Immunity Booster : ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾ ? ಈ ನಿಯಮಗಳನ್ನು ಪಾಲಿಸಿ

Thu, 31 Dec 2020-5:54 pm,

ಅಮೃತಬಳ್ಳಿ :  ಡಯಾಬಿಟಿಸ್ ರೋಗಿಗಳಿಗೆ  ಅಮೃತಬಳ್ಳಿ ಸಹಕರಿಯಾಗಿದೆ.  ಅಮೃತಬಳ್ಳಿ ಸೇವನೆಯಿಂದ ರಕ್ತದಲ್ಲಿರುವ ಸಕ್ಕರೆ ಅಂಶ ನಿಯಂತ್ರಣದಲ್ಲಿರುತ್ತದೆ. ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ದೇಹ ತೂಕ ಕಡಿಮೆ (Weight Loss) ಮಾಡಲು ಕೂಡಾ ಅಮೃತಬಳ್ಳಿ ನೆರವಾಗುತ್ತದೆ. ಇದೆಲ್ಲದ್ದಕ್ಕಿಂತ ಮುಖ್ಯವಾಗಿ ಅಮೃತಬಳ್ಳಿ ಉತ್ತಮ ರೋಗನಿರೋಧಕವಾಗಿ (Immunity Booster) ಕೆಲಸ ಮಾಡುತ್ತದೆ.

ಅರಶಿನ : ನಮ್ಮ ಮಸಾಲೆ ಪದಾರ್ಥಗಳಲ್ಲಿ ಅರಶಿನಕ್ಕೆ ಪ್ರಮುಖ ಸ್ಥಾನವಿದೆ. ಅರಶಿನದಲ್ಲಿಯೂ ಅನೇಕ ಔಷಧೀಯ ಗುಣಗಳಿವೆ. ಇದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ರಾತ್ರಿ ಒಂದು ಲೋಟ ಹಾಲಿಗೆ ಅರಶಿನ ಬೆರೆಸಿ ಕುಡಿಯುವುದು ಪರಿಣಾಮಕಾರಿಯಾಗಿರುತ್ತದೆ. 

ಕಾಳು ಮೆಣಸು : ಕಾಳು ಮೆಣಸು ಇದೊಂದು ಪ್ರಮುಖ ಸಾಂಬಾರ ಪಾರ್ಥವಾಗಿದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಳುಮೆಣಸಿನ ಉಪಯೋಗ ಹೆಚ್ಚಾಗುತ್ತದೆ. ಅಲ್ಲದೆ ಕಾಳು ಮೆಣಸು ಅಥವಾ ಕರಿಮೆಣಸು ಕೂಡಾ ಉತ್ತಮ ರೋಗನಿರೋಧಕವಾಗಿದೆ. 

ಅಶ್ವಗಂಧ : ಇದೊಂದು ಆಯುರ್ವೇದ ಔಷಧವಾಗಿದೆ. ಇದು ಅದೆಷ್ಟೋ ರೋಗಗಳನ್ನು ಗುಣಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಶ್ವಗಂಧ ಕೂಡಾ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಅಶ್ವಗಂಧ  ಕಾನ್ಸರ್ ಸೆಲ್ ಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ ಎನ್ನಲಾಗಿದೆ.  

ಸರಿಯಾದ ಸಮಯಕ್ಕೆ ನಿದ್ದೆ : ಉತ್ತಮ ಆರೋಗ್ಯ ಹೊಂದಬೇಕಾದರೆ ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡುವುದು ಕೂಡಾ ಮುಖ್ಯ. ಆರೋಗ್ಯವಂತ ಮನುಷ್ಯನಿಗೆ ದಿನವೊಂದಕ್ಕೆ 7 ರಿಂದ 8 ಗಂಟೆಗಳ ಕಾಲ ನಿದ್ದೆ ಬೇಕೇ ಬೇಕು. ಸರಿಯಾಗಿ ನಿದ್ದೆ ಮಾಡುವುದರಿಂದ  ಅನೇಕ ರೀತಿಯ ರೋಗಗಳು ಗುಣವಾಗುತ್ತದೆ. 

ಸರಿಯಾದ ಪ್ರಮಾಣದಲ್ಲಿ ನೀರು ಸೇವನೆ : ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಅನೇಕ ರೋಗಗಳಿಗೆ ಅದು ಎಡೆಮಾಡಿಕೊಡುತ್ತದೆ. ದೇಹವನ್ನು ಫಿಟ್ ಆಗಿ ಇಡಬೇಕಾದರೆ, ಚೆನ್ನಾಗಿ ನೀರು ಸೇವಿಸುವುದು ಮುಖ್ಯ. ಜೀರ್ಣಕ್ರಿಯೆ ಉತ್ತಮವಾಗಬೇಕಾದರೆ ಸರಿಯಾದ ಪ್ರಮಾಣದಲ್ಲಿ ನೀರು ಸೇವಿಸಬೇಕು. ಜೀರ್ಣಕ್ರಿಯೆ ಸರಿಯಾಗಿದ್ದರೆ, ದೇಹದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link