fruit to control Diabetes : ಬೇರೇನೂ ಬೇಡ ಈ ಹಸಿರು ಹಣ್ಣು ತಿಂದರೆ ಸಾಕು ಬ್ಲಡ್ ಶುಗರ್ ಇಳಿದು ಬಿಡುತ್ತದೆ !
ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ (ಎಡಿಎ) ವರದಿಯ ಪ್ರಕಾರ, ಮಧುಮೇಹದಲ್ಲಿ ಹಣ್ಣುಗಳ ಸೇವನೆಯು ಬಹಳ ಮುಖ್ಯವಾಗಿದೆ. ಹಣ್ಣುಗಳು ತೂಕ ನಷ್ಟ, ಕರುಳಿನ ವ್ಯವಸ್ಥೆ ಮತ್ತು ಫ್ಯಾಟ್ ಬರ್ನ್ ಮಾಡುವ ಕೆಲಸ ಮಾಡುತ್ತದೆ. ಹಾಗೆಯೇ ದೇಹವನ್ನು ಪೋಷಿಸುವ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಸೂಕ್ಷ್ಮ ಪೋಷಕಾಂಶಗಳು ಹಣ್ಣುಗಳಲ್ಲಿ ಕಂಡುಬರುತ್ತವೆ.
ಪೇರಳೆ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪೇರಳೆ ಹಣ್ಣು ಮತ್ತು ಅದರ ಎಲೆಗಳು ಮಧುಮೇಹವನ್ನು ನಿಯಂತ್ರಿಸಲು ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಪೇರಳೆ ಹಣ್ಣಿನಂತೆ ಪಿಯರ್ಸ್ ಕೂಡಾ ಮಧುಮೇಹ ರೋಗಿಗಳಿಗೆ ಸಹಾಯಕವಾಗಿದೆ. ಪೇರಳೆ ಹಣ್ಣಿನಲ್ಲಿ ಆಂಥೋಸಯಾನಿನ್ ಕಂಡುಬರುತ್ತದೆ. ಇದು ಪ್ರಬಲವಾದ ಉತ್ಕರ್ಷಣ ನಿರೋಧಕವಾಗಿದೆ. ಅಲ್ಲದೆ ಇದು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಹಣ್ಣು.ಹೀಗಾಗಿ ಈ ಹಣ್ಣು ಮಧುಮೇಹ ತಡೆಯಲು ಸಹಾಯ ಮಾಡುತ್ತದೆ.
ರುಚಿಕರವಾದ ಹಸಿರು ಸೇಬುಗಳು ಕೆಂಪು ಸೇಬಿನಂತೆಯೇ ಪೌಷ್ಟಿಕ ಅಂಶಗಳ ಆಗರವಾಗಿದೆ. ಮಧ್ಯಮ ಗಾತ್ರದ ಸೇಬು 90 ಕ್ಯಾಲೋರಿಗಳನ್ನು ಮತ್ತು 25 ಗ್ರಾಂ ಕಾರ್ಬೋಹೈಡ್ರೇಟ್ ಗಳನ್ನೂ ಹೊಂದಿರುತ್ತದೆ. ಇದಲ್ಲದೆ, ಅವುಗಳಲ್ಲಿ ನಾರಿನ ಪ್ರಮಾಣವು ಅಧಿಕ. ಇದು ಮಧುಮೇಹ ರೋಗಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ನೆಲ್ಲಿಕಾಯಿ ಮತ್ತು ಇತರ ಹಣ್ಣುಗಳ ಸೇವನೆಯು ಮಧುಮೇಹ ರೋಗಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ. ನೆಲ್ಲಿಕಾಯಿಯನ್ನು ಅನೇಕ ಪೋಷಕಾಂಶಗಳಿಂದ ಕೂಡಿದ ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಸಿ ಮತ್ತು ವಿಟಮಿನ್‌ಗಳು ಕಂಡುಬರುತ್ತವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)