ಡಿವೋರ್ಸ್ ನಂತರ ಬಾಯ್ ಫ್ರೆಂಡ್ ಜೊತೆ Live-in Relationshipsನಲ್ಲಿರುವ ಹೀರೋಯಿನ್ ಗಳು!
ಈ ಪಟ್ಟಿಯಲ್ಲಿನ ಮೊದಲ ಹೆಸರು ಮಲೈಕಾ ಅರೋರಾ. ಅರ್ಬಾಜ್ ಖಾನ್ ಜೊತೆಗಿನ ತನ್ನ 18 ವರ್ಷಗಳ ದಾಂಪತ್ಯವನ್ನು ಮುರಿದುಕೊಂಡು ಮಲೈಕಾ ಅರೋರಾ ವಿಚ್ಛೇದನ ಪಡೆದರು. ಈಗ ಬಾಲಿವುಡ್ ನಟ ಅರ್ಜುನ್ ಕಪೂರ್ ಜೊತೆ ಲಿವ್-ಇನ್ ಸಂಬಂಧದಲ್ಲಿ ಸುಖಜೀವನ ನಡೆಸುತ್ತಿದ್ದಾರೆ.
ಕಾಮ್ಯಾ ಪಂಜಾಬಿಯವರು ಬಂಟಿ ನೇಗಿಯನ್ನು ಮೊದಲ ಬಾರಿಗೆ ವಿವಾಹವಾಗಿದ್ದರು. ಈ ದಂಪತಿಯ ಪ್ರೀತಿಗೆ ಪುತ್ರಿಯೊಬ್ಬಳು ಸಾಕ್ಷಿಯಾದಳು. ಕಾಮ್ಯಾ ಮತ್ತು ಬಂಟಿಯ ವಿವಾಹವು ಸುಮಾರು ಒಂದು ದಶಕದ ಕಾಲ ಚೆನ್ನಾಗಿಯೇ ನಡೆಯಿತು. ಇವರಿಬ್ಬರೂ 2013ರಲ್ಲಿ ವಿಚ್ಛೇದನ ಪಡೆದುಕೊಂಡರು. ನಂತರ ಕಾಮ್ಯಾ ದೆಹಲಿ ಮೂಲದ ವಿಚ್ಛೇದಿತ ಉದ್ಯಮಿ ಶಲಭ್ ದಂಗ್ ಅವರನ್ನು 2ನೇ ಮದುವೆಯಾದರು. ಶಲಭ್ ಅವರಿಗೆ ಮೊದಲ ಮದುವೆಯಿಂದ ಒಬ್ಬ ಮಗನಿದ್ದ. ಮದುವೆಗೂ ಮುನ್ನ ಕಾಮ್ಯಾ ಮತ್ತು ಶಲಭ್ ಕೂಡ ಲಿವ್ ಇನ್‌ನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಪ್ರಸ್ತುತ ಕಾಮ್ಯಾ ಮತ್ತು ಶಲಭ್ ದಂಪತಿ ತಮ್ಮಿಬ್ಬರು ಮಕ್ಕಳೊಂದಿಗೆ ಖುಷಿಯಿಂದಲೇ ಜೀವನ ನಡೆಸುತ್ತಿದ್ದಾರೆ.
ಬಾಲಿವುಡ್ ನಟಿ ಕಲ್ಕಿ ಕೊಚಿನ್ ಅವರು ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರನ್ನು ವಿವಾಹವಾದರು. 4 ವರ್ಷಗಳ ಸಂಸಾರ ನಡೆಸಿದ ಇಬ್ಬರೂ ಬೇರ್ಪಟ್ಟರು. ಬಳಿಕ ಹರ್ಷಬರ್ಗ್ ಜೊತೆ ಕಲ್ಕಿ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಇಬ್ಬರೂ ಲಿವ್-ಇನ್ ನಲ್ಲಿಯೇ ಮುಂದುವರಿದರು. ಕಲ್ಕಿ ಮತ್ತು ಹರ್ಷಬರ್ಗ್ ಅವರ ಪ್ರೀತಿಗೆ ಸಾಕ್ಷಿಯಾಗಿ ಪುತ್ರಿಯ ಜನನವಾಯಿತು.
ನಟಿ ಪೂಜಾ ಬಾತ್ರಾ ಜಹಾನ್ ಇತ್ತೀಚಿನ ದಿನಗಳಲ್ಲಿ ನವಾಬ್ ಷಾರೊಂದಿಗೆ ವೈವಾಹಿಕ ಜೀವನವನ್ನು ಆನಂದಿಸುತ್ತಿದ್ದಾರೆ. ನವಾಬ್ ಷಾಗಿಂತಲೂ ಮೊದಲು ಅಂದರೆ 2002ರಲ್ಲಿ ಪೂಜಾ ಬಾತ್ರಾ ಶಸ್ತ್ರಚಿಕಿತ್ಸಕ ಸೋನು ಅಹ್ಲುವಾಲಿಯಾ ಅವರನ್ನು ವಿವಾಹವಾಗಿದ್ದರು. ಆದರೆ ಈ ಜೋಡಿಯ ಪ್ರೀತಿ ಹೆಚ್ಚು ಕಾಲ ಉಳಿಯಲಿಲ್ಲ. ವರದಿಗಳ ಪ್ರಕಾರ ಮದುವೆಗೂ ಮುನ್ನ ಪೂಜಾ ಬಾತ್ರಾ ಮತ್ತು ನವಾಬ್ ಷಾ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದರು ಎನ್ನಲಾಗಿದೆ.
ಸಹಿಲ್ ಗೆ ವಿಚ್ಛೇದನ ಘೋಷಿಸುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದ ನಟಿ ದಿಯಾ ಮಿರ್ಜಾ ವೈಭವ್ ರೇಖಿ ಜೊತೆಗೆ 2ನೇ ಮದುವೆಯಾಗಿದ್ದಾರೆ. ಈ ದಂಪತಿಗೆ ಗಂಡು ಮಗುವಾಗಿದೆ. ಸಹಿಲ್ ಜೊತೆಗಿನ ಮದುವೆಗೂ ಮುನ್ನ ದಿಯಾ ಲಿವ್ ಇನ್‌ನಲ್ಲಿದ್ದರು ಎಂದು ವರದಿಗಳು ಹೇಳುತ್ತವೆ. ಈ ನಟಿ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದಳು ಅಂತಲೂ ವರದಿಯಾಗಿತ್ತು.
ನಟಿ ರಶ್ಮಿ ದೇಸಾಯಿ 2012ರಲ್ಲಿ ನಟ ನಂದೀಶ್ ಸಿಂಗ್ ಸಂಧು ಅವರನ್ನು ವಿವಾಹವಾದರು. ಆದರೆ ಇವರಿಬ್ಬರೂ 2016ರಲ್ಲಿ ವಿಚ್ಛೇದನ ಪಡೆದುಕೊಂಡರು. ಇದಾದ ನಂತರ ರಶ್ಮಿ ಮತ್ತು ಅರ್ಹಾನ್ ತುಂಬಾ ಆತ್ಮೀಯರಾಗಿರುವ ಬಗ್ಗೆ ಬಿಗ್ ಬಾಸ್‌ನಲ್ಲಿ ಬಹಿರಂಗವಾಯಿತು. ಬಳಿಕ ರಶ್ಮಿಯೊಂದಿಗೆ ಅವರ ಮನೆಯಲ್ಲಿಯೇ ಅರ್ಹಾನ್ ವಾಸಿಸಲು ಪ್ರಾರಂಭಿಸಿದರು.