October 31ಕ್ಕೂ ಮುನ್ನ ಈ ಕೆಲಸಗಳನ್ನು ಪೂರ್ಣಗೊಳಿಸಿ, ಇಲ್ಲದೆ ಹೋದರೆ ಹಾನಿ ಖಂಡಿತ
1. PM Kisan ಯೋಜನೆಯ ನೋಂದಣಿ - ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (PM Kisan) ನೋಂದಾಯಿಸಲು ರೈತರಿಗೆ ಅಕ್ಟೋಬರ್ 31 ರವರೆಗೆ ಸಮಯಾವಕಾಶ ಇದೆ. ಈ ಅವಧಿಯಲ್ಲಿ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಂಡರೆ, ಅವರು ಎರಡು ಕಂತುಗಳನ್ನು ಅಂದರೆ, ಒಟ್ಟು 4,000 ರೂ.ಗಳನ್ನು ಪಡೆಯಲಿದ್ದಾರೆ.
2. HDFC ವಿಶೇಷ ಕೊಡುಗೆ - ಒಂದು ವೇಳೆ ನೀವು ಹೋಮ್ ಲೋನ್ ತೆಗೆದುಕೊಳ್ಳಲು ಯೋಜಿಸುತ್ತಿದ್ದರೆ, ಹೌಸಿಂಗ್ ಫೈನಾನ್ಸ್ ಕಂಪನಿ HDFC (HDFC Home loan) ನ ವಿಶೇಷ ಕೊಡುಗೆ ಈ ತಿಂಗಳ 31 ಅಕ್ಟೋಬರ್‌ಗೆ ಕೊನೆಗೊಳ್ಳುತ್ತದೆ. ಹಬ್ಬದ ಋತುವಿನ ದೃಷ್ಟಿಯಿಂದ HDFC ಗೃಹ ಸಾಲದ ದರಗಳನ್ನು ಕಡಿತಗೊಳಿಸಿದೆ.. ಇದರ ಅಡಿಯಲ್ಲಿ, ಗ್ರಾಹಕರು ವಾರ್ಷಿಕ 6.70% ಆರಂಭಿಕ ಬಡ್ಡಿ ದರದಲ್ಲಿ ಗೃಹ ಸಾಲವನ್ನು ತೆಗೆದುಕೊಳ್ಳಬಹುದು. ಈ ವಿಶೇಷ ಯೋಜನೆಯು 31 ಅಕ್ಟೋಬರ್ 2021 ರವರೆಗೆ ಮಾತ್ರ ಲಭ್ಯವಿರುತ್ತದೆ.
3. SBI ಗ್ರಾಹಕರು ಉಚಿತವಾಗಿ ITR ಸಲ್ಲಿಸಬಹುದು - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರು ಇದೀಗ ಉಚಿತವಾಗಿ ತಮ್ಮ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಬಹುದು. SBI ಗ್ರಾಹಕರು YONO ಅಪ್ಲಿಕೇಶನ್‌ನಲ್ಲಿ Tax2Win ಮೂಲಕ ITR ಅನ್ನು ಸಲ್ಲಿಸಬಹುದು. ಟ್ಯಾಕ್ಸ್ 2 ವಿನ್ ಮೂಲಕ ನೀವು YONO ನಲ್ಲಿ ಇದನ್ನು ಉಚಿತವಾಗಿ ಮಾಡಬಹುದು ಎಂದು ಸಾಮಾಜಿಕ ಮಾಧ್ಯಮದ ಮೂಲಕ SBI ತಿಳಿಸಿದೆ. ಈ ಕೊಡುಗೆ ಅಕ್ಟೋಬರ್ 31 ರವರೆಗೆ ಇರುತ್ತದೆ.
4. ವಾಹನ ನೋಂದಣಿ ಹಾಗೂ DL ನವೀಕರಣ - ನಿಮ್ಮ ವಾಹನದ ನೋಂದಣಿ, ಚಾಲನಾ ಪರವಾನಗಿ ಮತ್ತು ಫಿಟ್‌ನೆಸ್ ಪ್ರಮಾಣಪತ್ರದಂತಹ ದಾಖಲೆಗಳನ್ನು ನವೀಕರಿಸಲು ಅಕ್ಟೋಬರ್ 31 ಕೊನೆಯ ದಿನಾಂಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಈ ಡಾಕ್ಯುಮೆಂಟ್‌ಗಳನ್ನು ನವೀಕರಿಸಲು ಬಯಸಿದರೆ, ಶೀಘ್ರದಲ್ಲೇ ಅದನ್ನು ಮಾಡಿ. ನೀವು ಇದನ್ನು ಮಾಡದಿದ್ದರೆ, ನೀವು ತೊಂದರೆ ಎದುರಿಸಬೇಕಾಗಬಹುದು, ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕೇಂದ್ರ ಸಾರಿಗೆ ಸಚಿವಾಲಯವು ಚಾಲನಾ ಪರವಾನಗಿ (DL), ನೋಂದಣಿ ಪ್ರಮಾಣಪತ್ರ (RC) ಮತ್ತು ಪರ್ಮಿಟ್‌ನ ಮಾನ್ಯತೆಯನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸಿದೆ.