ಬೈಕ್ ಖರೀದಿಸಬೇಕೆ? ಶೀಘ್ರದಲ್ಲಿಯೇ ಮಾರುಕಟ್ಟೆಗೆ ಎಂಟ್ರಿ ನೀಡಲಿವೆ ಈ ನೂತನ ಬೈಕ್ ಗಳು

Mon, 16 Nov 2020-3:55 pm,

ಹೀರೋ ಮೊಟೊಕಾರ್ಪ್ ಡಿಸೆಂಬರ್‌ನಲ್ಲಿ ಹೀರೋ ಎಕ್ಸ್‌ಪಲ್ಸ್ 200 ಟಿ ಅನ್ನು ಬಿಡುಗಡೆ ಮಾಡಬಹುದು. ಇದು 199 ಸಿಸಿ ಆಯಲ್ ಕೋಲ್ಡ್ ಎಂಜಿನ್ ಹೊಂದಿದೆ. ಈ ಎಂಜಿನ್ 18 ಬಿಎಚ್‌ಪಿ ಶಕ್ತಿಯನ್ನು ಮತ್ತು 16 ಎನ್‌ಎಸ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೀರೋನ ಈ ಬೈಕ್‌ನ ಬೆಲೆ ಒಂದು ಲಕ್ಷದವರೆಗೆ ಇರುವ ಸಾಧ್ಯತೆ ಇದೆ.

ಕೆಟಿಎಂ ತನ್ನ ಹೊಸ ಬೈಕು 250 ಅಡ್ವೆಂಚರ್ ಮುಂದಿನ ತಿಂಗಳು ಬಿಡುಗಡೆ ಮಾಡಬಹುದು. ಈ ಬೈಕು ವಿಶೇಷವಾಗಿ ಸಾಹಸಗಳನ್ನು ಇಷ್ಟಪಡುವವರಿಗೆ ಬಿಡುಗಡೆ ಮಾಡಲಾಗುತ್ತಿದೆ. ಈ ಬೈಕ್‌ನಲ್ಲಿ ಕಂಪನಿಯು 248 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನೀಡಿದೆ. ಇದು 5.0-ಇಂಚಿನ ಕಪ್ಪು ಮತ್ತು ಬಿಳಿ ಟಿಎಫ್‌ಟಿ ಪ್ರದರ್ಶನವನ್ನು ಹೊಂದಿದೆ. ಇದು ಇತ್ತೀಚೆಗೆ ಪರೀಕ್ಷೆಯ ಸಮಯದಲ್ಲಿ ಕಂಡುಬಂದಿದೆ. ಕೆಟಿಎಂ 250 ಅಡ್ವೆಂಚರ್ ಬೆಲೆ 2.5 ಲಕ್ಷ ರೂ. ಇರುವ ಸಾಧ್ಯತೆ ಇದೆ.

ಹೋಂಡಾ ತನ್ನ ಹೊಸ ಐಷಾರಾಮಿ ಬೈಕು ಸಿಬಿಆರ್ 300 ಆರ್ ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಕಂಪನಿಯು ಮುಂದಿನ ವರ್ಷದ ಆರಂಭದಲ್ಲಿ ಈ ಬೈಕು ಬಿಡುಗಡೆ ಮಾಡಬಹುದು. ಹೋಂಡಾದ ಬೈಕ್‌ನಲ್ಲಿ 286 ಸಿಸಿ ಎಂಜಿನ್ ಇದ್ದು, ಇದು 30.4 ಬಿಎಚ್‌ಪಿ ಶಕ್ತಿ ಮತ್ತು 27.1 ಎನ್‌ಎಂ ಟಾರ್ಕ್  ಉತ್ಪಾದಿಸುತ್ತದೆ. ಈ ಬೈಕ್‌ನ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ 2-2.25 ಲಕ್ಷರೂ ಇರುವ ಸಾಧ್ಯತೆ ಇದೆ.

ಈ ಬೈಕುಗಳಲ್ಲದೆ, ಟಿವಿಎಸ್ ತನ್ನ ಜನಪ್ರಿಯ ಬೈಕ್ ವಿಕ್ಟರ್ ಅನ್ನು ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಬೈಕು ಬಿಎಸ್ 6 ನಾರ್ಮ್‌ಗಳಿಗೆ ಅನುಗುಣವಾಗಿರುತ್ತದೆ. ಟಿವಿಎಸ್ ವಿಕ್ಟರ್ 109.7 ಸಿಸಿ ಎಂಜಿನ್ ಹೊಂದಿದ್ದು, ಇದು 9.46 ಶಕ್ತಿಯನ್ನು ಮತ್ತು 9.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್‌ನ ಬೆಲೆ 56000 ರಿಂದ 60000 ರೂಪಾಯಿಗಳಾಗಿರಬಹುದು.

ಈ ಬೈಕ್‌ಗಳ ಹೊರತಾಗಿ ಹೊಸ ಸ್ಕೂಟರ್ ಕೂಡ ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಏಪ್ರಿಲಿಯಾ ಶೀಘ್ರದಲ್ಲೇ ತನ್ನ ಸ್ಕೂಟರ್ ಎಸ್‌ಎಕ್ಸ್‌ಆರ್ 125 ಅನ್ನು ಬಿಡುಗಡೆ ಮಾಡಲಿದೆ. ಇದು 125 ಸಿಸಿ ಎಂಜಿನ್ ಹೊಂದಿದ್ದು, ಇದು 9.4 ಬಿಎಚ್‌ಪಿ ಶಕ್ತಿ ಮತ್ತು 8.2 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಸ್ಕೂಟರ್‌ನ ಬೆಲೆ ಸುಮಾರು ಒಂದು ಲಕ್ಷ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link