ಕಷ್ಟ ಕೊಡುವಾತನೇ ಬೆಳಗುತ್ತಾನೆ ಈ ರಾಶಿಯವರ ಜೀವನ!ದೀಪಾವಳಿ ನಂತರ ಶನಿ ಮಹಾತ್ಮನ ಕೃಪಾ ದೃಷ್ಟಿ!ಇನ್ನೇನಿದ್ದರೂ ನೆಮ್ಮದಿ, ಐಶಾರಾಮದ ಜೀವನ
ಸದ್ಯ ವಕ್ರ ನಡೆಯಲ್ಲಿರುವ ಶನಿದೇವ ದೀಪಾವಳಿ ನಂತರ ಮತ್ತೆ ನೇರ ನಡೆಗೆ ಮರಳುತ್ತಾನೆ. ಇದು ಅತ್ಯಂತ ದೊಡ್ಡ ಜ್ಯೋತಿಷ್ಯ ಘಟನೆ ಎಂದು ಪರಿಗಣಿಸಲಾಗಿದೆ.
ಶನಿ ಗ್ರಹದ ನೇರ ನಡೆ ಕೆಲವು ರಾಶಿಯವರ ಜೀವನದಲ್ಲಿ ರಚನಾತ್ಮಕ ತಿರುವುಗಳನ್ನು ತರುತ್ತದೆ.ಜೀವನದ ಸಂತೋಷ ಹೆಚ್ಚುತ್ತದೆ.ಹಣಕಾಸಿನ ಬಾಧೆ ನೀಗುತ್ತದೆ.
ಕರ್ಕಾಟಕ: ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ವೇತನ ಹೆಚ್ಚಳ ಮತ್ತು ಬಡ್ತಿ ಸಿಗುತ್ತದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ. ಇಲ್ಲಿಯವರೆಗೆ ಮಾನಸಿಕವಾಗಿ ಅನುಭವಿಸುತ್ತಿದ್ದ ನೋವು ಕಡಿಮೆಯಾಗಲಿದೆ.
ವೃಶ್ಚಿಕ: ವೃಶ್ಚಿಕ ರಾಶಿಯವರ ಆತ್ಮಸ್ಥೈರ್ಯ ಹೆಚ್ಚಾಗಲಿದೆ. ಎಲ್ಲಾ ಕೆಲಸಗಳನ್ನು ಪೂರ್ಣ ಬದ್ಧತೆಯಿಂದ ಮಾಡುವಿರಿ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಬಡ್ತಿ ದೊರೆಯಲಿದೆ. ಹಳೆಯ ಸಾಲಗಳಿಂದ ಮುಕ್ತಿ ಸಿಗುವುದು.
ಮಕರ: ಮಕರ ರಾಶಿಯವರ ಮೇಲೆ ಶನಿದೇವನ ವಿಶೇಷ ಕೃಪೆ ಇರುತ್ತದೆ. ವ್ಯಾಪಾರದಲ್ಲಿ ಲಾಭ ಹೆಚ್ಚುತ್ತಾ ಹೋಗುವುದು. ಮಾಸಿಕ ಆದಾಯ ಹೆಚ್ಚಾಗಲಿದೆ.ಷೇರು ಮಾರುಕಟ್ಟೆಯ ಹೂಡಿಕೆಯಿಂದ ಲಾಭವನ್ನು ಪಡೆಯುತ್ತೀರಿ.ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.
ಕುಂಭ: ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳು ಯಶಸ್ವಿಯಾಗುತ್ತಾರೆ. ಜೀವನದಲ್ಲಿ ಶಾಂತಿ ಮತ್ತು ಸಂತೋಷ ನೆಲೆಯಾಗುತ್ತದೆ. ಆರೋಗ್ಯ ಸುಧಾರಿಸಲಿದೆ.
ಮೀನ: ಮೀನ ರಾಶಿಯವರು ಶಿಸ್ತುಬದ್ಧ ಜೀವನ ನಡೆಸುತ್ತಾರೆ. ಅವರು ಕಷ್ಟಪಟ್ಟು ಕೆಲಸ ಮಾಡಿ ತಮ್ಮ ಗುರಿಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ. ಸರ್ಕಾರಿ ನೌಕರರು ವೇತನ ಹೆಚ್ಚಳದೊಂದಿಗೆ ವರ್ಗಾವಣೆ ಪಡೆಯಲಿದ್ದಾರೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷ್ಯ, ಪಂಚಾಂಗ, ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ZEE KANNADA NEWS ಅನುಮೋದಿಸುವುದಿಲ್ಲ.