Diabetes Remedy: ಯಾವುದೇ ಔಷಧಿ ಬೇಡ..ಬೆಳಗ್ಗೆ ಎದ್ದ ಒಡನೆ ಈ ಜ್ಯೂಸ್‌ ಕುಡಿಯಿರಿ ಸಾಕು, ಶುಗರ್‌ ಎಷ್ಟೆ ಜಾಸ್ತಿ ಇದ್ದರು ತಕ್ಷಣ ನಾರ್ಮಲ್‌ ಆಗುತ್ತೆ!

Sun, 22 Sep 2024-7:53 am,

ಮಧುಮೇಹವು ವೇಗವಾಗಿ ಬೆಳೆಯುತ್ತಿರುವ ದೀರ್ಘಕಾಲದ ಕಾಯಿಲೆಗಳಲ್ಲಿ ಒಂದಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಅಂದಾಜಿನ ಪ್ರಕಾರ, ವಿಶ್ವದ ಸುಮಾರು 422 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ.   

ಸಕ್ಕರೆ ಕಾಯಿಲೆಯಿಂದ ಪ್ರತಿ ವರ್ಷ 1.5 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಮಧುಮೇಹ ಭಾರತ ಎದುರಿಸುತ್ತಿರುವ ಸವಾಲುಗಳಲ್ಲಿ ಒಂದಾಗಿದೆ.

ನಮ್ಮ ದೇಶದಲ್ಲಿ, 20-70 ವರ್ಷ ವಯಸ್ಸಿನ ಜನಸಂಖ್ಯೆಯ 8.7% ಮಧುಮೇಹದಿಂದ ಬಳಲುತ್ತಿದ್ದಾರೆ. ಜೀವನಶೈಲಿ ಬದಲಾವಣೆ, ಕೆಟ್ಟ ಆಹಾರ ಪದ್ಧತಿ, ಒತ್ತಡ, ನಿದ್ರೆಯ ಕೊರತೆ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ಮಧುಮೇಹ ಹೆಚ್ಚಾಗುತ್ತದೆ.

ಕೆಲವು ಸಂದರ್ಭಗಳಲ್ಲಿ, ಮಧುಮೇಹದ ಲಕ್ಷಣಗಳು ತೀವ್ರ ಮಟ್ಟವನ್ನು ತಲುಪಿದ ನಂತರವೇ ಕಾಣಿಸಿಕೊಳ್ಳುತ್ತವೆ. ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಪದೇ ಪದೇ ಮೂತ್ರ ವಿಸರ್ಜನೆ, ವಿಪರೀತ ಬಾಯಾರಿಕೆ, ಹಸಿವು, ದೃಷ್ಟಿ ಮಂದವಾಗುವುದು, ಆಯಾಸ, ಸಿಡುಕುತನದಂತಹ  ದೀರ್ಘಕಾಲ ಲಕ್ಷಣಗಳು ಕಂಡುಬರುತ್ತವೆ.

ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರಿಳಿತದ ಕಾರಣ, ಮಧುಮೇಹ ರೋಗಿಗಳು ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಎದುರಿಸುತ್ತಾರೆ. ಮಧುಮೇಹವನ್ನು ನಿಯಂತ್ರಿಸದಿದ್ದರೆ, ಮೂತ್ರಪಿಂಡ, ಹೃದಯ, ಶ್ವಾಸಕೋಶ ಮತ್ತು ಕಣ್ಣಿನ ಸಮಸ್ಯೆಗಳು ಎದುರಾಗುತ್ತದೆ. 

ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇನ್ಸುಲಿನ್ ಔಷಧಿಗಳನ್ನು ಪ್ರತಿದಿನ ಬಳಸಬೇಕು. ಕೆಲವು ಗಿಡಮೂಲಿಕೆಗಳು ನೈಸರ್ಗಿಕ ಇನ್ಸುಲಿನ್ ಆಗಿ ಕಾರ್ಯನಿರ್ವಹಿಸುತ್ತವೆ ಮತ್ತು ನಿಮ್ಮ ಆರೋಗ್ಯವನ್ನು ರಕ್ಷಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.

ಅಮೃತಬಳ್ಳಿ ಎಲೆ ಮಧುಮೇಹ ರೋಗಿಗಳಿಗೆ ಔಷಧಿಯಂತೆ ಕೆಲಸ ಮಾಡುತ್ತದೆ ಎನ್ನುತ್ತಾರೆ ತಜ್ಞರು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಆಂಟಿ-ಹೈಪರ್ಗ್ಲೈಸೆಮಿಕ್ ಗುಣಲಕ್ಷಣಗಳನ್ನು ಈ ಎಲೆಗಳು ಹೊಂದಿದ್ದು. ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಇವು ಸಹಾಯ ಮಾಡುತ್ತದೆ. ಪ್ರತಿದಿನ ಈ ಎಲೆಯ ರಸವನ್ನು ಕಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಶುಗರ್‌ ಕಂಟ್ರೋಲ್‌ನಲ್ಲಿರುತ್ತದೆ.

ನುಗ್ಗೇಸೊಪ್ಪು ಕೂಡ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಈ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ನುಗ್ಗೆ ಎಲೆಗಳನ್ನು ಒಣಗಿಸಿ ಅದನ್ನು ಮಿಕ್ಸರ್‌ ಜಾರಿಗೆ ಹಾಕಿ ಪುಡಿ ಮಾಡಿ ಇಡಿ ಚಹಾಕ್ಕೆ ಈ ಪುಡಿಯನ್ನು ಬೆರಸಿ ಕುಡಿಯುವದರಿಂದ ನಿಮ್ಮ ಶುಗರ್‌ ಲೆವೆಲ್‌ ಕಂಟ್ರೋಲ್‌ನಲ್ಲಿರುತ್ತದೆ.

ಬೇವಿನ ಎಲೆಗಳು ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಬೇವಿನ ಎಲೆಯು ಹೈಪೊಗ್ಲಿಸಿಮಿಕ್ ಆಗಿ ಕಾರ್ಯನಿರ್ವಹಿಸುತ್ತದೆ, ಈ ಕಾರಣದಿಂದಾಗಿ, ಬೇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೇವಿನ ಎಲೆ ಮಧುಮೇಹ ರೋಗಿಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ. ಬೇವಿನ ಎಲೆಯ ರಸವನ್ನು ಕುಡಿಯುವುದರಿಂದ ಅಥವಾ ಬೇವಿನ ಎಲೆಯನ್ನು ಜಗಿಯುವುದರಿಂದ ಬ್ಲಡ್‌ ಶುಗರ್‌ ಅನ್ನು ಕಂಟ್ರೋಲ್‌ನಲ್ಲಿಡಬಹುದು.

ಅಲೋವೆರಾ ಮಧುಮೇಹ ರೋಗಿಗಳ ಆರೋಗ್ಯಕ್ಕೆ ಒಳ್ಳೆಯದು. ಅಲೋದಲ್ಲಿ ಅಸೆಮನ್ನನ್ ಎಂಬ ಅಂಶವಿದೆ. ಇದು ಹೈಪೊಗ್ಲಿಸಿಮಿಕ್ ಗ್ಲೂಕೋಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲೋವೆರಾವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಮಧುಮೇಹಿಗಳು ಅಲೋವೆರಾ ಜ್ಯೂಸ್ ಕುಡಿಯುವುದು ಒಳ್ಳೆಯದು.

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link