Photo Gallery: ಖ್ಯಾತ ಕ್ರಿಕೆಟ್ ಆಟಗಾರರ ಬಳಿ ಇವೆ ಈ ಶ್ವಾನಗಳು…
ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ಅವರ ಶ್ವಾನಪ್ರೀತಿಯ ಬಗ್ಗೆ ಹೇಳಲೇಬೇಕಿಲ್ಲ. ಅವರೊಬ್ಬ ಶ್ವಾನಪ್ರಿಯ ಎಂಬುದು ಪ್ರತಿಯೊಬ್ಬ ಅಭಿಮಾನಿಗೂ ಗೊತ್ತಿದೆ. ಒತ್ತಡದಲ್ಲಿದ್ದಾಗ ಅಥವಾ ದೀರ್ಘ ಸರಣಿಯ ಬಳಿಕ ಮನೆಗೆ ಬಂದ ನಂತರ ಅವರು ಶ್ವಾನಗಳ ಜೊತೆ ಕಾಲ ಕಳೆಯುತ್ತಾರೆ. ಅವರು ತಮ್ಮ ಮನೆಯಲ್ಲಿ ವಿವಿಧ ಜಾತಿಗೆ ಸೇರಿದ ನಾಯಿಗಳನ್ನು ಸಾಕುತ್ತಿದ್ದಾರೆ. ಸಾರಾ ಹೆಸರಿನ ಜರ್ಮನ್ ಶೆಫರ್ಡ್, ಜಾರಾ ಹೆಸರಿನ ಲ್ಯಾಬ್ರಡಾರ್ ಮತ್ತು ಜೋಯಾ ಹೆಸರಿನ ವೀಮರನರ್ ಜಾತಿಗೆ ಸೇರಿದ ಶ್ವಾನಗಳನ್ನು ಅವರು ಹೊಂದಿದ್ದಾರೆ.
ಟೀಂ ಇಂಡಿಯಾದ ಸ್ಟೈಲಿಶ್ ಬ್ಯಾಟ್ಸ್ ಮನ್ ಕೆ.ಎಲ್.ರಾಹುಲ್ ಅವರು ಚೌ ಚೌ ಎಂದು ಕರೆಯಲ್ಪಡುವ ಅತ್ಯಂತ ಅಪರೂಪದ ತಳಿಯ ಶ್ವಾನದ ಮಾಲೀಕ. ಈ ಶ್ವಾನದ ವಿಶೇಷತೆ ಏನೆಂದರೆ ಅದು ಸಂಪೂರ್ಣವಾಗಿ ಬೆಳೆದಾಗ ಗಾತ್ರದಲ್ಲಿ ದೊಡ್ಡದಾಗಿರುತ್ತದೆ ಮತ್ತು ಅದಕ್ಕೆ ಹೆಚ್ಚಿನ ನಿರ್ವಹಣೆ ಅಗತ್ಯವಿರುತ್ತದೆ. ಈ ಜಾತಿಗೆ ಸೇರಿದ ಶ್ವಾನಗಳು ನೀಲಿ ಅಥವಾ ನೇರಳೆ ಬಣ್ಣದ ನಾಲಿಗೆಗೆ ಪ್ರಸಿದ್ಧವಾಗಿವೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೂ ಶ್ವಾನಗಳೆಂದರೆ ಅಚ್ಚುಮೆಚ್ಚು. 15 ಬೀದಿನಾಯಿಗಳನ್ನು ದತ್ತು ಪಡೆದುಕೊಂಡು ಸಾಕುತ್ತಿದ್ದಾರೆ. ಅವರ ಮೊದಲ ಶ್ವಾನ ಪೊಮೆರೇನಿಯನ್ ಆಗಿತ್ತು. ಬಳಿಕ ಅವರು ರಿಕೊ ಹೆಸರಿನ ಗೋಲ್ಡನ್ ರಿಟ್ರೈವರ್ ಜಾತಿಗೆ ಸೇರಿದ ಶ್ವಾನವನ್ನು ಸಾಕುತ್ತಿದ್ದರು. ಬಳಿಕ ಬ್ರೂನೋ ಹೆಸರಿನ ಬೀಗಲ್ ಜಾತಿಗೆ ಸೇರಿದ ಶ್ವಾನವನ್ನು ಮನೆಗೆ ತಂದಿದ್ದಾರೆ.
ಶ್ವಾನಗಳೆಂದರೆ ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಅಚ್ಚುಮೆಚ್ಚು. ತಮ್ಮ ಶ್ವಾನಗಳ ಜೊತೆ ಆಟವಾಡುವ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡುತ್ತಿರುತ್ತಾರೆ. ಅವರು ಆಯ್ಸ್ಟನ್ ಮತ್ತು ಬೆಂಟ್ಲೆ ಎಂಬ ಶ್ವಾನಗಳನ್ನು ಹೊಂದಿದ್ದಾರೆ. ಅವುಗಳಿಗೆ ಸ್ನಾನ ಮಾಡಿಸುವುದು, ವಾಯುವಿಹಾರಕ್ಕೆ ಕರೆದುಕೊಂಡು ಹೋಗುವುದು ಮಾಡುತ್ತಿರುತ್ತಾರೆ.
ಹಿಟ್ ಮ್ಯಾನ್ ರೋಹಿತ್ ಶರ್ಮಾ ಕೂಡ ಶ್ವಾನಪ್ರಿಯರು. ಪೆಟಾ ಸಂಘಟನೆಯ ಬೆಂಬಲಿಗರೂ ಆಗಿರುವ ಅವರು ಬೀಗಲ್ ಜಾತಿಗೆ ಸೇರಿದ ಪುಟ್ಟ ಶ್ವಾನವನ್ನು ಸಾಕುತ್ತಿದ್ದಾರೆ.
ಗಾಡ್ ಆಫ್ ಕ್ರಿಕೆಟ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೂ ಶ್ವಾನಗಳೆಂದು ವಿಶೇಷ ಪ್ರೀತಿ. ಜುಲೈ 27ರಂದು ಅವರ ಮನೆಗೆ ಹೊಸ ಅತಿಥಿಯನ್ನು ಕರೆತಂದಿದ್ದಾರೆ. ಈಗಾಗಲೇ 2 ಸೇಂಟ್ ಬರ್ನಾಡ್ ಜಾತಿಗೆ ಸೇರಿದ ನಾಯಿಗಳನ್ನು ಹೊಂದಿರುವ ಸಚಿನ್ ಮತ್ತೊಂದು ಮುದ್ದಾದ ಬಿಳಿ ಶ್ವಾನವನ್ನು ಮನೆಗೆ ತಂದಿದ್ದಾರೆ.