Lucky Animals: ಈ ಸಾಕುಪ್ರಾಣಿಗಳು ಸುಖ-ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತವೆ..!
ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಪ್ರಾಣಿಗಳನ್ನು ಮನೆಯಲ್ಲಿ ಸಾಕುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ವ್ಯಕ್ತಿಯ ಭವಿಷ್ಯವನ್ನು ಸಹ ಬದಲಾಯಿಸಬಹುದು. ವಾಸ್ತವವಾಗಿ ಈ ಪ್ರಾಣಿಗಳಲ್ಲಿ ವಿವಿಧ ದೇವ-ದೇವತೆಗಳು ವಾಸಿಸುತ್ತಾರೆಂಬ ನಂಬಿಕೆಯಿದೆ. ಆ ದೇವರು ವ್ಯಕ್ತಿಯ ಭವಿಷ್ಯವನ್ನೇ ಬದಲಾಯಿಸುತ್ತವಂತೆ. ಈ ಪ್ರಾಣಿಗಳನ್ನು ಇಷ್ಟವಿದ್ದರೆ ಸಾಕಬಹುದು, ಇಲ್ಲದಿದ್ರೆ ಅವುಗಳ ಚಿತ್ರಗಳನ್ನಾದರೂ ಮನೆಯಲ್ಲಿ ಹಾಕಬಹುದು. ಈ ಪ್ರಾಣಿಗಳನ್ನು ಸಾಕುವುದರಿಂದ ವ್ಯಕ್ತಿಯ ಅದೃಷ್ಟವು ಹೆಚ್ಚಾಗುತ್ತಿದ್ದರೆ, ಅವುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಪ್ರಾಣಿಗಳ ಬಗ್ಗೆ ತಿಳಿಯಿರಿ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮೊಲವನ್ನು ಸಾಕುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮೊಲವು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವ ಮೂಲಕ ಧನಾತ್ಮಕ ಶಕ್ತಿಯನ್ನು ಹರಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಮೊಲವು ಕುಟುಂಬ ಸದಸ್ಯರನ್ನು ಒಟ್ಟಿಗಿರುವಂತೆ ಮಾಡುತ್ತದೆ. ಇದು ಕುಟುಂಬ ಸದಸ್ಯರ ನಡುವೆ ಪ್ರೀತಿ ಉಳಿಯಲು ಕಾರಣವಾಗಿದೆ.
ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಮೀನು ಇಡುವುದು ಒಳ್ಳೆಯದು. ವಾಸ್ತವವಾಗಿ ಮೀನು ವಿಷ್ಣುವಿನ ಮತ್ಸ್ಯ ಅವತಾರದೊಂದಿಗೆ ಸಂಬಂಧಿಸಿದೆ. ಆದ್ದರಿಂದ ಹಿಂದೂ ಧರ್ಮದಲ್ಲಿ ಇದನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಮೀನು ಸಾಕಣೆ ಇಡೀ ಪರಿಸರಕ್ಕೆ ಧನಾತ್ಮಕ ಶಕ್ತಿಯನ್ನು ತರುತ್ತದೆ. ಅಷ್ಟೇ ಅಲ್ಲ ಮನೆಯಲ್ಲಿ ಮೀನು ಇದ್ದರೆ ಅದು ಎಲ್ಲಾ ತೊಂದರೆಗಳನ್ನು ತನ್ನ ಮೇಲೆ ತೆಗೆದುಕೊಳ್ಳುತ್ತದಂತೆ. ಆದ್ದರಿಂದ ಮನೆಯಲ್ಲಿ ಕಪ್ಪು ಮತ್ತು ಚಿನ್ನದ ಮೀನುಗಳನ್ನು ಇಡುವುದು ಮುಖ್ಯವಾಗಿದೆ.
ಮನೆಯಲ್ಲಿ ಆಮೆಯನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಜೀವಂತ ಆಮೆ ಬದಲು ನೀವು ಹಿತ್ತಾಳೆಯ ಆಮೆಯನ್ನೂ ಸಹ ಮನೆಯಲ್ಲಿ ಇಡುವುದು ಒಳ್ಳೆಯದು. ವಾಸ್ತವವಾಗಿ ಆಮೆ ಸಂಪತ್ತು ಮತ್ತು ಸಮೃದ್ಧಿಯೊಂದಿಗೆ ಸಂಬಂಧಿಸಿದೆ. ಅಷ್ಟೇ ಅಲ್ಲ ಆಮೆಯು ಯಾವುದೇ ಒಬ್ಬ ವ್ಯಕ್ತಿಗೆ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗಲು ಸಹಾಯ ಮಾಡುತ್ತದೆ.
ಕುದುರೆಯನ್ನು ಯಶಸ್ಸಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ನೀವು ಮನೆಯಲ್ಲಿ ಕುದುರೆಯ ಚಿತ್ರವನ್ನು ಸಹ ಹಾಕಬಹುದು. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕುದುರೆಯ ಪ್ರತಿಮೆ ಅಥವಾ ಚಿತ್ರವನ್ನು ಇರಿಸುವ ಮೂಲಕ ಗುರಿಯನ್ನು ಸಾಧಿಸಲಾಗುತ್ತದೆ.