucky Zodiacs: 2024ರ ಅದೃಷ್ಟದ ರಾಶಿಗಳಿವು, ಸುಖ-ಸಂಪತ್ತಿಗೆ ಕೊರತೆಯೇ ಇರುವುದಿಲ್ಲ

Tue, 21 Nov 2023-6:36 am,

ಹೊಸ ವರ್ಷ 2024ರ ಆರಂಭಕ್ಕೆ ಇನ್ನೊಂದು ತಿಂಗಳಷ್ಟೇ ಬಾಕಿ ಉಳಿದಿದೆ. ಹೊಸ ವರ್ಷ ಪ್ರತಿಯೊಬ್ಬರ ಜೀವನದಲ್ಲೂ ಹೊಸ ಭರವಸೆ, ಉತ್ಸಾಹವನ್ನು ಹೊತ್ತು ತರುತ್ತದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರವು ಹೊಸ ವರ್ಷ ಕೆಲವು ರಾಶಿಯವರ ಜೀವನದಲ್ಲಿ ಹೊಸ ಬೆಳಕನ್ನು ತರಲಿದೆ ಎಂದು ಹೇಳಲಾಗುತ್ತಿದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2024ರಲ್ಲಿ ಕೆಲವು ರಾಶಿಯವರು ವೃತ್ತಿ ಬದುಕಿನಲ್ಲಿ ಯಶಸ್ಸು, ವ್ಯಾಪಾರದಲ್ಲಿ ಲಾಭದ ಜೊತೆಗೆ ಅಪಾರ ಧನ-ಸಂಪತ್ತನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. 

2024ರಲ್ಲಿ ನಾಲ್ಕು ರಾಶಿಯವರ ಜೀವನದಲ್ಲಿ ಭಾಗ್ಯೋದಯವಾಗಲಿದ್ದು, ಇವರ ಅದೃಷ್ಟವೇ ಬದಲಾಗಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಚಕ್ರಗಳೆಂದರೆ... 

ವೃಷಭ ರಾಶಿ: 2024ರಲ್ಲಿ ವೃಷಭ ರಾಶಿಯವರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದು ವೃತ್ತಿಯಲ್ಲಿ ಯಶಸ್ಸು, ಅಪಾರ ಹಣವನ್ನು ಗಳಿಸಲಿದ್ದಾರೆ ಎನ್ನಲಾಗುತ್ತಿದೆ. ಈ ವರ್ಷ ರಾಹು ನಿಮ್ಮ ಜಾತಕದಲ್ಲಿ ಶುಭ ಸ್ಥಾನದಲ್ಲಿ ಇರಲಿದ್ದು ನಿಮ್ಮ ಮನೋಕಾಮನೆಗಳು ಈಡೇರಲಿವೆ. ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳನ್ನು ಮುಂದುವರೆಸುವುದರಿಂದ ಇಷ್ಟಾರ್ಥ ಸಿದ್ಧಿಯಾಗಲಿದೆ. 

ಮಿಥುನ ರಾಶಿ: 2024ರಲ್ಲಿ ಮಿಥುನ ರಾಶಿಯವರು ಉದ್ಯೋಗದಲ್ಲಿ ಬಡ್ತಿ, ವ್ಯಾಪಾರ-ವ್ಯವಹಾರದಲ್ಲಿ ಭಾರೀ ಆರ್ಥಿಕ ಪ್ರಯೋಜನವನ್ನು ಪಡೆಯಲಿದ್ದಾರೆ. ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳು ಬಗೆಹರಿದು ನೆಮ್ಮದಿಯ ಜೀವನವನ್ನು ಅನುಭವಿಸುವಿರಿ. ಶನಿ ಮಹಾತ್ಮನ ಆಶೀರ್ವಾದದಿಂದ ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮೊಂದಿಗಿದ್ದು ಕೈ ಹಾಕಿದ ಕೆಲಸಗಳಲ್ಲೆಲ್ಲಾ ವಿಜಯಮಾಲೆ ಧರಿಸುವಿರಿ. 

ಸಿಂಹ ರಾಶಿ: 2024ರಲ್ಲಿ ಸಿಂಹ ರಾಶಿಯವರಿಗೂ ಕೂಡ ಕರ್ಮಫಲದಾತನ ಸಂಪೂರ್ಣ ಬೆಂಬಲ ದೊರೆಯಲಿದೆ. ಈ ವರ್ಷ ನೀವು ವೈವಾಹಿಕ ಸಂತೋಷವನ್ನು ಕಾಣಬಹುದು.  ಉದ್ಯೋಗದಲ್ಲಿ ಉತ್ತಮ ಯಶಸ್ಸನ್ನು ಕಾಣುವಿರಿ. ನೀವು ಬಯಸಿದರೆ, ನೀವು ನಿಮ್ಮ ವ್ಯಾಪಾರವನ್ನು ವಿಸ್ತರಿಸಬಹುದು. ವಿದೇಶಕ್ಕೆ ತೆರಳುವ ಅವಕಾಶಗಳಿವೆ. ಉತ್ತಮ ಆರೋಗ್ಯ ನಿಮ್ಮದಾಗಲಿದೆ. 

ತುಲಾ ರಾಶಿ: 

ಮುಂದಿನ ವರ್ಷ ತುಲಾ ರಾಶಿಯವರಿಗೆ ಸಂತೋಷದಿಂದ ಕೂಡಿರಲಿದೆ. ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲ ನಿಮಗೆ ದೊರೆಯಲಿದೆ. ಹಣಕಾಸಿನ ಹರಿವು ಹೆಚ್ಚಾಗಲಿದ್ದು ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ವೃತ್ತಿಗೆ ಸಂಬಂಧಿಸಿದಂತೆ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಬೃಹಸ್ಪತಿ ಮತ್ತು ಶನಿ ಆಶೀರ್ವಾದದಿಂದ ಹೊಸ ಉದ್ಯೋಗ ಪಡೆಯುವ ಯೋಗ್ಗವೂ ಇದೆ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link