ಗೀಸರ್ ಸ್ಪೋಟಕ್ಕೆ ಕಾರಣವಾಗುತ್ತದೆ ನೀವು ಮಾಡುವ ಈ ತಪ್ಪುಗಳು .!

Mon, 19 Dec 2022-9:25 am,

ಜನರು ಅಗತ್ಯವಿರುವ ಸಮಯದಲ್ಲಿ ಗೀಸರ್ ಅನ್ನು ಆನ್ ಮಾಡುತ್ತಾರೆ. ಆದರೆ ಕೆಲಸ ಮುಗಿದ ನಂತರ ಗೀಸರ್ ಅನ್ನು ಆಫ್ ಮಾಡಲು ಮರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಸ್ವಯಂಚಾಲಿತವಾಗಿ  ಆಫ್ ಹೊಂದಿರುವ ಗೀಸರ್‌ಗಳು ಬರಲಾರಂಭಿಸಿವೆ. ಆದರೆ ಈಗಲೂ ಹಳೆಯ ಗೀಸರ್ ಬಳಸುವವರಿಗೆ ಈ ಸೌಲಭ್ಯ ಲಭ್ಯ ಇರುವುದಿಲ್ಲ. ಗೀಸರ್ ಬಹಳ ಸಮಯದವರೆಗೆ ಆನ್ ಆಗಿದ್ದರೆ, ಗೀಸರ್‌ನಲ್ಲಿ ಸ್ಫೋಟದ ಸಂಭವ ಹೆಚ್ಚು.   

ಹೊಸ ಗೀಸರ್ ಖರೀದಿಸಿ ತರುವಾಗ, ಕಂಪನಿ ಯವರು ಬಂದು ಇನ್ಸ್ಟಾಲ್ ಮಾಡುವುದು ತಡವಾಗುತ್ತದೆ ಎನ್ನುವ ಕಾರಣಕ್ಕೋ, ಅಥವಾ ದುಡ್ಡು ಉಳಿಸುವ ಕಾರಣಕ್ಕೋ ಕೆಲವರು ತಾವಾಗಿಯೇ ಹೀಸರ್ ಅಳವಡಿಸಲು ಮುಂದಾಗುತ್ತಾರೆ.  ಆದರೆ ಹೀಗೆ ಮಾಡುವುದು ಮಹಾ ತಪ್ಪು. ಯಾವಾಗಲೂ ಗೀಸರ್ ಫಿಟ್ ಮಾಡಲು ಎಂಜಿನಿಯರ್ ಸಹಾಯವನ್ನೇ ಪಡೆಯಿರಿ. 

ವಿದ್ಯುತ್ ಗೀಸರ್ ಗಳು ದುಬಾರಿಯಾಗಿ ಪರಿಣಮಿಸುತ್ತವೆ ಎನ್ನುವ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಜನ ಗ್ಯಾಸ್ ಗೀಸರ್ ನಟ್ಟ ಮುಖ ಮಾಡುತ್ತಾರೆ.   ಈ ಗೀಸರ್‌ಗಳು ಇಂಗಾಲದ ಡೈಆಕ್ಸೈಡ್ ಅನ್ನು ಉತ್ಪಾದಿಸುವ ಬ್ಯುಟೇನ್ ಮತ್ತು ಪ್ರೋಪೇನ್ ಎಂಬ ಅನಿಲವನ್ನು ಹೊಂದಿರುತ್ತವೆ. ಸ್ನಾನದ ಮನೆಯಲ್ಲಿ ಗ್ಯಾಸ್ ಗೀಸರ್ ಅನ್ನು ಹಾಕಿದ್ದಾರೆ ಸ್ನಾನ ಮಾಡುವಾಗ ಎಕ್ಸಾಸ್ಟ್ ಫ್ಯಾನ್ ಅನ್ನು  ಆಂ ಮಾಡಿಕೊಳ್ಳಿ.   

 ಬಾತ್ ರೂಂನಲ್ಲಿ ಗೀಸರ್ ಅನ್ನು ಫಿಟ್ ಮಾಡುವಾಗ ಜನರು ಸಾಮಾನ್ಯವಾಗಿ ತಪ್ಪುಗಳನ್ನು ಮಾಡುತ್ತಾರೆ. ಅದೇನೆಂದರೆ ಗೀಸರ್ ಅನ್ನು ಕೆಳಗೆ ಫಿಟ್ ಮಾಡುತ್ತಾರೆ. ಮನೆಯಲ್ಲಿ ಮಕ್ಕಳಿದ್ದರೆ, ಈ ತಪ್ಪು ಮಾಡಲೇ ಬೇಡಿ.  

ಅಗ್ಗದ ಬೆಲೆಗೆ  ಸಿಗುತ್ತದೆ ಎನ್ನುವ ಕಾರಣಕ್ಕೆ ಜನ ಲೋಕಲ್ ಗೀಸರ್‌ಗಳನ್ನು ಖರೀದಿಸುತ್ತಾರೆ. ಇವುಗಳಲ್ಲಿ ISI ಗುರುತು ಇರುವುದಿಲ್ಲ. ಗೀಸರ್ ಖರೀದಿಸಬೇಕಾದರೆ, ISI ಮಾರ್ಕ್ ಹೊಂದಿರುವ ಗೀಸರ್ ಅನ್ನು ಮಾತ್ರ ಖರೀದಿಸಿ. ಲೋಕರ್ ಗೀಸರ್‌ಗಳು ಕಡಿಮೆ ಸ್ಟಾರ್ ರೇಟಿಂಗ್‌ನೊಂದಿಗೆ ಬರುತ್ತವೆ. ಈ ಕಾರಣದಿಂದಾಗಿ ವಿದ್ಯುತ್ ಬಳಕೆ ಹೆಚ್ಚಾಗಿರುತ್ತದೆ ಮಾತ್ರವಲ್ಲ ಅವುಗಳು ಶಾಕ್‌ಪ್ರೂಫ್ ಕೂಡಾ ಆಗಿರುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link